News Kannada
Wednesday, December 07 2022

ಮೈಸೂರು

ಕಸಾಪ ಚುನಾವಣೆ: ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ

Photo Credit :

ಕಸಾಪ ಚುನಾವಣೆ: ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ

ಮೈಸೂರು: ಕನ್ನಡ ಸಾಹಿತ್ಯ ಪರಿಷತ್‍ಗೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಚಟುವಟಿಕೆಗಳು ಗರಿಗೆದರಿವೆ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿಗಳು ಆರಂಭಗೊಂಡಿವೆ. ಈ ಚುನಾವಣೆಯೂ ಯಾವುದೇ ರಾಜಕೀಯ ಪಕ್ಷಗಳು ನಡೆಸುವ ಚುನಾವಣೆಗಿಂತ ಕಡಿಮೆ ಇಲ್ಲದಂತೆ ನಡೆಯುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್‍ಗೆ ಸದಸ್ಯರಾದವರು ಮಾತ್ರ ಮತ ಚಲಾಯಿಸಲು ಅರ್ಹರಾಗಿರುವುದರಿಂದ ಮತದಾರರ ಮನೆ ಬಾಗಿಲು ತಟ್ಟುವ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆ. ಮೇ.9ರಂದು ಜಿಲ್ಲಾ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಪರ್ಧಾ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಲೇ ಹೋಗುತ್ತಿದೆ.

ಮೈಸೂರಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಲವು ಮಂದಿ ಸ್ಪರ್ಧಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆಯಾದರೂ ಸಾಹಿತಿ ಬನ್ನೂರು ರಾಜು ಮತ್ತು ಮಡ್ಡಿಕೆರೆ ಗೋಪಾಲ್ ಅವರು ಈಗಿನಿಂದಲೇ ಚುನಾವಣಾ ಪ್ರಚಾರ ಆರಂಭಿಸಿರುವುದು ಕಾಣಿಸುತ್ತಿದೆ. ಗೆಳೆಯರು, ಸಾಹಿತ್ಯ ಬಳಗ ಸೇರಿದಂತೆ ಹಲವರ ಒಡನಾಟದಲ್ಲಿದ್ದುಕೊಂಡು ತನ್ನದೇ ಆದ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಮಡ್ಡಿಕೆರೆ ಗೋಪಾಲ್ ಅವರು ಈ ಹಿಂದೆ ಅವರು ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದೀಗ ಮತ್ತೆ ಆಯ್ಕೆ ಬಯಸಿ ಸ್ಪರ್ಧೆ ನಡೆಸಿದ್ದು, ಗ್ರಾಮೀಣ ಮಟ್ಟದಿಂದಲೇ ಪ್ರಚಾರ ಶುರು ಮಾಡಿದ್ದಾರೆ. ಇವರು ಮಾತ್ರವಲ್ಲದೆ ಇನ್ನಷ್ಟು ಮಂದಿ ಅಧ್ಯಕ್ಷರಾಗುವ ಬಯಕೆ ಹೊತ್ತು ಸ್ಪರ್ಧಿಸುವ ಸಾಧ್ಯತೆಯಿದೆ.

ಕಳೆದ ಬಾರಿ ಡಾ.ವೈ.ಡಿ.ರಾಜಣ್ಣ ಅವರು ಬನ್ನೂರು ರಾಜು ಅವರನ್ನು ಸೋಲಿಸಿ ಅಧ್ಯಕ್ಷ ಗಾದಿ ಹಿಡಿದಿದ್ದರು. ಆದರೆ ಈ ಬಾರಿ ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಗಾದಿಯನ್ನು ಯಾರು ಅಲಂಕರಿಸುತ್ತಾರೋ ಗೊತ್ತಿಲ್ಲ. ಆದರೆ ಅದಕ್ಕಾಗಿ ತಂತ್ರ, ಪ್ರತಿತಂತ್ರ ಮತ್ತು ಹೋರಾಟಗಳು ಮಾತ್ರ ನಡೆಯುತ್ತಲೇ ಇವೆ. ಸದ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ಬನ್ನೂರು ಕೆ.ರಾಜು ಮತ್ತು ಮಡ್ಡಿಗೆರೆ ಗೋಪಾಲ್ ಅವರು ಮುಂಚೂಣಿಯಲ್ಲಿದ್ದು, ಇಬ್ಬರ ನಡುವೆ ಪೈಪೋಟಿ ಏರ್ಪಡುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

ಬನ್ನೂರು ಕೆ.ರಾಜು ಅವರ ಬಯೋಡೇಟಾ ನೋಡಿದರೆ ಅವರು ಸಾಹಿತ್ಯ ಕೃಷಿಯನ್ನೇ ವೃತ್ತಿಯನ್ನಾಗಿಸಿಕೊಂಡು ಬದುಕು ಕಟ್ಟಿಕೊಂಡವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದುವರೆಗೆ ಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ನುಡಿಚಿತ್ರ, ಸಂಪಾದನೆ, ಸಂಶೋಧನೆ, ವಚನ, ಅಂಕಣಬರಹ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 50ಕ್ಕೂ ಹೆಚ್ಚು ಕೃತಿಗಳು ಹೊರ ಬಂದು ಕನ್ನಡಮ್ಮನ ಮಡಿಲನ್ನು ತುಂಬಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಹಿತ್ಯಾಸಕ್ತರು, ಸೇರಿದಂತೆ ಹಲವರ ಒಡನಾಟ ಅವರ ಅವರಿಗೆ ಸಹಕಾರಿ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ ಹೊಸತನ ತರುವ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡುವ ಉತ್ಸಾಹದಲ್ಲಿದ್ದಾರೆ.

ಇನ್ನು ಮಡ್ಡಿಕೆರೆ ಗೋಪಾಲ್ ಅವರು ಈ ಹಿಂದೆ ಅಧ್ಯಕ್ಷರಾಗಿ 2008ರಿಂದ 12ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಕಸಾಪದ ಬಗೆಗೆ ಹೆಚ್ಚಿನ ಅರಿವು ಇರುವುದರಿಂದ ಸಾಹಿತ್ಯಾಸಕ್ತರು ಮತ್ತು ಸದಸ್ಯರ ಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಇವರಿಗೆ ಹಾಲಿ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಚಂದ್ರು ಅವರು ಬೆಂಬಲ ನೀಡುತ್ತಿದ್ದಾರೆ.

See also  ಮೈಸೂರಿನಲ್ಲಿ ರಿಕ್ಷಾ ಚಾಲಕನ ಬರ್ಬರ ಹತ್ಯೆ 

ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಜಿಲ್ಲಾ ಸಾಹಿತ್ಯ ಭವನ ಉನ್ನತೀಕರಣ, ತಾಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನ ನಿರ್ಮಾಣ, ಉದಯೋನ್ಮುಖ ಕವಿಗಳ ಕೃತಿಗಳನ್ನು ಸಾಹಿತ್ಯ ಪರಿಷತ್ ವತಿಯಿಂದ ಉಚಿತವಾಗಿ ಪ್ರಕಟಿಸುವುದು ಹಾಗೂ ಮತ್ತೆ  ಪ್ರವಾಸ ಕವಿಗೋಷ್ಠಿ ಮುಂದುವರಿಸಿ ಹಳ್ಳಿ ಹಳ್ಳಿಗಳಿಗೆ ನಾಡಿನ ಕವಿಗಳ ಪರಿಚಯ ಮಾಡಿಸುವ ಕೆಲಸ ಮಾಡುವುದಾಗಿ ಹೇಳುತ್ತಾ ಮಡ್ಡಿಕೆರೆ ಗೋಪಾಲ್ ಅವರು ಮತಯಾಚಿಸುತ್ತಿದ್ದಾರೆ. ಒಟ್ಟಾರೆಯಾಗಿ ಮೈಸೂರಿನಲ್ಲಿ ಕಸಾಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಕನ್ನಡಾಭಿಮಾನಿಗಳು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು