News Kannada
Monday, February 06 2023

ಮೈಸೂರು

ಆಲ್ಮೇರಾದಲ್ಲಿ ಹಣ ಚಿನ್ನ ಇಡಲೇಬೇಡಿ: ಡಿವೈಎಸ್‌ಪಿ ಶೈಲೇಂದ್ರ ಕುಮಾರ್‌

Photo Credit :

ಆಲ್ಮೇರಾದಲ್ಲಿ ಹಣ ಚಿನ್ನ ಇಡಲೇಬೇಡಿ: ಡಿವೈಎಸ್‌ಪಿ ಶೈಲೇಂದ್ರ ಕುಮಾರ್‌

ಮಡಿಕೇರಿ: ನಿಮ್ಮ ಮನೆಯ ಆಲ್ಮೇರಾದಲ್ಲಿ ಯಾವಾತ್ತೂ ಬೆಲೆ ಬಾಳುವ ವಸ್ತು, ಚಿನ್ನಾಭರಣ ಮತ್ತು ಹಣವನ್ನು ಇಡಲೇಬೇಡಿ ಎಂದು ಕುಶಾಲನಗರ ಉಪ ವಿಭಾಗದ ಡಿ ವೈಎಸ್‌ ಪಿ ಶೈಲೇಂದ್ರ ಕುಮಾರ್‌ ಅವರು ಹೇಳಿದರು.

ರಾಷ್ಟ್ರಪತಿಗಳ ಪದಕ ಪಡೆದ ಹಿನ್ನೆಲೆಯಲ್ಲಿ ಶನಿವಾರ ಸೋಮವಾರಪೇಟೆಯ ಲಯನ್ಸ್‌ ಸಂಸ್ಥೆ ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಮನೆಗೆ ಬರುವ ಕಳ್ಳರಿಗೆ ಸುಲಭದಲ್ಲಿ ಸಿಗುವಂತೆ ಬೆಲೆ ಬಾಳುವ ವಸ್ತುವನ್ನು ಇಡಬಾರದು ಎಂದು ಕಿವಿ ಮಾತು ಹೇಳಿದರು.

ಇಂದು ಆಧುನೀಕತೆ ಬೆಳೆದಂತೆಲ್ಲ ಸೈಬರ್‌ ಅಪರಾಧಗಳೂ ಹೆಚ್ಚಾಗುತ್ತಿರುವುದಕ್ಕೆ ನಾವೇ ಕಾರಣ ಎಂದು ಹೇಳಿದ ಅವರು ಫೇಸ್‌ ಬುಕ್‌ ನಲ್ಲಿ ಕುಟುಂಬ ಸದಸ್ಯರ ಚಿತ್ರಗಳು , ಹುಟ್ಟಿದ ಹಬ್ಬದ ದಿನಾಂಕವನ್ನು ಶೇರ್‌ ಮಾಡುವುದು , ಪ್ರವಾಸ ತೆರಳಿದ್ದನ್ನೂ ಹಾಕುವುದರಿಂದ ಕಳ್ಳರಿಗೆ ಅನುಕೂಲವಾಗುತ್ತಿದೆ ಎಂದರು. ಸಾರ್ವಜನಿಕರ ಸಹಕಾರದಿಂದ ಮಾತ್ರ ಅಪರಾಧ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಹೇಳಿದ ಅವರು ನಾವು ಸ್ವಲ್ಪ ಜಾಗರೂಕವಾಗಿದ್ದರೂ ಅಪರಾಧಗಳನ್ನು ತಡೆಗಟ್ಟಬಹುದು.

ಇಂದು ನಡೆಯುತ್ತಿರುವ ಬಹುತೇಕ ಅಪರಾಧಗಳು ನಮ್ಮ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದಲೇ ಸಂಭವಿಸುತ್ತಿದೆ ಎಂದು ಹೇಳಿದರು. ಲಯನ್ಸ್‌ ಜಿಲ್ಲಾ ಸಂಯೋಜಕ ಗೋವರ್ಧನ್‌ ಶಟ್ಟಿ ಅವರು ಮಾತನಾಡಿ ಸಮಾಜಕ್ಕೆ ನಾವು ಸಲ್ಲಿಸುವ ಸೇವೆಯೇ ಕೊನೆ ತನಕ ಉಳಿಯುತ್ತದೆ ಎಂದು ಹೇಳಿ ಸೇವೆಯೊಂದೆ ಪ್ರತಿಯೊಬ್ಬರ ಜೀವನದ ಶ್ರೇಷ್ಟ ಕಾರ್ಯ ಎಂದು ಬಣ್ಣಿಸಿದರು. ೧೦ ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ ೯೭ ಅಂಕಗಳಿಗೂ ಹೆಚ್ಚು ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಕುಮಾರಿ ಗಾನ ಮತ್ತು ಕುಮಾರಿ ಶ್ರಾವಣಿ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್‌ ಅದ್ಯಕ್ಷ ಕೆ ಎನ್‌ ತೇಜಸ್ವಿ ಅದ್ಯಕ್ಷತೆ ವಹಿಸಿದ್ದರು. ಪಧಾಧಿಕಾರಿಗಳಾದ ಸಿ ಕೆ ರೋಹಿತ್‌, ಕೆ ಎಂ ಜಗದೀಶ್‌ , ಎಸ್‌ ಎನ್‌ ಯೋಗೇಶ್‌ , ಉಪಸ್ಥಿತರಿದ್ದರು.

See also  ಸಂತಾನಹರಣ ಚಿಕಿತ್ಸೆ ಎಡವಟ್ಟು ಪ್ರಕರಣ: ವೈದ್ಯೆ ಅಮಾನತು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು