ಮೈಸೂರು: ಪೋಲೀಸ್ ಇಲಾಖೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ 2020ರ ಅಂಗವಾಗಿ ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕದ ವತಿಯಿಂದ ನಗರ ಅಪರಾಧ ವಿಭಾಗ, ಮಕ್ಕಳ ವಿಶೇಷ ಪೊಲೀಸ್ ಘಟಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ , ಮಕ್ಕಳ ಸಹಾಯವಾಣಿ -1098, ಆಲನಹಳ್ಳಿ ಪೊಲೀಸ್ ಠಾಣೆ ಮತ್ತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ಇವರ ಸಹಯೋಗದೊಂದಿಗೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುವ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆಲನಹಳ್ಳಿ ರಿಂಗ್ ರೋಡ್ ಸಿಗ್ನಲ್ ಮತ್ತು ನಂಜನಗೂಡು ರಸ್ತೆ ರಿಂಗ್ ರೋಡ್ ಸಿಗ್ನಲ್ ಬಳಿ ರಕ್ಷಣಾ ಕಾರ್ಯಾಚರಣೆ ನಡೆಸಿ ಭಿಕ್ಷೆ ಬೇಡುತ್ತಿದ್ದ ಏಳು ಮಂದಿ ಮಹಿಳೆಯರು ಮತ್ತು ಅವರ 9 ಮಂದಿ ಮಕ್ಕಳನ್ನು ರಕ್ಷಣೆ ಮಾಡಿ ಮುಂದಿನ ಪುನರ್ವಸತಿಗಾಗಿ ವಿಜಯನಗರದ ಸ್ತ್ರೀ ಸೇವಾನಿಕೇತನ, ಕ್ಕೆ ದಾಖಲಿಸಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯ ನೇತೃತ್ವವನ್ನು ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್ ಗೌಡ, ಗೀತಾ ಪ್ರಸನ್ನ ವಹಿಸಿದ್ದರು.