ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಭಾರತ ಸರ್ಕಾರದ ಸಾಮರ್ಥ್ಯ ನಿರ್ಮಾಣ ಆಯೋಗದಿಂದ ಸಂಯೋಜಿಸಲ್ಪಟ್ಟ ಮಿಷನ್ ರೈಲ್ ಕರ್ಮ ಯೋಗಿ ಅಡಿಯಲ್ಲಿ ಸುಮಾರು 620 ಮುಂಚೂಣಿ ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶ ಹೊಂದಿದ್ದು ಅದರಂತೆ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ತರಬೇತಿ ನೀಡುತ್ತಿದೆ.
ಉದ್ಯೋಗಿಗಳ ವೈಯಕ್ತಿಕ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ತರಬೇತಿಯನ್ನು ಹಮ್ಮಿಕೊಂಡಿದ್ದು, ಮುಂಚೂಣಿಯ ಸಿಬ್ಬಂದಿಗೆ ಮೈಸೂರು, ಅರಸೀಕೆರೆ, ಸಕಲೇಶಪುರ ಮತ್ತು ಚಿಕ್ಕಜಾಜೂರು ನಿಲ್ದಾಣಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಸಾರ್ವಜನಿಕರೊಂದಿಗೆ ನೇರಸಂವಹ ನನಡೆಸುವ ಟಿಕೆಟ್ ನಿರೀಕ್ಷಕರು, ಬುಕಿಂಗ್ ಮತ್ತ ಮೀಸಲಾತಿ ಸಿಬ್ಬಂದಿ ಸೇರಿದಂತೆ ಸ್ಟೇಷನ್ ಮಾಸ್ಟರ್ಗಳು ಮತ್ತುವಾಣಿಜ್ಯ ಸಿಬ್ಬಂದಿಗೆ ವಿವಿಧ ಬ್ಯಾಚ್ಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇಲ್ಲಿಯವರೆಗೆ 400 ಉದ್ಯೋಗಿಗಳು 9 ವಿವಿಧ ಬ್ಯಾಚ್ಗಳಲ್ಲಿ ಈ ತರಬೇತಿಯನ್ನು ಪಡೆದಿದ್ದಾರೆ ಮತ್ತು ಉಳಿದ 200 ಉದ್ಯೋಗಿಗಳು ತಿಂಗಳಾಂತ್ಯಕ್ಕೆ ಇದನ್ನು ಪೂರ್ಣಗೊಳಿಸಲಿದ್ದಾರೆ.
ತರಬೇತಿಯ ಮೂಲಕ ಮುಂಚೂಣಿ ಸಿಬ್ಬಂದಿಯ ದೃಷ್ಟಿಕೋನವನ್ನು ಪರಿವರ್ತಿಸುವುದನ್ನು ಒಳಗೊಂಡಿರುತ್ತದೆ. ನಾಗರಿಕ-ಕೇಂದ್ರಿತ ತರಬೇತಿಯನ್ನು ಒದಗಿಸುವ ಮೂಲಕ ಸೇವೆ ಮಾಡುವ ಉದ್ದೇಶದಿಂದ ಅವರನ್ನು ಸಜ್ಜುಗೊಳಿಸುವುದು ಮತ್ತು ಎರಡನೆಯದಾಗಿ, ಅವರ ಸೇವೆಯ ಸಾಮರ್ಥ್ಯವನ್ನುನಿರ್ಮಿಸುವುದು ಮತ್ತು ಹೆಚ್ಚಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಈ ನಡುವೆ ಅಭಿವೃದ್ಧಿ ತಜ್ಞ, ಸಾರ್ವಜನಿಕ ನೀತಿವಿಶ್ಲೇಷಕ, ನಾಯಕತ್ವ ತರಬೇತುದಾರ, ಲೇಖಕ ಮತ್ತು ದೇಶಾದ್ಯಂತ ಮಿಷನ್ ಕರ್ಮಯೋಗಿ ತರಬೇತಿಯನ್ನು ಮುನ್ನಡೆಸುತ್ತಿರುವ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವಸಂಪನ್ಮೂಲಸದಸ್ಯ ಡಾ. ಆರ್. ಬಾಲಸುಬ್ರಮಣ್ಯಂ ಅವರು ಮೈಸೂರಿನ ಅಶೋಕಪುರಂನಲ್ಲಿರುವ ನೈಋತ್ಯ ರೈಲ್ವೆಯ ತರಬೇತಿ ಸಂಸ್ಥೆಗೆ ಭೇಟಿ ನೀಡಿ, ಪ್ರಶಿಕ್ಷಣಾರ್ಥಿ ಗಳೊಂದಿಗೆ ಸಂವಾದ ನಡೆಸಿದ್ದಾರೆ.
ವಿಭಾಗೀಯ ರೈಲ್ವೇ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ಅವರ ನೇತೃತ್ವದಲ್ಲಿ ಮೈಸೂರು ವಿಭಾಗದ ಮುಂಚೂಣಿ ಸಿಬ್ಬಂದಿಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮೈಸೂರು ವಿಭಾಗದ ಪ್ರಯತ್ನಗಳನ್ನು ಶ್ಲಾಘಿಸಿದರು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಿಬ್ಬಂದಿಯಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸಿದ ಅವರು ತಮ್ಮದೈನಂದಿನ ಜೀವನದಲ್ಲಿ ಸೇವಾಭಾವವನ್ನು ತುಂಬಲು ನೌಕರರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ರೈಲ್ವೇ ವ್ಯವಸ್ಥಾಪಕ ರಾಹುಲ್ ಅಗರ್ವಾಲ್, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ದೇವಸಹಾಯಂ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ್ ಕನಮಡಿ, ಹಿರಿಯ ವಿಭಾಗೀಯ ಕಾರ್ಮಿಕ ಶಾಖೆಯ ಅಧಿಕಾರಿ ಪ್ರಶಾಂತ್ ಮಸ್ತಿಹೊಳಿ, ಸಹಾಯಕ ವಾಣಿಜ್ಯ ವ್ಯವಸ್ಥಾಪಕ ನೈನಿರಂಗನಾಥರೆಡ್ಡಿ ಇದ್ದರು.