News Kannada
Tuesday, October 04 2022

ಮೈಸೂರು

ಸರಳ ದಸರಾಗೆ 2.05 ಕೋಟಿ ರೂ ಖರ್ಚು ; ಸಚಿವ ಎಸ್‌ಟಿಎಸ್ - 1 min read

Photo Credit :

ಸರಳ ದಸರಾಗೆ 2.05 ಕೋಟಿ ರೂ ಖರ್ಚು ; ಸಚಿವ ಎಸ್‌ಟಿಎಸ್

ಮೈಸೂರು- ವಿಶ್ವ ವಿಖ್ಯಾತ ಮೈಸೂರು ಸರಳ  ದಸರಾ ಮಹೋತ್ಸವಕ್ಕೆ ಸರ್ಕಾರದಿಂದ   ಬಂದಿರುವ ಹಣ ಮತ್ತು ಆಗಿರುವ ವೆಚ್ಚದ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇಂದು  ನೀಡಿದರು. ಈ ಬಾರಿ ಸರಳ ದಸರಾಗೆ ಒಟ್ಟು  2.05.83.167 ರೂ ಹಣ ದಸರಾಗೆ ಖರ್ಚಾಗಿದೆ ಎಂದು ಸಚಿವರು ತಿಳಿಸಿದರು.

ಇದರಲ್ಲಿ   ಹೆಚ್ಚು ಎಂದರೆ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆ ಹಾಗೂ ಕಲಾವಿದರಿಗೆ 44 ಲಕ್ಷ ಹಣ ವೆಚ್ಚವಾಗಿದೆ. ದಸರಾ ಆನೆಗಳ ನಿರ್ವಹಣೆಗೆ 35 ಲಕ್ಷ, ಇದ್ದ ಎರಡೇ ಎರಡು ವೇದಿಕೆಗೆ 41 ಲಕ್ಷ.,ರಾಜವಂಶಸ್ಥರಿಗೆ ಗೌರವ ಧನವಾಗಿ 40 ಲಕ್ಷ., ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದರ ಜತೆಗೆ ಶ್ರೀರಂಗಪಟ್ಟಣ ದಸರಾಗೆ 50 ಲಕ್ಷ ಮತ್ತು  ಚಾಮರಾಜನಗರ ದಸರಾಗೆ 36 ಲಕ್ಷ ರೂಪಾಯಿ ವೆಚ್ಚವಾಗಿದ್ದು  ಒಟ್ಟು 

ಒಟ್ಟು 2.91.83.167. ರೂ ಹಣ ಖರ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಯಾವುದೇ ಹೊಸ ವೆಚ್ಚ ಮಾಡಿಲ್ಲ, ಈ ಹಿಂದೆ ಮಾಡಿರುವ ವೆಚ್ಚವನ್ನಷ್ಟೆ ಮಾಡಿದ್ದೇವೆ. 

ರಾಜವಂಶಸ್ಥರಿಗೆ ಗೌರವ ಧನ ನೀಡುವುದು ಸಹ ನಾನು ಹೊಸದಾಗಿ ಆರಂಭಿಸಿಲ್ಲ. ರಾಜ್ಯ ಸರ್ಕಾರದಿಂದ  ದಸರಾಗೆ 10 ಕೋಟಿ ಬಿಡುಗಡೆ ಆಗಿತ್ತು.    ಮುಡಾ ಸಹ 5 ಕೋಟಿ ಹಣ ನೀಡಲಿದೆ. ಬಾಕಿ ಹಣವನ್ನ ಏನು ಮಾಡಬೇಕು ಅಂತ ಸಿಎಂ ಗಮನಕ್ಕೆ ತಂದು ಕೆಲಸ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.

See also  ದಸರಾ ಧರ್ಮಾತೀತವಾಗಿ ಎಲ್ಲರೂ ಭಾಗವಹಿಸುವಂತ ಹಬ್ಬ: ಪ್ರೊ.ನಿಸಾರ್ ಅಹಮದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು