News Kannada
Wednesday, October 05 2022

ಮೈಸೂರು

ಜೀವನದ ಸಂಕಷ್ಟ ಎದುರಿಸುವುದೇ ನಿಜವಾದ ಸಂಕ್ರಮಣ - 1 min read

Photo Credit :

ಜೀವನದ ಸಂಕಷ್ಟ ಎದುರಿಸುವುದೇ ನಿಜವಾದ ಸಂಕ್ರಮಣ

ಮೈಸೂರು: ನಮ್ಮ ಜೀವನ  ಸುಖ, ದುಃಖ ಸಂತೋಷಗಳಿಂದ ಕೂಡಿದ್ದು ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬರುವ ಸಂಕಷ್ಟಗಳನ್ನು ಎದುರಿಸುವುದೇ ನಿಜವಾದ ಸಂಕ್ರಮಣವಾಗಿದೆ ಎಂದು ಮಾಜಿ ಸಂಸದ  ಸಿ.ಎಚ್.ವಿಜಯಶಂಕರ್ ಹೇಳಿದರು.

ಪಾತಿ ಫೌಂಡೇಷನ್ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ  ಸಂಕ್ರಾಂತಿ ಹಬ್ಬದ ಅಂಗವಾಗಿ ಸಂಕ್ರಾಂತಿಯ ಸುಗ್ಗಿ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ ಕಳೆದ 14 ವರ್ಷದಿಂದ ನಿರಂತರವಾಗಿ ಸಂಕ್ರಾಂತಿಯ ಒಂದು ದಿನ ಮುಂಚಿತವಾಗಿಯೇ ನಿರಾಶ್ರಿತರು ಹಾಗೂ ಪೌರ ಕಾರ್ಮಿಕರಿಗೂ ಬಾಗಿನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ನಾವು ಸದಾ ಸಿದ್ಧರಾಗಿರಬೇಕು. ಸಂಕ್ರಮಣವು ಸಂತೋಷ ಪಡುವ ಹಬ್ಬವಾಗಿದ್ದು, ನಮ್ಮ ಪೂರ್ವಿಕರು ಹಬ್ಬ ಹರಿದಿನಗಳಲ್ಲಿ ವೈಜ್ಞಾನಿಕತೆ ಕಂಡು ಅದಕ್ಕೆ ಧಾರ್ಮಿಕ ಲೇಪನ ಕೊಟ್ಟಿದ್ದಾರೆ. ಸುಗ್ಗಿಯ ಸಂಭ್ರಮದ ಹಾಗೂ ಎಳ್ಳು ಬೆಲ್ಲದ ವಿಶೇಷತೆಯನ್ನು ಕನ್ನಡ ಸಾಹಿತ್ಯದಲ್ಲಿ ಸಂಕ್ರಮಣದ ಸೊಗಡನ್ನು ವೈವಿಧ್ಯಮಯವಾಗಿ ಬಿಂಬಿಸಲಾಗಿದೆ ಎಂದು ಹೇಳಿದರು.

ಮಾಜಿ ಮಹಾಪೌರ ಸಂದೇಶ್ ಸ್ವಾಮಿ ಮಾತನಾಡಿ, ಸಂಕ್ರಾಂತಿ ಸಡಗರ ಕನ್ನಡ ಸಾಹಿತ್ಯದಲ್ಲಿ ವಿವಿಧ ಹಂತಗಳಲ್ಲಿ ಬಿಂಬಿತವಾಗಿದೆ. ಜನಪದರಂತೂ ತಮ್ಮ ಜೀವನಕ್ಕೂ ಸಂಕ್ರಮಣಕ್ಕೆ ಅವಿನಾಭಾವ ಸಂಬಂಧ ಕಲ್ಪಿಸಿ ಕಾವ್ಯ ಕಟ್ಟಿ ಹಾಡಿದ್ದಾರೆ. ಸುಗ್ಗಿಯ ಸಂಭ್ರಮದ ಹಾಗೂ ಎಳ್ಳು ಬೆಲ್ಲದ ವಿಶೇಷತೆಯನ್ನು ಕನ್ನಡ ಸಾಹಿತ್ಯದಲ್ಲಿ ಸಂಕ್ರಮಣದ ಸೊಗಡನ್ನು ವೈವಿಧ್ಯಮಯವಾಗಿ ಬಿಂಬಿಸಲಾಗಿದೆ. ಸಂಕ್ರಾಂತಿ ಬದುಕಿನ ಬದಲಾವಣೆಯ ಪರ್ವ ಸಂಕ್ರಾಂತಿ ಕೇವಲ ಅದೊಂದು ಹಬ್ಬವಲ್ಲ ಬದಲಿಗೆ ಅನೇಕ ಮೌಲ್ಯಗಳನ್ನು ಸಾರುವ ವಾಹಕವಾಗಿದೆ ಸೂರ್ಯ ತನ್ನ ದಿಕ್ಕನ್ನು ಬದಲಾವಣೆ ಮಾಡುವ ಮೂಲಕ ಪ್ರಕೃತಿಯಲ್ಲಿ ಬದಲಾವಣೆಯಾಗುವುದರ ಜೊತೆಗೆ ಮಾನವ ಬದುಕಿನ ಬದಲಾವಣೆಗೆ ತನ್ನದೇ ಆದ ಅನೇಕ ಮೌಲ್ಯಗಳನ್ನು ನೀಡುವ ಮೂಲಕ ಪರಿವರ್ತನೆಯ ಸಾಧನದಂತೆ ಕಾರ್ಯ ಮಾಡುತ್ತದೆ ಎಂದು ಹೇಳಿದರು

ಇದೇ ವೇಳೆ ಪೌರ ಕಾರ್ಮಿಕರು ಹಾಗೂ ಸಹಾಯಕ ಮಹಿಳೆಯರಿಗೆ ಸೀರೆ, ಬಳೆ, ಎಳ್ಳು ಬೆಲ್ಲ, ಕುಂಕುಮ ಅರಿಶಿನ, ಬಾಗಿನವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಪಾತಿ ಫೌಂಡೇಷನ್   ಅಧ್ಯಕ್ಷರಾದ ಎಂ.ಡಿ. ಪಾರ್ಥಸಾರಥಿ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಅಕ್ಕನ ಬಳಗ ಶಾಲೆಯ ಮುಖ್ಯಶಿಕ್ಷಕರಾದ ಸುಗುಣ, ಉದ್ಯಮಿ ಕುಮಾರ್ ಆರಾಧ್ಯ, ಕಲಾವಿದರಾದ ಕೃಷ್ಣಮೂರ್ತಿ, ಹರೀಶ್ ನಾಯ್ಡು, ಚಕ್ರಪಾಣಿ, ಶಿಕ್ಷಕಿ ಜಿ.ಪುಷ್ಪಾವತಿ ಇನ್ನಿತರರು ಇದ್ದರು.

See also  ಅಮೃತ ಜಯಲಲಿತಾ ಮಗಳಲ್ಲ: ಸೋದರ ವಾಸುದೇವನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು