ಮೈಸೂರು: ಅರ್ಕಾವತಿ ಡಿನೋಟಿಫಿಕೇಷನ್ ವಿಚಾರ ಹೊರಗೆ ಬಂದರೆ ವಿಪಕ್ಷ ನಾಯಕರು ಎಲ್ಲಿಗೆ ಹೋಗುತ್ತಾರೆ ಗೊತ್ತಾಗುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ತಿರುಗೇಟು ನೀಡಿದರು. ಇಂದು ಮಾದ್ಯಮದವರ ಜತೆ ಮಾತನಾಡುತಿದ್ದ ಅವರು ಡಿನೋಟಿಫಿಕೇಶನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳ ನಾಯಕರಿಗೆ ಹೀಗೆ ಟಾಂಗ್ ನೀಡಿದ ಅವರು ರಾಜಕೀಯ ಎಂದ ಮೇಲೆ ಆರೋಪ ಪ್ರತ್ಯಾರೋಪಗಳು ಸಹಜ. ಆದರೆ ವಸ್ತುಸ್ಥಿತಿಯೇ ಬೇರೆ ಇರುತ್ತದೆ. ರಾಜಕೀಯ ರಾಡಿಯ ಹಿಂದೆ ಮಾತನಾಡಬಾರದು. ಇವರು ಜೈಲಿಗೆ ಹೋಗಿದ್ದರು, ಅವರು ಜೈಲಿಗೆ ಹೋಗಿದ್ದರು ಅನ್ನುವ ಮಾತುಗಳೆಲ್ಲಾ ದೊಡ್ಡವರ ಬಾಯಲ್ಲಿ ಬರಬಾರದು. ಜವಾಬ್ದಾರಿಯುತ ರಾಜಕೀಯ ನಾಯಕರು ಶಾಂತಿಯ ವಾತಾವರಣ ನಿರ್ಮಾಣ ಮಾಡಬೇಕು. ಮಾನಸಿಕ ನೆಮ್ಮದಿ ಕದಡುವ ಮಾತುಗಳು ಯಾರಿಂದಲೂ ಬರಬಾರದು ಎಂದು ಸಲಹೆ ನೀಡಿದರು.
ಡಿನೋಟಿಫಿಕೇಶನ್ ವಿಚಾರವಾಗಿ ಯಡಿಯೂರಪ್ಪನವರು ಜೈಲಿಗೆ ಹೋಗಬೇಕು ಎನ್ನುವುದಾದರೆ ನೀವು ಮಾಡಿರೋದನ್ನೂ ಬಹಿರಂಗಪಡಿಸಿ. ಅರ್ಕಾವತಿ ಡಿನೋಟಿಫಿಕೇಶನ್ ವಿಚಾರ ಹೊರಗೆ ಬಂದರೆ ನೀವೂ ಎಲ್ಲಿಗೆ ಹೋಗುತ್ತೀರಿ ಅಂತ ಗೊತ್ತಾಗುತ್ತೆ ಎಂದು ಸಿಎಂ ವಿರೋಧ ಪಕ್ಷಗಳಿಗೆ ಹೆಚ್. ವಿಶ್ವನಾಥ್ ತಿರುಗೇಟು ನೀಡಿದರಲ್ಲದೆ ರಾಜಕೀಯದಲ್ಲಿ ಕೆಸರು ಎರಚಬಾರದು ಎಂದರು.