ಮೈಸೂರು: ಮೈಸೋಗಸ್ ನೆಫ್ರೊ, ಯುರಾಲಜಿ ಸಂಸ್ಥೆ ಮೈಸೂರು ವಿಭಾಗ ಹಾಗೂ ಮೈಸೂರು ವೈದಕೀಯ ಮಹಾವಿದ್ಯಾಲಯ ಯುರಾಲಜಿ ವಿಭಾಗದ ವತಿಯಿಂದ ವಾರ್ಷಿಕವಾಗಿ ನಡೆದ ಲೈವ್ ಆಪರೇಷನ್ ಕಾರ್ಯಾಗಾರವನ್ನು ಎಂಎಂಸಿಆರ್ ಐನ ಡೀನ್ ಹಾಗೂ ನಿರ್ದೇಶಕರಾದ ಡಾ ದಿನೇಶ್ ಹೆಚ್.ಎನ್. ಉದ್ಘಾಟಿಸಿದರು.
ಮೈಸೂರಿನ ರ್ಯಾಡಿಸನ್ಬ್ಲೂ ಹೋಟೆಲ್ನಲ್ಲಿ ನಡೆದ ರಾಷ್ಟ್ರಮಟ್ಟದ ಒಂದು ದಿನದ ಕಾರ್ಯಗಾರದಲ್ಲಿ ನೆಫ್ರೋ, ಯುರೋಲಜಿ ಸಂಸ್ಥೆ ಮೈಸೂರು ವಿಭಾಗದ ಆಪರೇಷನ್ ಥಿಯೇಟರ್ ಹಾಗೂ ಮೈಸೂರು ವೈದಕೀಯ ಮಹಾವಿದ್ಯಾಲಯದ ಸ್ಟೋನ್ಬಿಲ್ಡಿಂಗ್ನ ಆಪರೇಷನ್ ಥಿಯೇಟರ್ನಿಂದ ನಡೆದ ಶಸ್ತ್ರ ಚಿಕಿತ್ಸೆಯನ್ನು ನೇರವಾಗಿ ಪ್ರಸಾರ ಮಾಡಲಾಯಿತು. ಈ ಶಸ್ತ್ರ ಚಿಕಿತ್ಸೆಯನ್ನು ಖ್ಯಾತ ಯುರಾಲಜಿಸ್ಟ್ಗಳಾದ
ಡಾ. ಸಂಜಯ್ ಕುಲಕರ್ಣಿಯವರು ಅಂತರರಾಷ್ಟ್ರೀಯ ಖ್ಯಾತಿ ಹೊಂದಿದ್ದು ಸುಮಾರು ೫೦ ದೇಶಗಳಲ್ಲಿ ತಮ್ಮ ಶಸ್ತ್ರ ಚಿಕಿತ್ಸೆಯನ್ನು ನೇರವಾಗಿ (ಲೈವ್) ನಡೆಸಿಕೊಟ್ಟಿರುತ್ತಾರೆ. ಇವರ ಜೊತೆಗೆ ಡಾ.ದೀಪಕ್ ದುಬೆ ಹಾಗೂ ಡಾ. ಪ್ರಮೋದ್ಕೃಷ್ಣಪ್ಪ, ದೆಹಲಿಯ ಡಾ. ಹೇಮಂತ್ಗೋಯಲ್ ಹಾಗೂ ಡಾ. ಗೌತಮ್ಭಂಗ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು. ಈ ಶಸ್ತ್ರ ಚಿಕಿತ್ಸೆಯ ಉಪಯೋಗವನ್ನು ಕರ್ನಾಟಕ ರಾಜ್ಯಾದ್ಯಂತ ಯುರಾಲಜಿಸ್ಟ್ಗಳು ಪಡೆದುಕೊಂಡಿದ್ದಾರೆ.
ಕಾರ್ಯಾಗಾರದಲ್ಲಿ ಡಾ. ರಂಗನಾಥ್ ಎಂ.ಎಸ್, ಡಾ.ನರೇಂದ್ರ ಜೆ.ಬಿ, ಡಾ.ಪ್ರಕಾಶ್ ಹೆಚ್.ಎಸ್, ಡಾ. ಪ್ರಸಾದ್ ಹೆಚ್.ಎಲ್, ಮೈಸೋಗಸ್ನ ಅಧ್ಯಕ್ಷರಾದ ಡಾ. ದಿನೇಶ್ಕುಮಾರ್ ಟಿ.ಪಿ, ಡಾ.ಕಿರಣ್ಕುಮಾರ್ ಡಾ.ಸಚಿನ್ ಧಾರವಾಡ್ಕರ್, ಡಾ. ಮಾದಪ್ಪ, ಡಾ. ಪ್ರಕಾಶ್ ಪ್ರಭು, ಡಾ. ಜೇವಿಯರ್ ಡಿಸೋಜ, ಡಾ. ಅಮೃತ್ ರಾಜ್ಗೌಡ, ಡಾ. ಹಿಮಾಮಣಿ ಎಸ್. ಉಪಸ್ಥಿತರಿದ್ದರು.