News Kannada
Thursday, September 29 2022

ಮೈಸೂರು

ಮೈಸೂರು: ಗೋಪಾಲಗೌಡ ಆಸ್ಪತ್ರೆಯಲ್ಲಿ ಉಚಿತ  ಆರೋಗ್ಯ ತಪಾಸಣೆ ಶಿಬಿರ - 1 min read

Free health check-up camp at Gopalagowda Hospital
Photo Credit : By Author

ಮೈಸೂರು: ಮೈಸೂರಿನ ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ ವತಿಯಿಂದ ಡಿಸೆಂಬರ್ ಒಳಗೆ 10ಸಾವಿರ ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ನ್ಯೂರೋಜೋನ್ ಮುಖ್ಯಸ್ಥರಾದ ಡಾ. ಹೆಚ್.ವಿ. ಸುಶ್ರುತ್ ತಿಳಿಸಿದರು.

ಮೈಸೂರು ತಾಲ್ಲೂಕು ಮಂಡಕಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್ ಡಾ. ವಿಷ್ಣುಮೂರ್ತಿ ರೇಖಾ ಟ್ರಸ್ಟ್ ಹಾಗೂ ಕರುಣಾ ಟ್ರಸ್ಟ್ ವತಿಯಿಂದ ಥಾರ್ ಪ್ರಾಜೆಕ್ಟ್ ಯೋಜನೆಯಡಿ ಸೇವಾದೃಷ್ಟಿಯಿಂದ ಗ್ರಾಮೀಣಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಿದ್ದು, ಈಗಾಗಲೇ ವೀರಾಜಪೇಟೆ, ಸೋಮವಾರಪೇಟೆ, ಹುಣಸೂರು, ಕಡಕೊಳ, ಸಿಂಧುವಳ್ಳಿಗಳಲ್ಲಿ ಉಚಿತ ಆರೋಗ್ಯ ತಪಾಸಣೆಗಳನ್ನು ನಡೆಸಿದ್ದು, ಪ್ರಾರಂಭವಾದ ಎರಡೂವರೆ ತಿಂಗಳಲ್ಲಿ 1500 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಒಂದು ವರ್ಷದವರೆಗೆ ರೋಗಿಗಳಿಗೆ ಫೋನ್ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

12 ಜನ ನುರಿತ ತಜ್ಞ ವೈದ್ಯರು ಸೇರಿದಂತೆ ೩೫ ಜನರ ತಂಡ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಚಿತವಾಗಿ ಔಷಧಿಯನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮೈಸೂರಿನ 25 ಸ್ಲಂಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುವುಇದು ಎಂದು ಹೇಳಿದ ಅವರು ಗ್ರಾಮೀಣ ಭಾಗದ ಜನರಲ್ಲಿ ಬಿ.ಪಿ. ಮತ್ತು ಸಕ್ಕರೆ ಖಾಯಿಲೆ ಹೆಚ್ಚಾಗಿ ಕಂಡು ಬರುತ್ತಿದ್ದು, ಜನರು ಉದಾಸೀನ ಮಾಡದೆ ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ  ಮಾಡಿದರು.

ಈ ಸಂದರ್ಭದಲ್ಲಿ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಮಾರ್ಬಳ್ಳಿ ಕುಮಾರ್, ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್‌ನ ಆಡಳಿತಾಧಿಕಾರಿ ಧನ್ಯಾಸುಶ್ರೂತ  ಹಾಜರಿದ್ದರು.

See also  ಸುತ್ತೂರು ಮಠಕ್ಕೆ ಶಾಸಕ ಬಿ.ಸಿ.ಪಾಟೀಲ್ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು