News Kannada
Sunday, January 29 2023

ಮೈಸೂರು

ಕುರುಬ ಹೋರಾಟಕ್ಕೆ ಸಿದ್ದರಾಮಯ್ಯ ಮನವೊಲಿಸಲ್ಲ ; ಈಶ್ವರಪ್ಪ

Photo Credit :

ಕುರುಬ ಹೋರಾಟಕ್ಕೆ ಸಿದ್ದರಾಮಯ್ಯ ಮನವೊಲಿಸಲ್ಲ ; ಈಶ್ವರಪ್ಪ

ಮೈಸೂರು: ಕುರುಬ ಸಮುದಾಯ ಇಬ್ಭಾಗ ಆಗಿಲ್ಲ, ಸಮಾಜದ ಬಹುತೇಕರು ಹೋರಾಟದಲ್ಲಿದ್ದಾರೆ, ಸಿದ್ದರಾಮಯ್ಯನವರ ಮನವೊಲಿಸುವ ತೆವಲು ನನಗಿಲ್ಲ ಎಂದು ಸಚಿವ ಕೆ ಎಸ್‌ ಈಶ್ವರಪ್ಪ ಅವರು ಹೇಳಿದರು.

ನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಕೈ ಜೋಡಿಸಿದ್ದೇವೆ. ಇದು ಹೋರಾಟ ಅಲ್ಲ, ಜನ ಜಾಗೃತಿ ಎಂದರು.

ದೇವರಾಜ ಅರಸು, ರಾಮಕೃಷ್ಣ ಹೆಗಡೆ ಕಾಲದಲ್ಲಿ ಕೇಂದ್ರಕ್ಕೆ ವರದಿ ಕಳುಹಿಸಿಲ್ಲ. ಈ ವಿಚಾರದಲ್ಲಿ ಸಾಕಷ್ಟು ರಾಜಕೀಯ ಒತ್ತಡ ಇತ್ತು ಎನ್ನುವ ಮಾತಿತ್ತು. ಗುರುಗಳು ಬಂದು ನಮ್ಮನ್ನು ಕೇಳಿಕೊಂಡಿದ್ದರು. ಈಶ್ವರಪ್ಪ, ರೇವಣ್ಣ, ಬಂಡೆಪ್ಪ ಕಾಶಂಪೂರ್ ಎಲ್ಲರೂ ಮನೆಗೆ ಬಂದು ಕೇಳಿದ್ದಾರೆ. ಹೀಗಾಗಿ ನಾನೂ ಜನ ಜಾಗೃತಿ ಕೆಲಸದಲ್ಲಿ ಧುಮುಕಿದ್ದೇನೆ. ಗುರುಗಳನ್ನು ದಾರಿ ತಪ್ಪಿಸುವ ಕೆಲಸ ಯಾರಿಂದಲೂ ಆಗಲ್ಲ. ಕುರುಬ ಸಮುದಾಯ ಇಬ್ಭಾಗ ಆಗಿಲ್ಲ. ಯಾರಿಗೆ ಎಸ್‌ ಟಿ ಮೀಸಲಾತಿ ಬೇಕು ಅವರು ಬರುತ್ತಾರೆ, ಇಲ್ಲ ಅಂದ್ರೆ ಇಲ್ಲ ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

See also  ಕದ್ದು ಹಸುಗಳನ್ನ ಸಾಗಿಸುತ್ತಿದ್ದ ವಾಹನವನ್ನ ಹಿಂಬಾಲಿಸಿ ಹಿಡಿದ ಗ್ರಾಮಸ್ಥರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು