News Kannada
Monday, February 06 2023

ಮೈಸೂರು

ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಕಿರುಕುಳ: ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ

Photo Credit :

ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಕಿರುಕುಳ: ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ

ಮೈಸೂರು: ಅರಣ್ಯ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಕಿರುಕುಳದಿಂದ ಬೇಸತ್ತ ಕುಟುಂಬವೊಂದು ಆತ್ಮಹತ್ಯೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ನಗರದ ಅರಣ್ಯಭವನದ ಎದುರು ಪ್ರತಿಭಟನೆ ನಡೆಸಿದೆ.

ಹೆಚ್ ಡಿ ಕೋಟೆ ತಾಲೂಕಿನ ಬೆಟ್ಟದ ಬೀಡು ಗ್ರಾಮದ ಕುಮಾರಿ ಎಂಬವರೇ ತಮ್ಮ ಮಕ್ಕಳೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನನ್ನ ಪತಿ ಬೋರೇಗೌಡ ದಿನಗೂಲಿ ವಾಚರ್ ಆಗಿ ಕಳೆದ 2001 ರಿಂದ ಇಲ್ಲಿಯವರೆಗೂ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ. ಆದರೆ ಮಾರ್ಚ್ 2020ರಿಂದ ಅಕ್ಟೋಬರ್ 2020ರ ಸಂಬಳವನ್ನು ಕೊಟ್ಟಿಲ್ಲ. ನವೆಂಬರ್ 2020ರಿಂದ ಕೆಲಸಕ್ಕೆ ಬರುವುದು ಬೇಡವೆಂದು ತಿಳಿಸಿದ್ದಾರೆ. ನಮ್ಮ ಯಜಮಾನರು ಕಳೆದ 18-19ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ 43ವರ್ಷ. ಹಾಗಾಗಿ ಬೇರೆ ಕಡೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಕೆಲಸ ಇಲ್ಲದಿದ್ದರೆ ನಮ್ಮ ಸಂಸಾರ ಬೀದಿಗೆ ಬೀಳುತ್ತದೆ. ನನಗೂ ಆರೋಗ್ಯದ ಸಮಸ್ಯೆ ಇದ್ದು ಮಕ್ಕಳನ್ನು ಕೂಲಿ ಮಾಡಿ ಸಾಕಲು ಸಾಧ್ಯವಿಲ್ಲ.

 ಹಿರಿಯ ಅಧಿಕಾರಿಗಳು ನನ್ನ ಗಂಡನಿಗೆ ವಾಚರ್‌ ಕೆಲಸ ಕೊಡಿಸಬೇಕು. ಇಲ್ಲವಾದರೆ ನನ್ನ ಕುಟುಂಬದ ಎಲ್ಲಾ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. 

ನಮ್ಮ ಸಾವಿಗೆ ಕಾರಣ ಇಲಾಖೆಯ ನೌಕರರಾದ ವಲಯ ಅಧಿಕಾರಿ ಹಾಗೂ ಅರಣ್ಯ ವನಪಾಲಕರಾದ ವಿನೋದ್ ಕುಮಾರ್, ಮಾಲಯ್ಯ, ರಕ್ಷಕರಾದ ರಾಜೇಗೌಡ, ಅರ್ಜುನ ಇವರುಗಳೆಲ್ಲರೂ ನೇರವಾಗಿ ಕಾರಣರಾಗಿದ್ದು ಇವರಿಗೆ ಶಿಕ್ಷೆ ಆಗಬೇಕು. ಈ ಅಧಿಕಾರಿಗಳು 2018-19ರಲ್ಲಿ 6ತಿಂಗಳು ಸಂಬಳ ನೀಡಿಲ್ಲ. ಸರ್ಕಾರ ಕೊಡುವ ಸಂಬಳಕ್ಕೆ ದಾಖಲೆ ಇಲ್ಲದೆ ನಮ್ಮ ಮನೆಯವರಿಗೆ ಅಲ್ಲದೆ ಕೆಲಸ ನಿರ್ವಹಿಸುವ ಎಲ್ಲರಿಗೂ ಹೀಗೆ ಕಿರುಕುಳ ನೀಡುತ್ತಿದ್ದಾರೆ. ಈ ಕಿರುಕುಳ ನಿಲ್ಲಬೇಕು.ನಮ್ಮ ಪ್ರತಿಭಟನೆಯಿಂದ ಇತರರಿಗೆ ಒಳ್ಳೆಯದಾಗಲಿ ಎಂದು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

See also  ಹದಗೆಟ್ಟ ಕಂಚಗಾರಕೊಪ್ಪಲು ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು