News Kannada
Wednesday, September 28 2022

ಮೈಸೂರು

ಜಾತಿ ಆಧಾರಿತ ಪ್ರಾಧಿಕಾರ ರಚನೆಗೆ ವಿಶ್ವನಾಥ್‌ ಅಸಮಾಧಾನ - 1 min read

Photo Credit :

ಜಾತಿ ಆಧಾರಿತ ಪ್ರಾಧಿಕಾರ ರಚನೆಗೆ ವಿಶ್ವನಾಥ್‌ ಅಸಮಾಧಾನ

ಮೈಸೂರು: ರಾಜ್ಯ ಸರ್ಕಾರ ಜಾತಿ ಆಧಾರಿತ ಪ್ರಾಧಿಕಾರಗಳನ್ನು ರಚಿಸಿ ಅಶಾಂತಿ ಸೃಷ್ಟಿಸುವ ವಾತಾವರಣಕ್ಕೆ ಅವಕಾಶ ಕೊಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಪ್ರಾಧಿಕಾರಗಳನ್ನು ರಚಿಸುವುದು ಸರಿಯಲ್ಲ. ಕುವೆಂಪು ಅವರು ಹೇಳಿದಂತೆ ಚೆಲುವ ಕನ್ನಡ ನಾಡು. ಇದು ಶಾಂತಿಯ ನೆಲವೀಡು. ಇಂಥ ನೆಲದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವುದು ಸರಿಯಲ್ಲ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಿದ್ದಿಪುರುಷರ ಕಲ್ಪನೆಯಲ್ಲಿ ಸಂವಿಧಾನ ರಚನೆಯಾಗಿದೆ. ಬಸವೇಶ್ವರ, ಅಂಬೇಡ್ಕರ್, ಮಹಾತ್ಮ ಗಾಂಧಿ ಹೆಸರಲ್ಲಿ ಅವರ ಆಶಯಗಳಂತೆ ಸರ್ಕಾರಗಳನ್ನು ನಡೆಸಬೇಕಿದೆ. ಆ ರೀತಿಯಲ್ಲಿ ಆಡಳಿತ ನಡೆಸುವಂತೆ ಕೇಳಿಕೊಳ್ಳುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಸಂಪುಟ ವಿಸ್ತರಣೆಯೋ? ಪುನರಚನೆಯೋ? ಅದು ಯಾವಾಗ ಎಂಬುದೆಲ್ಲ ಅಮಿತ್ ಶಾ ಮೋದಿ ಮತ್ತು ಆ ದೇವರಿಗೆ ಮಾತ್ರ ಗೊತ್ತು ಎಂದರು.

ಒಂದು ಪರಿಪೂರ್ಣವಾದ ಸಂಪುಟದ ಅವಶ್ಯಕತೆ ಇದೆ. ಜನರ ಜೊತೆಯಲ್ಲಿ ಇದ್ದು ಕೆಲಸ ಮಾಡುವ ಸದೃಡ ಸಂಪುಟ ಬೇಕು. ಅದು ಆದಾಗ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ದೇವರಾಜ ಅರಸ್ ಕಾಲದಲ್ಲಿ ಸದೃಢ ಸಂಪುಟ ಇದ್ದ ಕಾರಣ ಎರಡು ಬಾರಿ ಆಡಳಿತ ಮಾಡಲು ಸಾಧ್ಯವಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದೆಹಲಿ ಕೇಂದ್ರಿತ ಪಕ್ಷಗಳು. ಈಗಾಗಿ ಕೆಲವು ನಿರ್ಣಯ ತೆಗೆದುಕೊಳ್ಳಲು ವಿಳಂಬವಾಗುತ್ತದೆ. ಇಲ್ಲಿಯ ಲೆಕ್ಕಚಾರ ಬೇರೆ ಅಲ್ಲಿಯದ್ದೆ ಬೇರೆ ಎಂದರು.

ಮಂಡ್ಯ ಡಿಸಿಸಿ ಬ್ಯಾಂಕ್ ನಲ್ಲಿ ಬಿಜೆಪಿ ಜೆ.ಡಿ.ಎಸ್ ಜೊತೆ ಒಪ್ಪಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಮಾಜಿ ಮುಖ್ಯ ಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಆಗಾಗ ಸಖರ ಹುಡುಕಾಟ ನಡೆಸುತ್ತಿರುತ್ತಾರೆ. ಅವರಿಗೆ ಯಾರು ಯಾವಾಗ ಸಖ ಆಗುತ್ತಾರೆ ಗೊತ್ತಿಲ್ಲ. ಸ್ಥಿರತೆ ಸದೃಢತೆಗಾಗಿ ಸಖರ ಹುಡುಕಾಟ ಇರುತ್ತದೆ. ಮುಂದೆ ಯಾರು ಅವರಿಗೆ ಸಖರಾಗುತ್ತಾರೆ ಎಂಬುದು ಗೊತ್ತಿಲ್ಲ ಎಂದು ಕಾಲೆಳೆದರು.

See also  ಆಸ್ಪತ್ರೆಯ ಆವರಣದಲ್ಲಿ ನವಜಾತ ಶಿಶುವಿನ ಶವ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು