News Kannada
Wednesday, December 07 2022

ಮೈಸೂರು

ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳಕ್ಕೆ ವಿರೋಧ

Photo Credit :

ಮೈಸೂರು: ಅರಮನೆ ಪ್ರವೇಶ ದರ ಹೆಚ್ಚಳ ವಿರೋಧಿಸಿ ಕೃಷ್ಣರಾಜ ಯುವ ಬಳಗದ ವತಿಯಿಂದ ಅರಮನೆ ಸುತ್ತಮುತ್ತ ಆಟೋ ಚಾಲಕರು ಹಾಗೂ ವ್ಯಾಪಾರಸ್ಥರು, ಟಾಂಗಾ ಗಾಡಿ ಅವರಿಂದ ಸಹಿ ಸಂಗ್ರಹಿಸಲಾಯಿತು. ಅಲ್ಲದೆ, ಸಾರ್ವಜನಿಕರಿಂದ ಪಡೆದ ಸಹಿ ಸಂಗ್ರಹವನ್ನು ಮುಂದಿನ ದಿನಗಳಲ್ಲಿ ಅರಮನೆ ಆಡಳಿತ ಮಂಡಳಿಗೆ ಹಸ್ತಾಂತರಿಸಿ ಅರಮನೆ ಪ್ರವೇಶ ದರ ಯಥಾಸ್ಥಿತಿ ಕಾಪಾಡಲು ಮನವಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತಂತೆ ಮಾತನಾಡಿದ ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ಅವರು, ಕೊರೊನಾ ಹೊಡೆತಕ್ಕೆ ಸಿಲುಕಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೆ ಅರಮನೆ ಪ್ರವೇಶ ದರ ಹೆಚ್ಚಳದಿಂದ ಮತ್ತೆ ಹೊಡೆತ ಬೀಳಲಿದೆ. ಸಂಕಷ್ಟ ಸಂದರ್ಭದಲ್ಲಿ ದರ ಹೆಚ್ಚಳ ಯಾವ ಕಾರಣಕ್ಕೆ ಎಂದು ಪ್ರಶ್ನಿಸಿರುವ ಅವರು, ಭಾರೀ ನಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮ ಈಗಷ್ಟೇ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ .ಇಂತಹ ಸಂದರ್ಭದಲ್ಲಿ ಶುಲ್ಕ ಹೆಚ್ಚಳದಿಂದ ಪ್ರವಾಸಿಗರನ್ನೇ ನಂಬಿ ಸಾವಿರಾರು ಕುಟುಂಬ ಜೀವನ ಮಾಡುತ್ತಿದ್ದಾರೆ. ಈಗಾಗಲೇ ಕೋವಿಡ್ ನಿಂದ ಎರಡು ವರ್ಷದಿಂದ ಪ್ರವಾಸಿಗರ ಬಾರದೆ ವ್ಯಾಪಾರಸ್ಥರಿಗೆ ಜೀವನ ಮಾಡಲು ಬಹಳ ಸಂಕಷ್ಟದಲ್ಲಿದ್ದಾರೆ.

ಈ ಬಾರಿ ದಸರಾದಲ್ಲಾದರೂ ವ್ಯಾಪಾರದಲ್ಲಿ ಚೇತರಿಸಿಕೊಳ್ಳಬಹುದು ಎಂದು ಆಸೆಯಲ್ಲಿ ವ್ಯಾಪಾರಸ್ಥರಿದ್ದು, ಇಂತಹ ಸಂದರ್ಭದಲ್ಲಿ ಅರಮನೆ ಪ್ರವೇಶ ದರ ಹೆಚ್ಚಳ ಮಾಡಿರುವುದು ಬೇಸರದ ಸಂಗತಿ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಅರಮನೆಯ ಪ್ರವೇಶ ದರ ಹೆಚ್ಚಳ ಯಾವ ಕಾರಣಕ್ಕೆ? ಪ್ರವಾಸಿಗರು ಹೆಚ್ಚಾಗಿ ಬರಲಿ ಎಂದು ಒಂದು ಕಡೆ ಪ್ರವಾಸೋದ್ಯಮ ಇಲಾಖೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿದರೆ, ಇನ್ನೊಂದೆಡೆ ಅರಮನೆ ಆಡಳಿತ ಮಂಡಳಿ ಪ್ರವಾಸ ದರ ಹೆಚ್ಚಳ ಮಾಡಿರುವುದು ಬೇಸರದ ಸಂಗತಿಯಾಗಿದೆ.

ಹಾಗಾಗಿ ಪ್ರವೇಶ ದರ ಎಂದಿನಂತೆ ಮುಂದುವರಿಸಬೇಕು ಯಾವುದೇ ಕಾರಣಕ್ಕೂ ಇಂತಹ ಸಂದರ್ಭದಲ್ಲಿ ಪ್ರವೇಶ ದರ ಹೆಚ್ಚು ಮಾಡಲು ಮುಂದಾಗಬಾರದು ಎಂದು ಅರಮನೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ತೀರ್ಥಕುಮಾರ್, ಮಹೇಂದರ್ ಶೈವಾ, ಶಿವಶಂಕರ್, ಮಹದೇವ್ ಪ್ರಸಾದ್, ಸ್ವಾಮಿ, ಹರೀಶ್ ನಾಯ್ಡು ಇದ್ದರು.

See also  ಮೈಸೂರಿನ ಮನೆಗಳಲ್ಲೀಗ ಬೊಂಬೆಗಳ ಮೆರವಣಿಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು