News Kannada
Wednesday, September 28 2022

ಮೈಸೂರು

ಸರಗೂರು: ಮಳೆಗೆ ಕುಸಿದು ಬಿದ್ದ ಎರಡು ಮನೆಗಳು - 1 min read

Two houses collapse due to rain
Photo Credit : By Author

ಸರಗೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಎರಡು ಮನೆಗಳು ಕುಸಿದು ಬಿದ್ದಿರುವ ಘಟನೆ ತಾಲೂಕಿನ ಹಳೆಯೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಹಳೆಯೂರು ಗ್ರಾಮದ ನಿವಾಸಿ ಚಿಕ್ಕಮ್ಮ ಎಂಬುವರಿಗೆ ಸೇರಿದ ಮನೆ ಕುಸಿದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮನೆಯಲ್ಲಿದ್ದ ದಿನಬಳಕೆ ವಸ್ತುಗಳು  ಸಾಕಷ್ಟು  ನಾಶವಾಗಿದೆ.

ಈ ಸಂಬಂಧ ಮನೆ ಮಾಲೀಕರಾದ ಚಿಕ್ಕಮ್ಮ ಮಾತನಾಡಿ, ನಾವು ಬಡವರಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಮಳೆಯಿಂದಾಗಿ ನಮ್ಮ ಮನೆ ಕುಸಿದಿದೆ, ನಮಗೆ ವಾಸಿಸಲು ಮನೆ ಇಲ್ಲ. ಹಾಗಾಗಿ ಸರ್ಕಾರ ನಮಗೆ ಸೂರು ಕಟ್ಟಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಹಳೆಯೂರು ಗ್ರಾಮದ ನಿವಾಸಿ ಜವರಯ್ಯ ಎಂಬುವರಿಗೆ ಸೇರಿದ ಮನೆ ಕುಸಿದಿದ್ದು, ಮನೆಯಲ್ಲಿದ್ದ ಕೆಲವು  ವಸ್ತುಗಳು ನಾಶವಾಗಿವೆ. ಆದರೆ ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ಮನೆ ಮಾಲೀಕ ಜವರಯ್ಯ ಮಾತನಾಡಿ ಮಳೆಯಿಂದಾಗಿ ನಮ್ಮಮನೆ ಕುಸಿದಿದೆ. ನಾವು ವಾಸ ಮಾಡಲು ಮನೆ ಇಲ್ಲದ್ದರಿಂದ ಸರ್ಕಾರ ನಮಗೆ ಸೂರು ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಮನೆ ಕುಸಿದಿರುವ ಸ್ಥಳಕ್ಕೆ   ಗ್ರಾಮಲೆಕ್ಕಿಗರಾದ ಹೇಮಂತ್ ರವರು ಮತ್ತು ಸಿಬ್ಬಂದಿ ವರ್ಗ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

See also  ಇನ್ಮುಂದೆ ಮಂಗಳವಾರವೂ ಮೃಗಾಲಯಕ್ಕೆ ಪ್ರವೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು