ಮೈಸೂರು: ಜನರ ಕೈಗೆ ಸ್ಮಾರ್ಟ್ ಫೋನ್ ಬಂದ ನಂತರ ಫೋನ್ ಇದ್ದ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವುದು ನಿತ್ಯವೂ ಹೆಚ್ಚುತ್ತಲೇ ಇದೆ. ಮಂಗಳವಾರ ಸಂಜೆ ಕೆಆರ್ ಎಸ್ ಹಿನ್ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವತಿಯೋರ್ವಳು ಆಯತಪ್ಪಿ ಕೆಳಗೆ ಬಿದ್ದ ಘಟನೆ ಇಲವಾಲ ಸಮೀಪದ ಸಾಗರಕಟ್ಟೆಯ ಕೆಆರ್ ಎಸ್ ಹಿನ್ನೀರಿನ ಸೇತುವೆ ಸಮೀಪ ನಡೆದಿದೆ.
ತಕ್ಷಣವೇ ಅಲ್ಲಿದ್ದ ಸ್ಥಳೀಯರು ಯುವತಿಯನ್ನು ರಕ್ಷಿಸಿದ್ದಾರೆ. ಬಳಿಕ ಯುವತಿ ಸ್ಥಳದಿಂದ ತೆರಳಿದ್ದಾರೆ ಎಂದು ಇಲವಾಲ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.