News Kannada
Friday, September 29 2023
ಮೈಸೂರು

ಮೈಸೂರಿನಲ್ಲಿ ಗಮನ ಸೆಳೆಯುತ್ತಿರುವ ಮೋದಿಯ ಮರಳು ಶಿಲ್ಪಗಳು

Untitled 2 Recovered Recovered Recovered 40
Photo Credit :

ಮೈಸೂರು: ನಗರದಿಂದ ಚಾಮುಂಡಿಬೆಟ್ಟಕ್ಕೆ ತೆರಳುವ ರಸ್ತೆಯ ಕೆಸಿ ಲೇಔಟ್ ನಲ್ಲಿರುವ ಮರಳು ಮ್ಯೂಸಿಯಂಗೆ ಈಗ ಹೊಸ ಕಳೆ ಬಂದಿದೆ. ಕಾರಣ ಮೈಸೂರಿನಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಅವರ ವಿವಿಧ ಯೋಗದ ಭಂಗಿಯನ್ನು ಮರಳಿನಲ್ಲಿ ನಿರ್ಮಿಸಲಾಗಿದೆ.

ಇದು ಈಗ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನಸೆಳೆಯುತ್ತಿದೆ. ಇದನ್ನು ಮರಳು ಶಿಲ್ಪ ಕಲಾವಿದೆ ಎಂ.ಎನ್. ಗೌರಿ ಅವರು ನಿರ್ಮಿಸಿದ್ದು, ತಮ್ಮ ಮ್ಯೂಸಿಯಂನಲ್ಲಿರುವ ನೂರಾರು ಕಲಾಕೃತಿಗಳ ನಡುವೆ ಗಮನಸೆಳೆಯುತ್ತಿದೆ. ಮೋದಿ ಅವರು ಮೈಸೂರಿಗೆ ಆಗಮಿಸಿ ಯೋಗದಲ್ಲಿ ಗಮನಸೆಳೆಯುತ್ತಿರುವುದು ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುತ್ತಿದೆ. ಇದೀಗ ಮರಳಿನ ಅವರ ಶಿಲ್ಪಗಳು ಅಭಿಮಾನಗಳು ಹುಬ್ಬೇರಿಸುವಂತೆ ಮಾಡಿದೆ.

ಹಾಗೆನೋಡಿದರೆ ಮೈಸೂರು ಯೋಗ ವಿಷಯದಲ್ಲಿ ದೇಶ ವಿದೇಶಗಳ ಜನರ ಗಮನ ಸೆಳೆದಿದೆ. ಯೋಗ ಕಲಿಯಲೆಂದೇ ದೇಶ ವಿದೇಶಗಳಿಂದ ಜನ ಇಲ್ಲಿಗೆ ಬರುತ್ತಾರೆ. ಹೀಗಾಗಿ ದೂರದಿಂದ ಬರುವ ಪ್ರವಾಸಿಗರಿಗೆ ಯೋಗದ ಪರಿಚಯ ಮಾಡಿಕೊಡುವ ಕೆಲಸವನ್ನು ಕಲಾವಿದೆ ಗೌರಿ ಅವರು ಮಾಡಿದ್ದಾರೆ. ಸದ್ಯ ಮೋದಿ ಅವರು ವಿವಿಧ ಭಂಗಿಗಳಲ್ಲಿ ಯೋಗಾಸನ ಮಾಡುತ್ತಿರುವ ಮರಳಿನ ಶಿಲ್ಪಗಳು ಸುಂದರವಾಗಿ ಮೂಡಿ ಬಂದಿದ್ದು, ಅವರ ಶ್ರಮವನ್ನು ಮೆಚ್ಚಿ ಜನ ಅಭಿನಂದನೆಗಳ ಸುರಿಮಳೆಗೈಯ್ಯುತ್ತಿದ್ದಾರೆ.

See also  ಸಂತ ಅಲೋಶಿಯಸ್ ಕಾಲೇಜು ಕೋಟೆಕಾರ್ ಕ್ಯಾಂಪಸ್ ನಲ್ಲಿ ರಕ್ತದಾನ ಶಿಬಿರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು