News Kannada
Tuesday, September 27 2022

ಮೈಸೂರು

ಮೈಸೂರಿನಲ್ಲಿ ಹಿಂದೂ ಮುಸ್ಮಿಂ ಸಹಬಾಳ್ವೆ ಕಾರ್ಯಕ್ರಮ - 1 min read

Photo Credit :

ಮೈಸೂರಿನಲ್ಲಿ ಹಿಂದೂ ಮುಸ್ಮಿಂ ಸಹಬಾಳ್ವೆ ಕಾರ್ಯಕ್ರಮ

ಮೈಸೂರು: ಕೃಷ್ಣರಾಜ ಸ್ನೇಹ ಬಳಗ ವತಿಯಿಂದ ಈದ್ ಮಿಲಾದ್ ಅಂಗವಾಗಿ ಹಿಂದೂ ಮುಸಲ್ಮಾನ್ ಜತೆಗೂಡಿ ಸಸಿ ನೆಡುವ ಮೂಲಕ  ಸಹಬಾಳ್ವೆ ಕಾರ್ಯಕ್ರಮ ಕುವೆಂಪು ನಗರದಲ್ಲಿರುವ ಸೌಗಂಧಿಕ ಉದ್ಯಾನವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕರಾದ ಎನ್.ಎಂ.ನವೀನ್ ಕುಮಾರ್  ಮಹಾಮಾರಿ ಕೊರೋನಾ  ಸಂದರ್ಭದಲ್ಲಿ ದೇಶವೇ ಲಾಕ್ ಡೌನ್ ಆದಾಗ ನಿರ್ಗತಿಕರಿಗೆ ಹಿಂದೂ ಮತ್ತು ಮುಸಲ್ಮಾನ್ ಬಾಂಧವರು ಜತೆಗೂಡಿ  ಅಸಹಾಯಕರಿಗೆ ಆಹಾರ ಮತ್ತು  ದಿನನಿತ್ಯದ ಪದಾರ್ಥಗಳನ್ನು ನೀಡುವ ಮೂಲಕ  ಸಹಬಾಳ್ವೆಯಿಂದ ಸಹಾಯ ಹಸ್ತ ನೀಡಿರುವುದು ಸಹ ನಾವು ನೋಡಿದ್ದೇವೆ ಈ ಮಹಾಮಾರಿ ಕೊರೋನಾಗೆ ಜಾತಿ ಧರ್ಮ, ಹಿರಿಯರು ಕಿರಿಯರು, ಶ್ರೀಮಂತ ಬಡವ ಎಲ್ಲರೂ ಈ ಮಹಾಮಾರಿ ರೋಗಕ್ಕೆ ತುತ್ತಾಗಿದ್ದಾರೆ. ಹಾಗಾಗಿ ಸಾರ್ವಜನಿಕರು ಆದಷ್ಟು ಪದೇ ಪದೆ ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಅಂತರ ಕಾಪಾಡುವ ಮೂಲಕ ವೈರಸ್ ಕೊಲ್ಲುವುದರಲ್ಲಿ ಮುಂದಾಗಬೇಕು. ಹಬ್ಬಗಳು ಪ್ರತಿ ವರುಷ ಬರುತ್ತದೆ ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷದ ಎಲ್ಲ ಹಬ್ಬವನ್ನು ಸರಳವಾಗಿ ಆಚರಿಸೋಣ ಹಾಗೆಯೇ ಅಸಹಾಯಕರಿಗೆ ಸಹಾಯ ಮಾಡುವ  ಮೂಲಕ ಈ ಬಾರಿಯ ಹಬ್ಬವನ್ನು ಆಚರಿಸೋಣ  ಈದ್-ಮಿಲಾದ ಹಬ್ಬ ನಮ್ಮ ಮುಸಲ್ಮಾನ್ ಸಮಾಜಕ್ಕೆ ಅಷ್ಟೇ ಮೀಸಲು ಇಲ್ಲ ಈ ಹಬ್ಬವು ಹಿಂದೂ ಮುಸ್ಲಿಂರ ಭಾವೈಕ್ಯತೆಯ ಹಬ್ಬವಾಗಿರುವುದರಿಂದ ಎಲ್ಲರೂ ಸಹೋದರತೆಯಿಂದ ಆಚರಣೆ ಮಾಡುತ್ತಿದ್ದು. ಇದರಲ್ಲಿ ಸರಕಾರದ ನಿಯಮಗಳು ಅನುಸರಿಸಿಕೊಂಡು ಹಬ್ಬವನ್ನು ಸರಳವಾಗಿ ಆಚರಿಸೋಣ ಎಂದು ಹೇಳಿದರು.

ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ ಸಹಬಾಳ್ವೆ ಎಲ್ಲ ಧರ್ಮಗಳ ತಿರುಳು ಶಾಂತಿ, ಸಹಬಾಳ್ವೆ ಎಲ್ಲ ಧರ್ಮಗಳ ತಿರುಳಾಗಿದೆ. ಮಾನವೀಯ ಮೌಲ್ಯಗಳ ಪಾಲನೆ ಇಂದಿನ ಅವಶ್ಯಕತೆಯಾಗಿದೆ. ಮನುಕುಲದ ಉದ್ದಾರಕ್ಕಾಗಿಯೇ ಮಹಾನ್ ವ್ಯಕ್ತಿಗಳು ಜನ್ಮ ತಾಳಿದ್ದಾರೆ. ಸಮಾಜವು ದಾರಿ ತಪ್ಪಿದಾಗ ಜನ್ಮ ತಾಳಿದ ಮಹಾ ಪುರುಷರು ಸರಿ ದಾರಿಗೆ ತರುವ ಯತ್ನ ನಡೆಸಿ ಬಹುತೇಕ ಯಶಸ್ವಿ ಆಗಿದ್ದಾರೆ. ಆದರೆ ಇಂದು ಅವರನ್ನು ಜಾತಿ, ಧರ್ಮಗಳೊಳಗೆ ಕಟ್ಟಿ ಹಾಕುತ್ತಿದ್ದೇವೆ. ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವ ಸದ್ಗುಣ ಮಾತ್ರ.

ಸಮಾಜದಲ್ಲಿ ಸಾಮರಸ್ಯ ಮೂಡಿಸಬಹುದು. ಇಡೀ ಮಾನವ ಕುಲದ ಅಭ್ಯುದಯಕ್ಕಾಗಿ ಶ್ರಮಿಸಿದ ಮಹ್ಮದ್ ಪೈಗಂಬರರು ಜಗತ್ತಿಗೆ ಶಾಂತಿಯ ಪಾಠ ಬೋಧಿಸಿದರು. ಮನುಷ್ಯ ಸಂಕುಚಿತ ಭಾವನೆ ತೊರೆದು ವಿಶಾಲ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಮಗೆ ಧರ್ಮ ಸಂಘರ್ಷ, ಹಿಂಸೆಗಳು ಬೇಕಾಗಿಲ್ಲ. ಪರಸ್ಪರ ಪ್ರೀತಿಯಿಂದ, ಮನುಷ್ಯತ್ವದಿಂದ ಬದುಕುವುದನ್ನು ಕಲಿಯೋಣ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಎನ್.ಎಂ.ನವೀನ್ ಕುಮಾರ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಶೋಕಪುರಂ ಪೆÇಲೀಸ್  ಠಾಣೆಯ ಹೆಡ್ ಕಾನ್ ಸ್ಟೇಬಲ್‍ರಾಜೇಶ್, ಸಿದ್ದರಾಜು, ಮುಸಲ್ಮಾನ್ ಮುಖಂಡರಾದ ಸಾದಿಕ್ ರಹಮಾನ್, ಮೊಹಮ್ಮದ್ ಹ್ಯಾರಿಸ್, ಸೈಯದ್ ಅಬ್ಬಾಸ್, ರಫೀಕ್ ಆಲಿ, ರಫೀಕ್, ಹುಸೇನ್, ಸಾದಿಕ್, ಎಂ.ರಾಜೇಶ್, ಎಂ.ಎಚ್.ಕಿರಣ್, ಸುನೀಲ್ ಹಾಗೂ ಇನ್ನಿತರರು ಹಾಜರಿದ್ದರು.

See also  ಅಕ್ರಮ ಮರಳು ದಂಧೆ: ಪೊಲೀಸರಿಂದ ಮರಳು ಲಾರಿಗಳ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು