News Kannada
Monday, February 06 2023

ಮೈಸೂರು

ಮೈಸೂರು ರೈಲ್ವೆಯಿಂದ ವ್ಯಾಪಾರ ಅಭಿವೃದ್ದಿ ಘಟಕ ಸ್ಥಾಪನೆ

Photo Credit :

ಮೈಸೂರು ರೈಲ್ವೆಯಿಂದ ವ್ಯಾಪಾರ ಅಭಿವೃದ್ದಿ ಘಟಕ ಸ್ಥಾಪನೆ

 

ಮೈಸೂರು: ರೈಲ್ವೆ ಸರಕು ಸಾಗಣೆಗೆ ಉತ್ತೇಜನ ನೀಡುವ ಸಲುವಾಗಿ ವಲಯಮಟ್ಟ ಮತ್ತು ವಿಭಾಗೀಯ ಮಟ್ಟದಲ್ಲಿ ಎಲ್ಲಾ ಸಂಬಂಧಿತ ಇಲಾಖೆಗಳ ಕಾರ್ಯಕಾರಿಗಳನ್ನು ಒಳಗೊಂಡ ವ್ಯಾಪಾರ ಅಭಿವೃದ್ಧಿ ಘಟಕಗಳನ್ನು (ಬಿ.ಡಿ.ಯು) ಸ್ಥಾಪಿಸಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್, ಬಿ.ಡಿ.ಯು.ನ ನಿರಂತರ ಪ್ರಚಾರದ ಪ್ರಯತ್ನಗಳಿಂದ ಮೈಸೂರು ವಿಭಾಗವು ಮೆಕ್ಕೆಜೋಳದ ಸಾಗಾಣೆ ದಟ್ಟಣೆಯನ್ನು ಮೊದಲಿನ ಮಟ್ಟಕ್ಕೆ ಪುನಃ ಸ್ಥಾಪಿಸಲು ಸಾಧ್ಯವಾಗಿದ್ದು ಮತ್ತು ಸಕ್ಕರೆ ಸಾಗಾಣೆಗಾಗಿ ಹೊಸ ಗ್ರಾಹಕರನ್ನು ಸಹ ಸೆಳೆದಿದೆ ಎಂದಿದ್ದಾರೆ.

ಮೊದಲ ಬಾರಿಗೆ ವಿಭಾಗವು, ಮೆಸರ್ಸ್ ಮೈಲಾರ್ ಶುಗರ್ ಕಂಪನಿ ಸಕ್ಕರೆ ಸಾಗಾಣೆಗಾಗಿ ರೈಲ್ವೆ ಸೇವೆ ಬಳಸಿಕೊಳ್ಳುವಂತೆ ಮಾಡಲು ಸಾಧ್ಯವಾಗಿದೆ. 1320 ಟನ್ ಸಕ್ಕರೆಯನ್ನು ಹಾವೇರಿಯ ಶ್ರೀ ಮಹಾದೇವಪ್ಪ ಮೈಲಾರ ರೈಲ್ವೆ ನಿಲ್ದಾಣದಿಂದ ಮಧ್ಯ ರೈಲ್ವೆ ವಲಯದ ಪನ್ವೆಲ್​ನ ಮೆಸರ್ಸ್ ನವಕಾರ್ ಕಾರ್ಪ್ ಲಿಮಿಟೆಡ್​ಗೆ ಒಟ್ಟು 760 ಕಿ.ಮೀ. ದೂರ ಸಾಗಿಸಿ ಮೈಸೂರು ವಿಭಾಗವು 13 ಲಕ್ಷ ಆದಾಯ ಗಳಿಸಿದೆ. ಎರಡು ವರ್ಷಗಳ ನಂತರ ಈ ವರ್ಷದಲ್ಲಿ ಬಿ.ಡಿ.ಯು.ನ ಪ್ರಯತ್ನದಿಂದಾಗಿ 1330 ಟನ್ ಮೆಕ್ಕೆಜೋಳವನ್ನು ರಾಣೆಬೆನ್ನೂರಿನಿಂದ 2303 ಕಿ.ಮೀ. ದೂರದ ಈಶಾನ್ಯ ರೈಲ್ವೆಯ ರುದ್ರಪುರ ನಗರಕ್ಕೆ ಸಾಗಿಸಿ ವಿಭಾಗಕ್ಕೆ ಸುಮಾರು 32 ಲಕ್ಷ ರೂ. ಆದಾಯ ಬಂದಿದೆ.ಸರಕು ಸಾಗಣೆಗೆ ಅತ್ಯಂತ ಅನುಕೂಲಕರ, ಸುರಕ್ಷಿತ ಮತ್ತು ವೇಗವಾದ ಮಾರ್ಗವಾಗಿ ರೈಲ್ವೆಯು ಹೊರಹೊಮ್ಮಿದ್ದು, ಪ್ರಚಾರ ತಂಡದ ಅಪಾರ ಪ್ರಯತ್ನಗಳು ಮತ್ತು ಉಪಕ್ರಮಗಳಿಂದಾಗಿ ಈ ತಿಂಗಳಲ್ಲಿ ವಿಭಾಗವು ಸುಮಾರು 45 ಲಕ್ಷ ರೂ. ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗಿದೆ. ಸರಕು ಸಾಗಣೆ ಯೋಜನೆಗಳನ್ನು ವಿವರಿಸಲು ಮತ್ತು ರೈಲ್ವೆಯನ್ನು ತಮ್ಮ ಆದ್ಯತೆಯ ಸಾರಿಗೆ ವಿಧಾನವಾಗಿ ಆಯ್ಕೆ ಮಾಡಲು ವ್ಯಾಪಾರಸ್ಥರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ನಿಯಮಿತವಾಗಿ ಗ್ರಾಹಕ ಸಭೆಗಳನ್ನು ನಡೆಸಲಾಯಿತು. ಮೈಸೂರು ವಿಭಾಗವು ಗ್ರಾಹಕರಿಗೆ ಅತ್ಯಂತ ಅನುಕೂಲಕರ ವಾತಾವರಣ ಮತ್ತು ತಮ್ಮ ಸರಕುಗಳಿಗೆ ಅಡೆತಡೆ ಹಾಗೂ ತೊಂದರೆಯಿಲ್ಲದ ಸಾರಿಗೆ ವ್ಯವಸ್ಥೆಯನ್ನು ನೀಡುತ್ತಿದೆ. ಸರಕು ಸಾಗಣೆ ಮತ್ತು ಸಾರಿಗೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಗ್ರಾಹಕರು ಮೈಸೂರು ವಿಭಾಗದ ವ್ಯಾಪಾರ ಅಭಿವೃದ್ಧಿ ಘಟಕವನ್ನು ಸಂಪರ್ಕಿಸಬಹುದು ಅಥವಾ ಸರಕು ಮತ್ತು ಪಾರ್ಸಲ್ ಬುಕ್ಕಿಂಗ್​ಗೆ ಪ್ಲೇ ಸ್ಟೋರ್‌ನಿಂದ ಏಕ ಹಂತದ ತಾಣವಾಗಿ ಕಾರ್ಯನಿರ್ವಹಿಸುವ ‘ಸ್ವಿಫ್ಟ್’ (SWIFT) ಅಪ್ಲಿಕೇಶನ್ (ಸರಕು ಸಾಗಣೆಗೆ ಏಕ ಗವಾಕ್ಷಿ ಇಂಟರ್ಫೇಸ್) ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ಸಿಎಂ ಮಗ ಬೆಲ್ಜಿಯಂಗೆ ಹೋಗಿದ್ದು ಕುಡಿದು ಡ್ರಗ್ಸ್ ತಗೊಂಡು ಮಜಾ ಮಾಡೋಕೆ: ಶ್ರೀನಿವಾಸ್ ಪ್ರಸಾದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು