News Kannada
Thursday, September 29 2022

ಮೈಸೂರು

22 ಕೋವಿಡ್‌ ಟೆಸ್ಟ್‌ ಸೆಂಟರ್‌ ಆರಂಭಿಸಿದ ಮೈಸೂರು ಮಹಾನಗರಪಾಲಿಕೆ - 1 min read

Photo Credit :

22 ಕೋವಿಡ್‌ ಟೆಸ್ಟ್‌ ಸೆಂಟರ್‌ ಆರಂಭಿಸಿದ ಮೈಸೂರು ಮಹಾನಗರಪಾಲಿಕೆ

ಮೈಸೂರು: ರಾಜ್ಯ ಸರ್ಕಾರವು ಕಳೆದ ನವೆಂಬರ್‌ 17 ರಿಂದ ಕಾಲೇಜು‌ಗಳನ್ನು ತೆರೆಯಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರಿಗೆ ಸುಲಭವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಅನುವಾಗುವಂತೆ ಮಹಾ ನಗರ ಪಾಲಿಕೆ 22 ಕಡೆ ಕೋವಿಡ್ ಟೆಸ್ಟ್ ಕೇಂದ್ರಗಳನ್ನು ತೆರೆದಿದೆ‌.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವ ಕುಂಬಾರಕೊಪ್ಪಲು, ಬನ್ನಿಮಂಟಪ,‌‌ ವೀರನಗೆರೆ, ರಾಜೇಂದ್ರನಗರ, ಶಾಂತಿನಗರ, ಚಾಮುಂಡಿಪುರಂ, ಕುರುಬರಹಳ್ಳಿ ವೃತ್ತ, ವಿ.ವಿ.ಪುರಂ, ಜಯನಗರ, ಬಿ.ಡಿ. ಆಸ್ಪತ್ರೆ, ಜಿ.ಬಿ. ಪಾಳ್ಯ, ಸಿಐಟಿಬಿ, ಸೋಮಾನಿ ಕಾಲೇಜು, ‌ರಾಜೀವ್ ನಗರ ರಂಗಮಂದಿರ, ಪುರಭವನ, ದೇವರಾಜ ಮಾರುಕಟ್ಟೆ ಮುಂಭಾಗ, ಬಿಲ್ಡರ್ ಅಸೋಸಿಯೇಷನ್, ‌ನ್ಯಾಯಾಲಯದ ಆವರಣ, ಕೆ.ಆರ್. ಆಸ್ಪತ್ರೆ, ಕೋವಿಡ್ ಜಿಲ್ಲಾಸ್ಪತ್ರೆ, ಮಕ್ಕಳ ಕೂಟ, ಅರಮನೆ ಈ 22 ಸ್ಥಳಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಚಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬಹುದು‌ ಎಂದು ಮೈಸೂರು ಮಹಾನಗರ ಪಾಲಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

22 ಕೇಂದ್ರಗಳಲ್ಲಿ ಪ್ರತಿ ಗುರುವಾರ ರಜೆ ಇರುವುದರಿಂದ ಅಂದು ಹೊರತುಪಡಿಸಿ, ಉಳಿದ ದಿನಗಳಲ್ಲಿ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮನವಿ ಮಾಡಿದೆ. ಈ ಕುರಿತು ಪಾಲಿಕೆ ವೆಬ್‌ ಸೈಟ್‌ ನಲ್ಲೂ ಮಾಹಿತಿ ನೀಡಿದೆ.

See also  ಶ್ರೀರಂಗಪಟ್ಟಣ ದಸರಾದಲ್ಲಿ ಬೆದರಿದ ಆನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು