ಕಲ್ಬುರ್ಗಿ: ಕೇಂದ್ರ ಸಚಿವಾಲಯಗಳ ಜಂಟಿ ಕಾರ್ಯಾಚರಣೆಯಲ್ಲಿ ಪ್ರವಾಹಕ್ಕೆ ತುತ್ತಾದವರ ನಿರ್ದಿಷ್ಟ ಮಾಹಿತಿಯನ್ನು ಕೊಡದಿದ್ದ ಕಾರಣಕ್ಕೆ ಸ್ಥಳೀಯ ಸರಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಮುಂದಿನ ಭಾಗಕ್ಕೆ ಹೋಗುವ ಅಷ್ಟರೊಳಗಾಗಿ ಅವರು ಕೇಳಿದ ನಿರ್ದಿಷ್ಟ ಮಾಹಿತಿ ನೀಡುವಂತೆ ಎಚ್ಚರಿಕೆ ನೀಡಿದರು.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ರಮೇಶಕುಮಾರ ಘಂಟಾ ಮತ್ತು ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ನಿರ್ದೇಶಕ ಡಾ. ಭರ್ತೇಂದು ಕುಮಾರ್ ಸಿಂಗ್ ಅವರು ಸೋಮವಾರ, ತಾಲೂಕಿನ ಕಪನೂರ ಸಮೀಪ ನೆರೆಯಿಂದ ಹಾನಿಯಾದ ಎಸ್ ಟಿಪಿ ಘಟಕ ಮತ್ತು ಸುತ್ತಲಿನ ಗ್ರಾಮಗಳ ಬೆಳೆ ಹಾನಿ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ರೈತರು ತಮ್ಮ ಕಷ್ಟಗಳನ್ನು ಕೇಂದ್ರ ಸಚಿವಾಲಯದ ಅಧಿಕಾರಿಗಳ ಮುಂದೆ ಹೇಳಿಕೊಂಡಾಗ, ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಲ್ಲೇ ಇದ್ದ ಜಿಲ್ಲಾಧಿಕಾರಿ ವಿ ವಿ ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಓ ಡಾ. ರಾಜಾ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ರಾತೇಂದ್ರನಾಥ ಅವರ ಬಳಿ ಕೇಳಿದರು.
ಆ ಸಂದರ್ಭದಲ್ಲಿ ಸರಿಯಾದ ಮಾಹಿತಿಯನ್ನು ನೀಡದಿದ್ದ ಕಾರಣ ಕೋಪಗೊಂಡ ಕೇಂದ್ರದ ಅಧಿಕಾರಿಗಳು , ಅವರು ಬರುವ ಮುಷ್ಯ ಮೊದಲ ತಿಳಿಸಿದ್ದರು ಸರಿಯಾದ ಮಾಹಿತಿಯನ್ನು ಕಲೆಹಾಕಿದ್ದ ಕಾರಣಕ್ಕೆ ಬಂದದ್ದಲ್ಲದೆ ತಕ್ಷಣವೇ ಕಲೆಹಾಕಿ ನೀಡುವಂತೆ ಎಚ್ಚರಿಕೆಯನ್ನು ನೀಡಿದರು.