ಮೈಸೂರು: ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ವಿಶ್ವಬಸವ ಜಯಂತಿ ಕಾರ್ಯಕ್ರಮಕ್ಕೆ ವಿದೇಶಗಳಿಂದ ವಚನ ಗಾಯನವನ್ನು ಅಂತರ್ಜಾಲದ ಮೂಲಕ ಆಹ್ವಾನಿಸಲಾಗಿತ್ತು.
ಕರ್ನಾಟಕದಿಂದ ವಿದೇಶಕ್ಕೆ ಹೋಗಿ ನೆಲೆಸಿರುವ ಕನ್ನಡಿಗರು ವಚನಗಳನ್ನು ಹಾಡಿ ಹಾಗೂ ನೃತ್ಯ ಮಾಡಿ ಕಳುಹಿಸಿಕೊಟ್ಟರು. ಬಹ್ರೇನ್, ಕೆನಡಾ, ಇಟಲಿ, ಅಮೇರಿಕಾ, ಐರ್ಲೆಂಡ್, ನ್ಯೂಜಿಲೆಂಡ್, ಮಸ್ಕತ್ ಮತ್ತು ಆಸ್ಟ್ರೇಲಿಯಾಗಳಲ್ಲಿ ನೆಲೆಸಿರುವ ಕನ್ನಡಿಗರು ವಚನ ವಾಚನ, ಗಾಯನ ಮತ್ತು ಶರಣರ ಬಗ್ಗೆ ಕವಿತೆಗಳನ್ನು ಕಳುಹಿಸಿಕೊಟ್ಟರು.
ಆದರೆ ಇಟಲಿಯ ಪ್ರಜೆಗಿಯನ್ನಾಗಿ ರಾಲ್ಡಿ ಕನ್ನಡವನ್ನು ಕಲಿತು ಸುಶ್ರಾವ್ಯವಾಗಿ ಅಕ್ಕಮಹಾದೇವಿಯವರ ಬೆಟ್ಟದ ಮೇಲೊಂದು ಮನೆಯ ಮಾಡಿ ಎಂಬ ವಚನವನ್ನು ಹಾಡಿ ಕಳುಹಿಸಿರುವುದು ನಮಗೆ ಅತೀವ ಸಂತಸವನ್ನು ತಂದಿದೆ. ಅವರ ಗಾಯನವನ್ನು ಯೂಟ್ಯೂಬ್ ಮತ್ತು ಫೇಸ್‌ಬುಕ್ ಅಂತರ್ಜಾಲದ ಮಾಧ್ಯಮಗಳಲ್ಲಿ ಹಾಕಿದ್ದು ಸಾವಿರಾರು ಜನ ವೀಕ್ಷಿಸಿದ್ದು, ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿದೇಶಿಗರೂ ಕೂಡಾ ಕನ್ನಡದ ವಚನ ಸಾಹಿತ್ಯವನ್ನು ಅಪ್ಪಿಕೊಳ್ಳುತ್ತಿರುವುದು ಕನ್ನಡಿಗರಾದ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕಾದ ವಿಷಯ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ತಿಳಿಸಿದ್ದಾರೆ. https://youtu.be/3xEfk41vJqA ಈ ಲಿಂಕ್ ಪ್ರೆಸ್ ಮಾಡಿಯೂ ಟ್ಯೂಬ್ ನಲ್ಲಿ ರಾಲ್ಡಿರವರ ವಚನ ಗಾಯನವನ್ನು ವೀಕ್ಷಿಸಬಹುದು.