News Kannada
Monday, October 03 2022

ಮೈಸೂರು

ಬಿಡುಗಡೆಗೆ ಸಿದ್ಧವಾದ ಮಂಡ್ಯ ಚುನಾವಣೆಯ ಕೃತಿ “ಮತಭಿಕ್ಷೆ’’ - 1 min read

Photo Credit :

ಬಿಡುಗಡೆಗೆ ಸಿದ್ಧವಾದ ಮಂಡ್ಯ ಚುನಾವಣೆಯ ಕೃತಿ ``ಮತಭಿಕ್ಷೆ’’

ಮೈಸೂರು: 2019ರಲ್ಲಿ ನಡೆದ ಮಂಡ್ಯ ಲೋಕಸಭೆಯ ರೋಚಕ ಚುನಾವಣೆ ಕುರಿತು ಪುಸ್ತಕ “ಮತಭಿಕ್ಷೆ, ದಿ ಅನ್‍ಟೋಲ್ಡ್ ಸ್ಟೋರಿ’’ ಎಂಬ ನೂತನ ಕೃತಿ ಶೀಘ್ರ ಬಿಡುಗಡೆಯಾಗಲಿದೆ.

ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಈ ಕೃತಿಯನ್ನು ಬರೆದಿದ್ದಾರೆ. ಇದು ಅವರ 25ನೇ ಕೃತಿ. ಇಲ್ಲಿವರೆಗೆ ನಡೆದ ಚುನಾವಣೆಗಳಲ್ಲಿ 2019ರಲ್ಲಿ ನಡೆದ ಮಂಡ್ಯಲೋಕಸಭಾ ಚುನಾವಣೆ ವಿಭಿನ್ನವಾಗಿತ್ತು. ಇಡಿ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯ ಒಳನೋಟಗಳನ್ನು ಕೃತಿಯಲ್ಲಿ ತೆರೆದಿಡಲಾಗಿದೆ. ರಾಜಕೀಯ ವಿಶ್ಲೇಷಣೆಯಿಲ್ಲದೆ, ಯಾವ ಪಕ್ಷ, ನಾಯಕರ ಪರ ಅಥವಾ ವಿರೋಧ ಇಲ್ಲದೆ ಅಂದಿನ ಹೇಳಲಾಗದ ಸತ್ಯಗಳನ್ನು ಹೊರಗೆಡವಿದ್ದಾರೆ.

“ಎಲ್ಲಿದ್ದೀಯಪ್ಪಾ?’’, “ಟೂರಿಂಗ್ ಟಾಕೀಸ್’’, “ಕಳ್ಳೆತ್ತು’, “ಜೋಡೆತ್ತು’’ ಮುಂತಾದ ಪದಪುಂಜಗಳೊಂದಿಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯೊಬ್ಬರ ಪುತ್ರನನ್ನು “ಏಕಾಂಗಿ’’ ಮಹಿಳೆ ಸೋಲಿಸಿರುವುದು ಇತಿಹಾಸ. ಅಂದಿನ ಹಲವು ಘಟನೆಗಳು ಮರೆತುಹೋಗದೆ ಇತಿಹಾಸದಲ್ಲಿ ದಾಖಲಾಗಬೇಕು. ಪತ್ರಿಕೋದ್ಯಮ ಹಾಗೂ ಹಾಗೂ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಇದೊಂದು ಅಧ್ಯಯನ ಗ್ರಂಥವಾಗಬೇಕು ಎನ್ನುವ ಉದ್ದೇಶದಿಂದ ರಚಿಸಲಾಗಿದೆ. ಹಲವು ಸ್ವಾರಸ್ಯಕರ ಪ್ರಸಂಗಗಳೊಂದಿಗೆ ವಿಭಿನ್ನ ಶೈಲಿಯಲ್ಲಿ ಅಂದಿನ ಘಟನೆಗಳನ್ನು ಕಟ್ಟಿಕೊಡಲಾಗಿದೆ.

ಮಾನಸ ಅವರ ಖ್ಯಾತ “ತನು ಮನು’’ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಮೈಸೂರಿನಲ್ಲಿ ಮುಂದಿನ ವಾರ ನಡೆಯುವ ಕಾರ್ಯಕ್ರಮದಲ್ಲಿ ಈ ಕೃತಿ ಬಿಡುಗಡೆಯಾಗಲಿದೆ.

See also  ಮಂಡ್ಯದ ಬ್ಯಾಂಕ್‍ನಿಂದ 15 ಲಕ್ಷ ಎಗರಿಸಿದರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು