ಮೈಸೂರು: ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಹಯೋಗದಲ್ಲಿ ಜೂನ್ 18 ರಂದು ಬೆಳಗ್ಗೆ 9.30ಕ್ಕೆ ಪೋಲ್ಡ್ ಸ್ಕೋಪ್ ಬಳಸುವ ಬಗ್ಗೆ ಕಾರ್ಯಾಗಾರವನ್ನು ಶ್ರೀರಾಂಪುರದ ಲಿಂಗಾಬುಧಿಕೆರೆಯಲ್ಲಿ ಮೂರು ಗಂಟೆಗಳ ಅವಧಿಯ ತರಬೇತಿಯನ್ನು ಹಮ್ಮಿಕೊಂಡಿದೆ.
ತರಬೇತಿಯಲ್ಲಿ ಫೋಲ್ಡ್ ಸ್ಕೋಪ್ ಮೂಲಕ ಪರಿಸರವನ್ನು ಗಮನಿಸಿ ಅಧ್ಯಯನ ನಡೆಸುವ ಕುರಿತಂತೆ ಮಾಹಿತಿ ನೀಡಲಾಗುತ್ತದೆ. ಈ ತರಬೇತಿಗೆ ಮೊದಲ ಆದ್ಯತೆಯನ್ನು ೨೫ ವರ್ಷ ಮೇಲ್ಪಟ್ಟ ವಯಸ್ಕರಿಗೆ ನೀಡಲಾಗುವುದು. ಈ ಮೂಲಕ ಜನವಿಜ್ಞಾನವನ್ನು ಉತ್ತೇಜಿಸುವುದು ಈ ಕಾರ್ಯಾಗಾರದ ಗುರಿಯಾಗಿದೆ.
ಭಾಗವಹಿಸುವವರಲ್ಲಿ ಮೊದಲ ಇಪ್ಪತ್ತು ಜನರಿಗೆ ಉಚಿತವಾಗಿ ಪೋಲ್ಡ್ ಸ್ಕೋಪ್ ನೀಡಲಾಗುವುದು. ಸಂಪನ್ಮೂಲ ವ್ಯಕ್ತಿಗಳು ಹಿರಿಯ ವಿಜ್ಞಾನಿ ಮತ್ತು ವಿಜ್ಞಾನ ಸಂವಹನಕಾರರಾದ ಕೊಳ್ಳೇಗಾಲ ಶರ್ಮ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಹೆಚ್ಚಿನ ವಿವರಗಳಿಗೆ 9538867392, +91 97393 02610, 9482270323 ನ್ನು ಸಂಪರ್ಕಿಸಬಹುದು.