News Kannada
Saturday, October 01 2022

ಮೈಸೂರು

ನಿವೃತ್ತ ಪ್ರಾಂಶುಪಾಲ ಕೊಲೆಯ ಐವರು ಆರೋಪಿಗಳ ಬಂಧನ - 1 min read

Photo Credit :

ನಿವೃತ್ತ ಪ್ರಾಂಶುಪಾಲ ಕೊಲೆಯ ಐವರು ಆರೋಪಿಗಳ ಬಂಧನ

ಮೈಸೂರು: ಇಲ್ಲಿನ ನಿವೇದಿತ ನಗರದಲ್ಲಿ ನಿವೃತ್ತ ಪ್ರಾಂಶುಪಾಲರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಕೊಲೆಗಾರರಾದ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ತಿಳಿಸಿದರು.

ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಶಿವಮೂರ್ತಿ ಕಳೆದ ಸೆಪ್ಟೆಂಬರ್‌ 20 ರಂದು ತಮ್ಮ ಮನೆಯಲ್ಲೆ ಕೊಲೆಯಾಗಿದ್ದರು. ಮೃತರ ಪತ್ನಿ ಸವಿತ ನೀಡಿದ ದೂರಿನ ಮೇರೆಗೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆಯ ವೇಳೆ ಕೊಲೆ ಮಾಡಿದ ಆರೋಪಿಗಳಾದ ಐಡಿಎಫ್ ಸಿ ಬ್ಯಾಂಕ್ ನಲ್ಲಿ ರಿಕವರಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಭುಗತಹಳ್ಳಿ ಗ್ರಾಮದ ನಿವಾಸಿ ನಾಗೇಶ ಎಂ.ಬಿನ್ ಮಹಾದೇವ (37), ಗಾರೆ ಕೆಲಸ ಮಾಡುವ ಭುಗತಹಳ್ಳಿ ಗ್ರಾಮದ ನಿವಾಸಿ ನಿರಂಜನ್ ಎನ್(22), ಮಡಿವಾಳಸ್ವಾಮಿ ಸಂಸ್ಕೃತ ಪಾಠಶಾಲೆಯ ಶಿಕ್ಷಕ, ಸಿದ್ದರಾಜು ಬಿನ್ ಮಹದೇವಪ್ಪ(54) ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಕೆ.ಆರ್.ಮೊಹಲ್ಲಾ ನಿವಾಸಿ ವಿಶ್ವನಾಥ ಕೆ.ಬಿನ್ ಲೇಟ್ ಕೃಷ್ಣಭಟ್(52) ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಸಹಶಿಕ್ಷಕ, ಪರಶಿವ ಬಿನ್ ಪುಟ್ಟಸ್ವಾಮಿ(55) ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರಿಂದ 55,000ರೂ. ನಗದುಹಣ, ನಾಲ್ಕು ದ್ವಿಚಕ್ರವಾಹನಗಳು, ಒಂದು ಟಾಟಾ ಐಸ್ ಗೂಡ್ಸ್ ವಾಹನ, ಎಂಟು ಮೊಬೈಲ್, ಎರಡು ಚಾಕು, ರಕ್ತಸಿಕ್ತ ಬಟ್ಟೆಗಳು ಹಾಗೂ ಇತರೆ ದಾಖಲಾತಿಗಳನ್ದನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮೃತ ಪರಶಿವಮೂರ್ತಿ ನಡೆಸುತ್ತಿದ್ದ ಸಂಸ್ಕೃತ ಪಾಠಶಾಲೆಯಲ್ಲಿನ ಶಿಕ್ಷಕರು ಪ್ರತಿ ತಿಂಗಳು ಅವರ ವೇತನದಲ್ಲಿ ನಿರ್ದಿಷ್ಟಪಡಿಸಿದ ಹಣ ನೀಡುವಂತೆ ನೀಡುತ್ತಿದ್ದ ಕಿರುಕುಳ, ಹಿಂಸೆ, ಹಾಗೂ ಅವಾಚ್ಯಶಬ್ದಗಳಿಂದ ಬೈದಾಡುತ್ತ ತುಚ್ಛವಾಗಿ ಕಾಣುತ್ತಿರುವುದೇ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಗಳು ಬಾಯ್ಬಿಟ್ಟಿರುವುದಾಗಿ ತಿಳಿಸಿದರು.

ಆರೋಪಿಗಳಾದ ಕೃಷ್ಣ ಭಟ್‌ ಮತ್ತು ಸಹ ಶಿಕ್ಷಕ ಪುಟ್ಟ ಸ್ವಾಮಿ ಅವರು ಮೃತರ ಬಗ್ಗೆ ದ್ವೇಷ ಹೊಂದಿದ್ದು ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎಂದು ತಿಳಿಸಿದರು.

ಆರೋಪಿಗಳ ಪತ್ತೆಕಾರ್ಯದಲ್ಲಿ ಡಿಸಿಪಿ ಗೀತಪ್ರಸನ್ನ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ಉಸ್ತುವಾರಿಯಲ್ಲಿ ಆರೋಪಿಗಳ ಪತ್ತೆಗಾಗಿ ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಐ ಆರ್.ವಿಜಯಕುಮಾರ್, ಕುವೆಂಪುನಗರ ಪೊಲೀಸ್ ಠಾಣೆಯ ಪಿಐ ಜೆ.ಸಿ.ರಾಜು, ಸರಸ್ವತಿಪುರಂ ಪೊಲೀಸ್ ಠಾಣೆಯ ಪಿಎಸ್ ಐ ಭವ್ಯ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

See also  ನೀರು ಕೊಟ್ಟಿದ್ದರೆ ನಿಮ್ಮ ಜೋಳಿಗೆ ನಾವೇ ತುಂಬಿಸುತ್ತಿದ್ದೆವು: ಸಿಎಂಗೆ ಟಾಂಗ್ ನೀಡಿದ ಎಚ್.ಡಿ. ದೇವೇಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು