News Kannada
Tuesday, September 27 2022

ಮೈಸೂರು

ಹುಣಸೂರು ವ್ಯಾಪ್ತಿಯಲ್ಲಿ ಯೂರಿಯಾಕ್ಕಾಗಿ ಪರದಾಟ! - 1 min read

Photo Credit :

ಹುಣಸೂರು ವ್ಯಾಪ್ತಿಯಲ್ಲಿ ಯೂರಿಯಾಕ್ಕಾಗಿ ಪರದಾಟ!

ಮೈಸೂರು: ಸರ್ಕಾರ ಯೂರಿಯಾ ಗೊಬ್ಬರದ ಅಭಾವ ಇಲ್ಲ ಎಂದು ಹೇಳುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಯೂರಿಯಾ ಗೊಬ್ಬರ ಸಮರ್ಪಕವಾಗಿ ರೈತರಿಗೆ ಸಿಗದೆ ಪರದಾಡುತ್ತಿರುವುದು ಕಂಡು ಬಂದಿದೆ.

ಈಗಾಗಲೇ ಯೂರಿಯಾ ಗೊಬ್ಬರ ಅಭಾವ ಸೃಷ್ಠಿಯಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಗೊಬ್ಬರ ಸಿಗದೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ಮೈಸೂರು ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶದಲ್ಲಿ ಯೂರಿಯಾ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು ಅದರಲ್ಲೂ ಹುಣಸೂರು ತಾಲೂಕಿನ ಹನಗೋಡು ಭಾಗದಲ್ಲಿ ಕಳೆದ ಎರಡು ವಾರಗಳಿಂದ ಉತ್ತಮ ಮಳೆಯಾಗುತ್ತಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬಿತ್ತನೆ ಕಾರ್ಯ ಮುಗಿಸಿ ತಾವು ಹಾಕಿರುವ ಬೆಳೆಗಳಿಗೆ ಯೂರಿಯಾ ಗೊಬ್ಬರ ಹಾಕಲು ಸಿದ್ಧರಾಗಿದ್ದಾರೆ.

ಆದರೆ ಸರ್ಕಾರದ ಸಬ್ಸಿಡಿ ದರದಲ್ಲಿ ಸಹಕಾರ ಸಂಘಗಳ ಮೂಲಕ ಯೂರಿಯಾ ಖರೀದಿಸುತ್ತಿದ್ದ ರೈತರು ಸಹಕಾರ ಸಂಘಗಳಿಗೆ ಎಡತಾಕುವಂತಾಗಿದೆ. ಏಕೆಂದರೆ ಸಹಕಾರ ಸಂಘಗಳಲ್ಲಿ ರೈತರಿಗೆ ಅವಶ್ಯಕತೆ ಇರುವಷ್ಟು ರಸಗೊಬ್ಬರ ದೊರಕುತ್ತಿಲ್ಲ. ಇದರಿಂದ ಹೆಚ್ಚಿನ ದರ ನೀಡಿ ಖಾಸಗಿ ಅಂಗಡಿಗಳಲ್ಲಿ ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅಚ್ಚರಿ ಹುಟ್ಟಿಸಿದೆ.

ಕಳೆದ ಒಂದು ವಾರದಿಂದಲೂ ರೈತರು ಯೂರಿಯಾ ರಸಗೊಬ್ಬರಕ್ಕಾಗಿ ಖಾಸಗಿ ಗೊಬ್ಬರ  ಅಂಗಡಿಗೆ ತೆರಳುತ್ತಿದ್ದು ಅಲ್ಲಿ ಯೂರಿಯಾ ರಸಗೊಬ್ಬರ ಲಭ್ಯವಿಲ್ಲ ಎಂಬ ಉತ್ತರ ಮಾಲೀಕರಿಂದ ಬರುತ್ತಿದೆ ಎಂಬುದು ರೈತರ ಆರೋಪವಾಗಿದೆ.

ಮಳೆ ಆರಂಭವಾಗುವ ಮುನ್ನ ಎಲ್ಲ ಖಾಸಗಿ ಅಂಗಡಿಗಳಲ್ಲೂ ಯೂರಿಯಾ ರಸ ಗೊಬ್ಬರ ದೊರೆಯುತ್ತಿತ್ತಾದರೂ ಇದೀಗ ಮಳೆ ಪ್ರಾರಂಭವಾಗಿ ಹನಗೋಡು ಅಣೆಕಟ್ಟು ಅಚ್ಚುಕಟ್ಟುದಾರು, ಹೈರಿಗೆ, ನೇರಳಕುಪ್ಪೆ, ತಾವರೆಕೆರೆ ಕಚುವಿನಹಳ್ಳಿ, ಮುದಗನೂರು, ದೊಡ್ಡಹೆಜ್ಜೂರು ಸೇರಿದಂತೆ ಅನೇಕ ಕೆರೆ-ಕಟ್ಟೆಗಳು ತುಂಬಿ, ಭತ್ತದ ನಾಟಿ ಕಾರ್ಯ ಮುಗಿದಿದ್ದು, ಈಗ ಕಳೆ ಕಿತ್ತು ಯೂರಿಯಾ ರಸಗೊಬ್ಬರ ನೀಡಬೇಕಾಗಿದ್ದು, ಇದಲ್ಲದೆ ಹನಗೋಡು ಭಾಗದ ಖುಷ್ಕಿ ಜಮೀನಿನಲ್ಲಿ ಮುಂಗಾರು ಬೆಳೆಗಳಾದ ತಂಬಾಕು, ಮುಸುಕಿನಜೋಳ, ಎಳ್ಳು, ಮರಗೆಣಸು,  ಸೇರಿದಂತೆ ಇತರೆ ಬೆಳೆಗಳನ್ನು ಕಟಾವು ಮಾಡಿ ಈಗ ಹಿಂಗಾರು ಬೆಳೆಯಾಗಿ ರಾಗಿ ಬಿತ್ತನೆ ಮಾಡಿದ್ದಾರೆ.

ಈ ಎರಡು ಬೆಳೆಗಳಿಗೆ ಯೂರಿಯ ರಸ ಗೊಬ್ಬರ ತುಂಬಾ ಅತ್ಯಗತ್ಯವಾಗಿದ್ದು, ಈಗ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆ ಕೆಲ ಖಾಸಗಿ ವ್ಯಾಪಾರಿಗಳು ಯೂರಿಯಾವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಒಂದು ಚೀಲ(50ಕೆಜಿ) ಯೂರಿಯಾದ ಬೆಲೆ 300ರೂ ಇದ್ದು, ಕಾಳಸಂತೆಯಲ್ಲಿ 400ರಿಂದ 450ರೂವರೆಗೆ ಮಾರಾಟವಾಗುತ್ತಿದೆ. ಆದರೆ ಹೆಚ್ಚಿನ ಬೆಲೆ ನೀಡಿದರೂ ಎಲ್ಲ ರೈತರಿಗೂ ಲಭಿಸುತ್ತಿಲ್ಲ. ಕೆಲ ಖಾಸಗಿ ವ್ಯಾಪಾರಿಗಳು ತಮಗೆ ಬೇಕಾದಂತಹ ಕೆಲವೇ ಕೆಲವು ರೈತರಿಗೆ ಕದ್ದು ಮುಚ್ಚಿ ವಿತರಿಸುತ್ತಿದ್ದಾರೆ ಎಂಬ ಆಕ್ರೋಶವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಈ ಕುರಿತಂತೆ ಸ್ಪಷ್ಟನೆ ನೀಡಿರುವ ಹನಗೋಡು ಸಹಾಯಕ ಕೃಷಿ ಅಧಿಕಾರಿ ಯಾದವ್ ಬಾಬು ಅವರು, ಹುಣಸೂರು ತಾಲೂಕಿನಲ್ಲಿ ಯೂರಿಯ ಗೊಬ್ಬರಕ್ಕೆ ಕೊರತೆಯಿಲ್ಲ. ಮೈಸೂರಿನ ಗೊಬ್ಬರ ಮಾರಾಟ ಮಂಡಳಿಯಲ್ಲಿ ಅವಶ್ಯಕತೆ ಇರುವಷ್ಟು ಯೂರಿಯ ದಾಸ್ತಾನು ಇದೆ. ಆದರೆ ದಾಸ್ತಾನು ಇರುವ ಯೂರಿಯಾ ಬೇವು ಲೇಪಿತ ದಪ್ಪಕಾಳುಗಳಿಂದ ಕೂಡಿದೆ. ಆದರೆ ರೈತರಿಗೆ ಸಣ್ಣಕಾಳಿನ ಯೂರಿಯಕ್ಕೆ ಬೇಡಿಕೆ ಇರುವುದರಿಂದ  ಮಾರಾಟಗಾರರು ದಾಸ್ತಾನು ಮಾಡಲು ಸ್ವಲ್ಪದಿನ ತಡಮಾಡುತ್ತಿದ್ದಾರೆ. ಕೂಡಲೇ ರಸಗೊಬ್ಬರ ಪೂರೈಸಲು ಕ್ರಮವಹಿಸಲಾಗುವ ಭರವಸೆ ನೀಡಿದ್ದಾರೆ.

See also  2 ಸಾವಿರ ಮಕ್ಕಳಿಂದ ವಿಶೇಷವಾಗಿ 83ನೇ ನುಡಿ ಜಾತ್ರೆಗೆ ಪ್ರಚಾರ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು