ಮಂಡ್ಯ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯ ಬೆನ್ನಲ್ಲೆ ಜಿಲ್ಲೆಯಲ್ಲಿ ವೃದ್ಧ ಕಾಮುಕನೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
.ಅತ್ಯಾಚಾರ ಎಸಗಿದ ಆರೋಪಿಯನ್ನು ಮಂಡ್ಯದ ಗಾಂಧಿನಗರ ನಿವಾಸಿ ವೆಂಕಟೇಶ್(೬೧) ಎಂದು ಗುರುತಿಸಲಾಗಿದ್ದು, ಆತನನ್ನು ಬಂದಿಸಲಾಗಿದೆ.
ಮನೆಯಲ್ಲಿ ಒಬ್ಬಳೇ ಇರುತಿದ್ದ ಸಂತ್ರಸ್ಥೆ ಬಾಲಕಿಯ ಮನೆ ಪಕ್ಕದಲ್ಲೆ ವಾಸವಿದ್ದ ವೃದ್ದ , ಕಾರ್ಮಿಕರಾಗಿದ್ದ ಬಾಲಕಿಯ ಪೋಷಕರು ಕೆಲಸಕ್ಕೆ ತೆರಳಿದ ನಂತರ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.
ಇತ್ತ ಪಕ್ಕದ ಮನೆ ತಾತ ಕೆಟ್ಟ ದೃಷ್ಟಿಯಿಂದ ನೋಡುವುದು, ಮೈಕೈ ಮುಟ್ಟುತ್ತಾರೆ ಎಂದು ಬಾಲಕಿ ತನ್ನ ಪೋಷಕರ ಬಳಿ ಹೇಳಿದ್ದಾಳೆ. ಆದರೆ ಹೆತ್ತವರು ಮಾತ್ರ ಬಾಲಕಿಯ ಮಾತನ್ನು ನಿರ್ಲಕ್ಷ್ಯಿಸಿದ್ದಾರೆ. ಅಲ್ಲದೆ ಅವರು ಹಿರಿಯರು, ಬಾಲಕಿಯೇ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆಂದು ಸುಮ್ಮನಾಗಿದ್ದರು. ಇದೀಗ ಬಾಲಕಿ ಗರ್ಭಿಣಿಯಾಗಿದ್ದನ್ನು ಅರಿತ ಪೋಷಕರು ಮಂಡ್ಯ ಪಶ್ಚಿಮ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಕಾಮುಕ ವೃದ್ಧನನ್ನು ಬಂಧಿಸಿದ್ದಾರೆ.