ಮೈಸೂರು: ರಾಜ್ಯದಲ್ಲಿ ನಡೆಯುವಂತಹ ಜನಪರ, ರೈತಪರ, ಕನ್ನಡನಾಡು, ನುಡಿ ರಕ್ಷಣೆಗೆ ನಡೆಯುವ ಗಾಂಧೀಜಿರವರ ಮಾರ್ಗದ ಹೋರಾಟಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ವರುಣಾ ಕ್ಷೇತ್ರದ ಶಾಸಕ ಡಾ. ಎಸ್.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಶಾಸಕರು ತಮ್ಮ ವರುಣಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಸಾರ್ವಜನಿಕರು ಹಾಗೂ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಡಿಸೆಂಬರ್ 5 ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿ ಪ್ರಶ್ನೆಗೆ ಉತ್ತರಿಸಿದ ಶಾಸಕರು ರಾಜ್ಯದ ರಕ್ಷಣೆಗೆ ಕನ್ನಡ ನಾಡು-ನುಡಿಗೆ ರೈತರ ಪರ, ಜನಪರ, ಗಾಂಧೀಜಿಯವರ ಮಾರ್ಗದ ಹೋರಾಟಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ, ಸರ್ಕಾರಗಳು ಯಾವುದೇ ಇರಲಿ ಸಂಕಷ್ಟಕ್ಕೆ ಸಿಲುಕಿದ ರೈತರಿಗಾಗಲಿ, ಕನ್ನಡಿಗರಿಗಾಗಲಿ, ಕಾರ್ಮಿಕರಿಗಾಗಲಿ ತೊಂದರೆಯಾದಾಗ ಅದನ್ನು ಖಂಡಿಸಿ ನಡೆಯುವಂತಹ ಶಾಂತಿಯುತ ಹೋರಾಟಗಳಿಗೆ ನಾವು ಸದಾ ಬೆಂಬಲ ವ್ಯಕ್ತಪಡಿಸಿ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರಲ್ಲದೇ ಮೊನ್ನೆ ರೈತ ವಿರೋಧಿ ಕಾನೂನು ವಿರುದ್ದ, ರೈತರು ನಡೆಸುತ್ತಿರುವ ದೆಹಲಿ ಚಲೋ ಹೋರಾಟದಲ್ಲಿ ರೈತರ ಜೊತೆ ನಡೆದುಕೊಂಡ ಪೊಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇವೆ, ಎಂದರಲ್ಲದೇ ಯಾವುದೇ ಪಕ್ಷವಿರಲಿ, ತಮ್ಮ ಹಕ್ಕಿಗಾಗಿ ಹೋರಾಟ ಮಾಡುವವರ ಹಕ್ಕನ್ನು ಮೊಟಕು ಮಾಡುವುದು ಅವರ ಮೇಲೆ ದೌರ್ಜನ್ಯ ಮಾಡುವುದು ಸರಿಯಾದ ಕ್ರಮವಲ್ಲ ಎಂದರಲ್ಲದೇ ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಬಿ.ಜೆ.ಪಿ ಸರ್ಕಾರಗಳು ಹೋರಾಟಗಾರರ ಮೇಲೆ, ಪೊಲೀಸರ ಮೂಲಕ ಹೋರಾಟವನ್ನು ಧಮನ ಮಾಡಲು ಮುಂದಾಗಿದ್ದು ಇದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ಮುದ್ದರಾಮೇಗೌಡ, ಮುಖಂಡರಾದ ಎಂ.ಶಿವರಾಜು, ಸಿದ್ದರಾಮನಹುಂಡಿ ಸಿದ್ದರಾಮು, ಭುಗತಗಳ್ಳಿ ಮಣಿ ಮುಂತಾದವರು ಹಾಜರಿದ್ದರು.