News Kannada
Monday, December 05 2022

ಮೈಸೂರು

ಯುವಕರು ಸಮಾಜದ, ರಾಷ್ಟ್ರದ ಋಣ ತೀರಿಸುವ ಕೆಲಸ ಮಾಡಬೇಕು : ದತ್ತಾತ್ರೇಯ ಹೊಸಬಾಳೆ

Photo Credit :

ಮೈಸೂರು: ಯುವಕರು ಸಮಾಜದ, ರಾಷ್ಟ್ರದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.

ಶನಿವಾರ ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮ.ವೆಂಕಟರಾಮು ಅಭಿನಂದನಾ ಸಮಿತಿ ಹಾಗೂ ಪ್ರಲಕ್ಷ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮ.ವೆಂಕಟರಾಮು ಅವರ ಅಭಿನಂದನೆ ಹಾಗೂ ಸಾಮರಸ್ಯದ ಸಹೃದಯಿ ಮ.ವೆಂಕಟರಾಮು ಗ್ರಂಥ ಬಿಡುಗಡೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಆಶಯ ನುಡಿಗಳನ್ನಾಡಿದ ಅವರು, ಇಂದಿನ ಹಾಗೂ ಮುಂದಿನ ಯುವಪೀಳಿಗೆಯವರು ರಾಮಕೃಷ್ಣ ಸ್ವಾಮಿ, ಮ.ವೆಂಕಟರಾಮು ಅವರಂತಹ ಹಿರಿಯರ ಸಾಮಾಜಿಕ ಮೌಲ್ಯ ಗಳು, ಧ್ಯೇಯ, ಆದರ್ಶ ಗಳನ್ನು ಓದಿ, ತಮ್ಮ ಜೀವನದ ಲ್ಲಿ ಅವುಗಳನ್ನು ಅಳವಡಿಸಿಕೊಂಡು, ಹಿರಿಯರು ಹಾಕಿಕೊಟ್ಟಿರುವ ಆದರ್ಶ ಮಾರ್ಗದಲ್ಲಿ ನಡೆಯಬೇಕು. ರಾಷ್ಟ್ರದ, ಸಮಾಜದ ಸೇವೆಯನ್ನು ಮಾಡುವ ಮೂಲಕ ಋಣ ತೀರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಬೇರೆಯವರಿಗೆ ಯಾವುದೇ ರೀತಿಯ ನೋವು ಕೊಡದೆ, ಸಮಾಜ ಕಂಟಕರಿಗೆ, ದುಷ್ಟರಿಗೆ ತಲೆ ಭಾಗದೆ ಧೈರ್ಯದಿಂದ, ಸ್ವಾಭಿಮಾನದಿಂದ ನಿಲ್ಲಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಧರ್ಮ ಪಾಲನೆ ಮಾಡಬೇಕು ಎಂದು ಹೇಳಿದರು.

ಜೀವನ ಮೌಲ್ಯ ಪದ್ಧತಿ, ಶ್ರೇಷ್ಠ ಸಾಮಾಜಿಕ ಪರಂಪರೆ ಗೌರವಿಸುವ ಇಂತಹ ಕಾರ್ಯ ಕ್ರಮಗಳು ನಡೆಯಬೇಕು. ವ್ಯಕ್ತಿಯ ಗುಣಗಾನಕ್ಕಾಗಿ ಅಲ್ಲ, ಸಂಘದ ಕಾರ್ಯಕರ್ತರಾಗಿ, ಸಂಘ ನೀಡಿದ ವಿವಿಧ ಜವಾಬ್ದಾರಿಗಳನ್ನು ಯೋಗ್ಯವಾಗಿ ನಿರ್ವಹಿಸಬೇಕು. ಎಲ್ಲಾ ವರ್ಗಗಳನ್ನು ಜೋಡಿಸಿಕೊಂಡು, ಸಂಘವನ್ನು ವಿರೋಧಿಸುತ್ತಿರುವ ಜನರಿಗೆ ಸಂಘ ಏನೆಂದು ತೋರಿಸಿದವರು ಮ.ವೆಂಕಟರಾಮು. ಅವರ ಆದರ್ಶ, ಜೀವನ ಮೌಲ್ಯಗಳು, ಧ್ಯೇಯವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ನ ಹಿರಿಯ ಪ್ರಚಾರ ಕರಾದ ಸು.ರಾಮಣ್ಣ. ಸುತ್ತೂರು ಶ್ರೀ, ಉದ್ಯಮಿ ಜಗನ್ನಾಥ್, ಮ.ವೆಂಕಟರಾಮು, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಮಾಜಿ ವಿಧಾನ ಪರಿಷತ್ ಸದಸ್ಯ, ವಾಮನರಾವ್ ಬಾಪಟ್ ಮತ್ತಿತರರು ಉಪಸ್ಥಿತರಿದ್ದರು.

See also  ಅರಮನೆಯ ವೈಶಿಷ್ಟ್ಯಪೂರ್ಣ ದ್ವಾರ ಯಾವುದು?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು