News Kannada
Saturday, October 08 2022

ಮೈಸೂರು

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ಪೋಲೀಸ್‌ ಆಯುಕ್ತರ ಎಚ್ಚರಿಕೆ - 1 min read

Photo Credit :

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ಪೋಲೀಸ್‌ ಆಯುಕ್ತರ ಎಚ್ಚರಿಕೆ

ಮೈಸೂರು: ಸಭೆ ಸಮಾರಂಭ, ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೋವಿಡ್ ಮಾರ್ಗಸೂಚಿ ವ್ಯಾಪಕ ಉಲ್ಲಂಘನೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕೋವಿಡ್-19 ಸಾಂಕ್ರಾಮಿಕ ಸೋಂಕು ತಡೆಯುವ ನಿಟ್ಟಿನಲ್ಲಿ ಸತತ ಪ್ರಯತ್ನಗಳು ಕಳೆದ ಒಂಭತ್ತು ತಿಂಗಳಿನಿಂದ ನಡೆಯುತ್ತಲೇ ಇವೆ.   ಕ್ರಮೇಣ ಸರ್ಕಾರ ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಿದಾಗ ಜನಜೀವನ ಸಹಜಸ್ಥಿತಿಗೆ ಮರಳುವ ವಿಶ್ವಾಸದ ನಡುವೆಯೇ ಕೋವಿಡ್-19 ನಿಯಂತ್ರಣ ಪ್ರಯತ್ನದಲ್ಲಿ ಎಲ್ಲೋ ಒಂದು ಕಡೆ ಹಿನ್ನಡೆಯಾಗುತ್ತಿರುವುದು ಗಮನಕ್ಕೆ ಬರುತ್ತಿದೆ ಎಂದಿದ್ದಾರೆ.

ಅದರಲ್ಲೂ ಸಭೆ-ಸಮಾರಂಭ, ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳು, ಪ್ರತಿಭಟನೆ ಧರಣಿ ಇಂತಹ ಸಂದರ್ಭದಲ್ಲಿ ಜನ ರು ತಮಗರಿವಿಲ್ಲದಂತೆ ಕೋವಿಡ್-19 ಮಾರ್ಗಸೂಚಿಗಳನ್ನು ಧಿಕ್ಕರಿಸುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು, ಮಾಸ್ಕ್ ಧರಿಸದಿರುವುದು, ಒಂದು ವೇಳೆ ಧರಿಸಿಯೂ ಆಗಾಗ ಸರಿಸಿ ಮಾತನಾಡುತ್ತಿರುವುದು, ಪರಸ್ಪರ ಸ್ಪರ್ಶಿಸುವುದು, ಹೀಗೆ ಸೋಂಕು ಹರಡಲು ಆಸ್ಪದ ಮಾಡಿಕೊಡುವ ಸ್ವೇಚ್ಛಾಚಾರದ ವರ್ತನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಪೊಲೀಸ್ ಇಲಾಖೆ ಗಮನಿಸಿರುವಂತೆ ಇಂತಹ ಕಾರ್ಯಕ್ರಮಗಳಲ್ಲಿ ಜನಮಾತ್ರವಲ್ಲ, ಜನಪ್ರತಿನಿಧಿಗಳು, ರಾಜಕೀಯ ಮುಖಂಡರಲ್ಲದೆ ಅಧಿಕಾರಿಗಳು ಕೂಡ ತಮ್ಮ ಉಪಸ್ಥಿತಿಯನ್ನು ಸ್ಥಿರೀಕರಿಸುವ ಸಲುವಾಗಿ ಫೋಟೋ/ವಿಡಿಯೋಗಳಿಗೆ ಮುಗಿಬೀಳುತ್ತಿದ್ದಾರೆ. ಸಹಜ ಎಂಬಂತೆ ಫೋಟೋಗ್ರಾಫರ್/ವಿಡಿಯೋಗ್ರಾಫರ್ ಗಳು ಏಕಕಾಲದಲ್ಲಿ ಎಲ್ಲರನ್ನೂ ಕ್ಯಾಮರಾದಲ್ಲಿ ಒಟ್ಟಿಗೆ ಸೆರೆ ಹಿಡಿಯಬೇಕೆಂಬ ಉದ್ದೇಶದಿಂದ ಹತ್ತಿರಹತ್ತಿರ ಸರಿದು ಗುಂಪುಗೂಡುವಂತೆ ಸಲಹೆ ನೀಡುವುದಿದೆ. ಹಾಗಾಗಿ ಕೋವಿಡ್ 19ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮಾಧ್ಯಮಗಳು ಜನರಿಗೆ ಮನವರಿಕೆ ಮಾಡಿಕೊಡಬೇಕು. ಅವರನ್ನು ಪ್ರೇರೇಪಿಸುವುದು ಒಂದು ಪರಿಣಾಮಕಾರಿ ಮನವರಿಕೆಯಾಗಿದೆ. ಮಾಧ್ಯಮ/ಪತ್ರಿಕೆಗಳು ಇದುವರೆಗೂ ಸೋಂಕು ನಿಯಂತ್ರಣಕ್ಕೆ ಭಾರೀ ಪ್ರಮಾಣದಲ್ಲಿ ಸಹಕರಿಸುತ್ತ ಬಂದಿವೆ. ಇನ್ನು ಮುಂದೆಯೂ ಈ ಸೋಂಕು ನಿಯಂತ್ರಣ ಹಾಗೂ ಸಾಮಾಜಿಕ ಕಳಕಳಿ ದೃಷ್ಟಿಯಿಂದ ಪೊಲೀಸ್ ಇಲಾಖೆ ನಿಮ್ಮ ಸಹಕಾರ ಕೋರಲಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಕೆಲವು ಸಲಹೆಗಳನ್ನು ನೀಡಿದ್ದು ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಜನರು ಪಾಲ್ಗೊಂಡಂತಹ ಯಾವುದೇ ಕಾರ್ಯಕ್ರಮದ ಫೋಟೋ, ವಿಡಿಯೋಗಳನ್ನು ತೆಗೆಯುವುದಾಗಲಿ, ಸ್ವೀಕರಿಸುವುದಾಗಲಿ ಹಾಗೂ ಪ್ರಚುರಪಡಿಸುವುದನ್ನು ನಿಷೇಧಿಸಲಾಗಿದೆ. ಸಾಮಾಜಿಕ, ರಾಜಕೀಯ, ಧಾರ್ಮಿಕ ಇನ್ನಾವುದೇ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಫೋಟೋ ಇಲ್ಲವೆ ವಿಡಿಯೋ ತೆಗೆಸಿಕೊಳ್ಳಲು ಮುಂದಾಗುವವರಿಗೆ ಒತ್ತಾಸೆ ನೀಡದೆ ಕೋವಿಡ್-19 ಸೋಂಕು ಬಾಧೆ ಎಚ್ಚರಿಕೆ ನೀಡಿ ಸಾಮಾಜಿಕ ಅಂತರ ವಿಲ್ಲದೆ ಫೋಟೋ/ವಿಡಿಯೋ ತೆಗೆಯಲ್ಲ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.

ಒಂದು ವೇಳೆ ಇಂತಹ ಸಾಮೂಹಿಕ ಸಮಾರಂಭ/ಕಾರ್ಯಕ್ರಮಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲಿಸದೇ ಇರುವುದು, ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ ಕೂಡಲೇ ಕೋವಿಡ್ ಕಂಟ್ರೋಲ್ ರೂಂ 1077,0821-2423800,0821-2957711,-0821-2957811 ಅಥವಾ ಪೊಲೀಸ್ ಕಂಟ್ರೋಲ್ ರೂಂ 100,2418339 ಗೆ ಮಾಹಿಹಿ ನೀಡುವಂತೆ ಕೋರಿದ್ದಾರೆ.

See also  ಮೈಸೂರು ವಿವಿ ಶುಲ್ಕ ಹೆಚ್ಚಳ: ವಿದ್ಯಾರ್ಥಿಗಳ ಆಕ್ರೋಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು