News Kannada
Monday, September 26 2022

ಮೈಸೂರು

ಆಸ್ಪತ್ರೆ ಇದ್ದರು ಬಡ ಜನತೆ ಸೇವೆಗೆ ತೆರೆದಿಲ್ಲ - 1 min read

Photo Credit :

ಆಸ್ಪತ್ರೆ ಇದ್ದರು ಬಡ ಜನತೆ ಸೇವೆಗೆ ತೆರೆದಿಲ್ಲ

ಮೈಸೂರು: ಇಡೀ ಜಗತ್ತನ್ನೇ ಬಾಧಿಸುತ್ತಿರುವ ಕೊರೋನ ಸಾಂಕ್ರಮಿಕದ ವಿರುದ್ದ ಸರ್ಕಾರೀ ಸಂಸ್ಥೆಗಳು ಮತ್ತು ಸಾರ್ವಜನಿಕರು ಅಹರ್ನಿಶಿ ಹೋರಾಟ ನಡೆಸುತಿದ್ದಾರೆ. ಅದರಲ್ಲೂ ಅರೋಗ್ಯ ಕ್ಷೇತ್ರದ ಸಿಬ್ಬಂದಿಗಳು ಈ ಸಾಂಕ್ರಮಿಕದ ವಿರುದ್ದ ವಾರಿಯರ್‌ ಗಳಾಗಿ ಹೋರಾಡುತಿದ್ದಾರೆ. ಆದರೆ ನಂಜನಗೂಡು ತಾಲ್ಲೂಕಿನಲ್ಲಿರುವ ಆಸ್ಪತ್ರೆಯೊಂದು ಇದಕ್ಕೆ ವ್ಯತಿರಿಕ್ತವಾಗಿದೆ.

ನಂಜನಗೂಡು ತಾಲೂಕಿನ ಕಾಡಂಚಿನ ಪ್ರದೇಶದ ಜನತೆಯ ಅನುಕೂಲಕ್ಕೆಂದು ಸರ್ಕಾರ ಆಸ್ಪತ್ರೆ ನಿರ್ಮಿಸಿ ಅಲ್ಲಿಗೊಬ್ಬ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸಿದೆ., ಬಡ ಜನತೆ ಸೇವೆ ಮಾಡಲೆಂದೇ ನಿರ್ಮಿಸಿದ ಈ ಆಸ್ಪತ್ರೆ ಕಳೆದ ೭ ತಿಂಗಳಿನಿಂದ ಬೀಗ ಹಾಕಿದೆ. ಇದು ತಾಲೂಕಿನ ಕಾಡಂಚಿನಲ್ಲಿರುವ ಈರೇಗೌಡನಹುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಸ್ತುತ ಚಿತ್ರಣ. ಕಾಯಿಲೆ ಗುಣಮಪಡಿಸಿಕೊಳ್ಳಲು ಆಸ್ಪತ್ರೆಗೆ ಬರುವ ರೋಗಿಗಳು ಬಾಗಿಲು ಹಾಕಿರುವುದನ್ನು ನೋಡಿ ದೂರದ ಮಡುವಿನಳ್ಳಿಯತ್ತ ಹೋಗಬೇಕಿದೆ. ತಾಲೂಕಿನಲ್ಲಿ ಕೊರೋನಾ ಹೆಚ್ಚಾಗಿದ್ದಾಗ, ಕಳೆದ ಏಪ್ರಿಲ್ ತಿಂಗಳಲ್ಲಿ ಇಲ್ಲಿ ಕೆಲಸ ಮಾಡುತಿದ್ದ ವೈದ್ಯರ ಪತ್ನಿಗೆ ಕೊರೋನಾ ಸೋಂಕು ಬಂದಿದೆ ಎಂಬ ಕಾರಣಕ್ಕೆ ಹಾಕಿದ ಆಸ್ಪತ್ರೆಯ ಬೀಗ ಮಾತ್ರ ಏಳು ತಿಂಗಳಾದರೂ ತೆರೆದೇ ಇಲ್ಲ ಎನ್ನುತ್ತಾರೆ ಈ ಗ್ರಾಮದ ಜನತೆ.

ಆ ವೈದ್ಯರ ಬದಲಿಗೆ ಬೇರೆ ವೈದ್ಯರು ಕೂಡ ಇಲ್ಲಿಗೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸುವ ಗ್ರಾಮದ ಹತ್ತಾರು ಜನರ ಪ್ರಶ್ನೆಗೆ ಉತ್ತರಿಸುವವರಾದರೂ ಯಾರು? ಅಂದು ವೈದ್ಯ ಮಹಾಶಯರೊಂದಿಗೆ ಹೋದ ಸಿಬ್ಬಂದಿಗಳು ಕೂಡ ಇತ್ತ ತಲೆ ಹಾಕಿಲ್ಲ. ಹೀಗಾಗಿ ಆರೋಗ್ಯ ಕೇಂದ್ರದ ಬೀಗ ಇಂದಿಗೂ ತೆರೆದಿಲ್ಲ.

ಕೊರೋನಾ ಸೋಂಕಿತರಿಗಾಗಿ ವಿವಿಧೆಡೆ ಹಣ ನೀಡಿ ಬಾಡಿಗೆಗೆ ಕಟ್ಟಡವನ್ನು ಪಡೆಯುತ್ತಿರುವ ಸರ್ಕಾರ, ತನ್ನದೇ ಆದ ಸ್ವಂತ ಕಟ್ಟಡ ಹೊಂದಿರುವ ಆಸ್ಪತ್ರೆಯ ಬಾಗಿಲು ಮುಚ್ಚಿದ್ದರೂ ಮೌನವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣಕುರುಡರಂತೆ ವರ್ತಿಸುತ್ತಿರುವುದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಕಳೆದ ಏಳು ತಿಂಗಳಿಂದ ಈ ಆಸ್ಪತ್ರೆಗೆ ಬಂದ ಉಚಿತ ಔಷಧಿಗಳ ಕಥೆ ಏನು? ಅವುಗಳು ಏನಾದವು? ವೈದ್ಯರಿಲ್ಲದ ಆಸ್ಪತ್ರೆಯ ಸಿಬ್ಬಂದಿಗಳು ಏನಾದರು? ಅವರಿಗೆಲ್ಲ ಕೊರೋನಾದಂತಹ ಸಂಕಷ್ಟ ಸಮಯದಲ್ಲೂ ಏಳು ತಿಂಗಳ ಕಾಲ ರಜೆ ನೀಡಿದವರು ಯಾರು? ಅದು ಸಂಬಳ ಸಹಿತವೋ ಅಥವಾ ಸಂಬಳ ರಹಿತವೋ ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಈ ಕುರಿತು ಪ್ರತಿಕ್ರಿಯಿಸಿದ ಜಿ.ಪಂ ಸದಸ್ಯೆ ಪುಷ್ಪಾ ನಾಗೇಶ್ ರಾಜ್ ಅವರು ಆಸ್ಪತ್ರೆ ಬಾಗಿಲು ಹಾಕಿರುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಈ ಆಸ್ಪತ್ರೆಗೆ ವೈದ್ಯರು ಬರಲೂ ಇಲ್ಲ, ಬೀಗ ತೆರೆಯಲೂ ಇಲ್ಲ. ಈಗಲಾದರೂ ಇಲ್ಲಿ ಬಡ ಜನತೆಯ ಸೇವೆ ಪುನರಾರಂಭವಾಗಬೇಕು ಎಂದಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಮರನಾಥ್ ಪ್ರತಿಕ್ರಿಯಿಸಿ ಆಸ್ಪತ್ರೆ ಬಾಗಿಲು ಹಾಕಿರುವ ಕುರಿತು ನನ್ನಲ್ಲಿ ಮಾಹಿತಿ ಇಲ್ಲ. ನಾನು ಬಂದು ಕೇವಲ 14 ದಿನಗಳಾಗಿವೆ. ಈ ಕುರಿತು ಯಾವುದೇ ಮಾಹಿತಿ ತಮ್ಮಲ್ಲಿ ಇಲ್ಲ. ಶೀಘ್ರದಲ್ಲೇ ಈ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

See also  ಕಾರ್ಯಾಚರಣೆಗೂ ಸಿಗದ ವ್ಯಾಘ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು