ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಸಹಯೋಗದಲ್ಲಿ ಜ.6ರಂದು `ಕೃತಿಗಳ ಲೋಕಾರ್ಪಣೆ’ ಹಾಗೂ ಶೇ.50 ರಿಯಾಯಿತಿ ದರದಲ್ಲಿ ಎರಡು ದಿನಗಳ `ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ’ ವನ್ನು ಆಯೋಜಿಸಲಾಗಿದೆ ಎಂದೂ ಕುಲಪತಿಗಳು ತಿಳಿಸಿದರು.
ಜ.6 ರಂದು ಬೆಳಿಗ್ಗೆ 11 ಗಂಟೆಗೆ ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯ ಆವರಣದಲ್ಲಿ ಈ ಮೇಳ ಉದ್ಘಾಟನೆಯಾಗಲಿದೆ ಎಂದರು. ಪುಸ್ತಕ ಮೇಳದ ಉದ್ಘಾಟನಾ ಕಾರ್ಯಕ್ರಮದಂದು ಡಾ.ಎಸ್.ಶಿವರಾಜಪ್ಪ ಅವರ ‘ಕವಿಜನ ಕಾಮಧೇನು ಮುಮ್ಮಡಿ ಕೃಷ್ಣರಾಜ ಒಡೆಯರ್’, ಡಾ.ಸಿ.ಪಾರ್ವತಿ ಅವರ ‘ಸಿದ್ಧಸಿದ್ಧಾಂತ ಪದ್ಧತಿ’, ಡಾ,ಎಂ.ಗೀತಾ ಅವರ ‘ಅಶ್ವಲಕ್ಷಣಮ್’, ಜಿ.ಎನ್.ಸಿದ್ದಲಿಂಗಪ್ಪ ಅವರ ‘ಪ್ರೊ.ಎಚ್.ದೇವಿರಪ್ಪ ಬದುಕು ಮತ್ತು ಬರಹ’, ಎಸ್.ಸಿ.ಶೋಭಾ ಅವರ ‘ಶ್ರೀಚಾಮುಂಡಿಕಾ ಲಘುನಿಘಂಟು’, ಡಾ.ದಿದ್ದಿಗಿ ವಂಶಿ ಕೃಷ್ಣ ಅವರ ‘ಸೂರ್ಯಚಂದ್ರವಂಶಾನುಚರಿತಮ್’ ಒಟ್ಟು ಐದು ಕೃತಿಗಳ ಲೋಕಾರ್ಪಣೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪುಸ್ತಕ ಮೇಳದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಪ್ರಕಟಿಸಿರುವ ಬಹುತೇಕ ಪುಸ್ತಕಗಳು ಶೇ.50 ರಿಯಾಯಿತಿ ದರದಲ್ಲಿ ಓದುಗರಿಗೆ ದೊರೆಯಲಿವೆ ಎಂದು ತಿಳಿಸಿದರು.