News Kannada
Sunday, September 25 2022

ಮೈಸೂರು

ಮೈಸೂರು ಒಡೆಯರಿಂದ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ - 1 min read

Photo Credit :

ಮೈಸೂರು ಒಡೆಯರಿಂದ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ

ಮೈಸೂರು: ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯನ್ನು ಭಾನುವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಪ್ರದಾಯಿಕವಾಗಿ ನೆರವೇರಿಸಿದರು.

ಬೆಳಿಗ್ಗೆ 6 ಗಂಟೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಅರಮನೆಯ ಆನೆ ಬಾಗಿಲಿಗೆ ಆಗಮಿಸಿದವು. ಮುಂಜಾನೆ ಜರುಗಿದ ಚಂಡಿ ಹೋಮಕ್ಕೆ ಯದುವೀರ್ ಅವರು ಪೂರ್ಣಾಹುತಿ ಅರ್ಪಿಸಿದರು.

ಇದಕ್ಕೂ ಮೊದಲು ಮುಂಜಾನೆ 5 ಗಂಟೆ 28 ನಿಮಿಷದಿಂದ 6 ಗಂಟೆ 48 ನಿಮಿಷದೊಳಗೆ ಸಲ್ಲುವ ಶುಭ ಮಹೂರ್ತದಲ್ಲಿ ಅರಮನೆಯ ಆಯುಧಗಳನ್ನು ರಥ ವಾಹನದಲ್ಲಿ ಆನೆ, ಕುದುರೆ, ಒಂಟೆ ಮತ್ತು ಹಸುವಿನೊಡನೆ ಸೋಮೇಶ್ವರ ದೇವಾಲಯಕ್ಕೆ ತರಲಾಯಿತು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮತ್ತೆ ಅರಮನೆಯ ಆನೆ ಬಾಗಿಲಿಗೆ ತರಲಾಯಿತು.ತರುವಾಯ ಶುಭ ಮಹೂರ್ತದಲ್ಲಿ ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವೀರ್ ಅವರು ರಾಜ ಮಹಾರಾಜರು ಬಳಸುತ್ತಿದ್ದ ಯುದ್ಧ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿದರು.

ತರುವಾಯ ಅರಮನೆಯ ಸವಾರಿ ತೊಟ್ಟಿಯಲ್ಲಿ ಯದುವೀರ್ ಅವರು ತಾವು ಬಳಸುವ ಕಾರುಗಳು ಸೇರಿದಂತೆ ಆನೆ, ಕುದುರೆ, ಒಂಟೆ, ಹಸುವಿಗೂ ಪೂಜೆ ಸಲ್ಲಿಸಿದರು. ಮಂಗಳವಾದ್ಯ ಹಾಗೂ ಪೊಲೀಸ್ ಬ್ಯಾಂಡ್ ಸಂಗೀತದ ಹಿಮ್ಮೇಳದಲ್ಲಿ ಯದುವೀರ್ ಅವರು ಆಯುಧ ಪೂಜೆ ನೆರವೇರಿಸಿದರು.

ಜನರಿಗೆ ಎದುರಾಗಿರುವ ಕೊರೋನಾ ಸಂಕಷ್ಟದಿಂದ ಮುಕ್ತ ಮಾಡಿ ಸುಖ, ಸಮೃದ್ಧಿ ನೆಲೆಸಲಿ ಎಂದು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

See also  ಫುಲ್ ``ಬಾಡಿ ಮಸಾಜ್'' ಗೆ ಒತ್ತಾಯಿಸುತ್ತಿದ್ದ ಸಾಧು, ಮಂಡ್ಯ ರಮೇಶ್!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು