News Kannada
Wednesday, September 27 2023
ಮೈಸೂರು

ಮೈಸೂರು: ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಸಂಭ್ರಮ

Dasara cultural celebrations at Palace premises
Photo Credit : By Author

ಮೈಸೂರು: ದಸರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಅರಮನೆ ವೇದಿಕೆಯಲ್ಲಿ ಸೆ.26ರಿಂದ ಅ.3 ರವರೆಗೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಸೆ.26ರಂದು ಸಂಜೆ 5:30 ರಿಂದ 6 ಗಂಟೆಯವರೆಗೆ ನಾದಸ್ವರ ಯದುನಾಥ್ ಮತ್ತು ಗುರುರಾಜ್ ತಂಡದವರಿಂದ ವೀರಭದ್ರ ಕುಣಿತ, ಕಿರಾಳು ಮಹೇಶ ಮತ್ತು ತಂಡದವರಿಂದ, ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಮಾಡುವರು. ಸಂಜೆ 7 ರಿಂದ 8 ಗಂಟೆವರೆಗೆ ಅಮೃತ ಭಾರತಿಗೆ ಕನ್ನಡದಾರತಿ ಸಪ್ತಸ್ವರ ಆರ್ಟ್ಸ್ ಮತ್ತು ಕ್ರಿಯೇಷನ್ ಬೆಂಗಳೂರು ತಂಡದಿಂದ ನೃತ್ಯರೂಪಕ, ಸಂಜೆ 8 ರಿಂದ 9:30ರವರೆಗೆ ಹೆಚ್.ಆರ್.ಲೀಲಾವತಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

27ರಂದು ಸಂಜೆ 5.30 ರಿಂದ 6ರವರೆಗೆ ಕಂಸಾಳೆ ಮಹೇಶ್ ಮತ್ತು ತಂಡದಿಂದ ಕಂಸಾಳೆ, 6 ರಿಂದ 7ರವರೆಗೆ ಇಂದೂ ನಾಗರಾಜು ಮತ್ತು ಲಕ್ಷ್ಮೀ ನಾಗರಾಜು ತಂಡದಿಂದ ಭಕ್ತಿ ಸಂಗೀತ, 7ರಿಂದ 8 ಲಯಾಭಿನಯ ಕಲ್ಚರಲ್ ಫೌಂಡೇಷನ್ ಅವರಿಂದ ನೃತ್ಯರೂಪಕ-ಲಲಿತಾರ್ಣವ ಹಾಗೂ 8 ರಿಂದ 9.30ರವರೆಗೆ ವಿದ್ವಾನ್ ಸಂದೀಪ್ ನಾರಾಯಣ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

28ರಂದು ಸಂಜೆ 5.30ರಿಂದ 6 ಗಂಟೆಯವರೆಗೆ ಕರ್ನಾಟಕ ಕಲಾಶ್ರೀ ವಿದ್ವಾನ್ ಸಿ.ರಾಮದಾಸ್ ಅವರಿಂದ ಹಾರ್ಮೋನಿಯಂ, ಸಂಜೆ 6 ರಿಂದ 7 ಪಂಡಿತ ಗಣಪತಿ ಭಟ್ ಹಾಸಣಗಿ ಯಲ್ಲಾಪುರ ಅವರಿಂದ ದಾಸರ ಪದ, ಸಂಜೆ 7 ಗಂಟೆಯಿಂದ 8 ಕರ್ನಾಟಕ ಕಲಾ ಸತ್ಯನಾರಾಯಣರಾಜು ಮತ್ತು ತಂಡದವರಿಂದ ಭರತನಾಟ್ಯ, ಸಂಜೆ 8 ರಿಂದ 9:30 ಗಂಟೆವರೆಗೆ ಉಸ್ತಾದ್ ಫಜಲ್ ಖುರೇಷಿ ಮುಂಬೈ ಅವರಿಂದ ತಬಲ ವಾದನ.

29 ರಂದು ಸಂಜೆ 5.30ರಿಂದ 6ರವರೆಗೆ ಕರ್ನಾಟಿಕ್ ಮತ್ತು ಇಂಗ್ಲಿಷ್ ಬ್ಯಾಂಡ್ ಪೊಲೀಸ್ ಬ್ಯಾಂಡ್, ಸಂಜೆ 6 ರಿಂದ 7 ಗಂಟೆಯವರೆಗೆ ಪಂಡಿತ್ ವೆಂಕಟೇಶ್ ಕುಮಾರ್ ಧಾರವಾಡ ವಚನ ಗಾಯನ, ಸಂಜೆ 7 ರಿಂದ 8ರವರೆಗೆ ಮಧುಲಿತ ಮಹೋಪಾತ್ರ ಮತ್ತು ತಂಡದವರಿಂದ ಓಡಿಸ್ಸಿ ನೃತ್ಯ, ಸಂಜೆ 8 ರಿಂದ 9.30 ಗಂಟೆಯವರೆಗೂ ಚಕ್ರ ಫೋನಿಕ್ಸ್ ತಂಡ ಬೆಂಗಳೂರು, ವಿಶ್ವ ಸಂಗೀತ (ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನ) ಕಾರ್ಯಕ್ರಮ ನಡೆಯಲಿದೆ.

30 ರಂದು ಸಂಜೆ 5.30ರಿಂದ 6 ಗಂಟೆಯವರೆಗೆ ಜ್ಞಾನಮೂರ್ತಿ ಮತ್ತು ತಂಡ ದವರಿಂದ ಭಕ್ತಿ ಸಂಗೀತ, ಸಂಜೆ 6 ರಿಂದ 7 ಗಂಟೆಯವರೆಗೆ ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡ ವಾದ್ಯಗಳಲ್ಲಿ ಒಡೆಯರ ಕೃತಿಗಳು, ಸಂಜೆ 7 ರಿಂದ 8 ಗಂಟೆಯವರೆಗೂ ಕರ್ನಾಟಕ ಕಲಾಶ್ರೀ ರೂಪ ರಾಜೇಶ ಮತ್ತು ತಂಡ ಬೆಂಗಳೂರು ಕೂಚುಪುಡಿ ನೃತ್ಯ, ಸಂಜೆ 8 ರಿಂದ 9.30 ಗಂಟೆಯವರೆಗೂ ವಿಧೂಷಿ ಕೌಶಿಕಿ ಚಕ್ರವರ್ತಿ ಕಲ್ಕತ್ತಾ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮನಸೂರೆಗೊಳ್ಳಲಿದೆ.

ಅ.1 ರಂದು ಪನ್ನಗ ವಿಜಯಕುಮಾರ್, ವೇದವ್ಯಾಸ ಸೇವಾ ಟ್ರಸ್ಟ್‍ನಿಂದ ಜಾನಪದ ಗಾಯನ, ಸಂಜೆ 6 ರಿಂದ 7ಗಂಟೆಯವರೆಗೆ ಟಿ.ಎಸ್.ನಾಗಭರಣ, ಬೆನಕ ತಂಡದಿಂದ ರಂಗಗೀತೆಗಳು, ಸಂಜೆ 7 ರಿಂದ 8 ಗಂಟೆಯವರೆಗೂ ಪೆಲೀಸ್ ಬ್ಯಾಂಡ್ ಮಾಸ್ ಬ್ಯಾಂಡ್, ಸಂಜೆ 8 ರಿಂದ 9.30 ಗಂಟೆಯವರೆಗೂ ಮನೋ ಮ್ಯೂಸಿಕ್ ಲೈನ್ಸ್, ಬೆಂಗಳೂರು ಸಿತಾರ್ ಸಿಂಫೋನಿ ಇರಲಿದೆ.

See also  ಬಂಡೀಪುರದಲ್ಲಿ ಮೂರು ಹುಲಿ ದರ್ಶನ

ಅ.2ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ, ಸಂಜೆ 6 ರಿಂದ 7 ಗಂಟೆಯವರೆಗೆ ಕಂಬದ ರಂಗಯ್ಯ ನೇತೃತ್ವದಲ್ಲಿ ವಿವಿಧ ಕಲಾವಿದರಿಂದ ಜನಪದ ಸಂಗೀತ, ಸಂಜೆ 7 ರಿಂದ 8 ಗಂಟೆಯವರೆಗೂ ಕಿರುತೆರೆ ಕಲಾವಿದರಾದ ರೂಪಿಕ ಮತ್ತು ವಂದನ ಸಾರಥ್ಯದಲ್ಲಿ ನೃತ್ಯರೂಪಕ ನವಶಕ್ತಿ ವೈಭವ, ಸಂಜೆ 8 ರಿಂದ 9.30 ಗಂಟೆಯವರೆಗೂ ಮನೋಜ್ ವಶಿಷ್ಠ ಮತ್ತು ಅರುಂಧತಿ ವಶಿಷ್ಠ ತಂಡದವರಿಂದ ಸಂಗೀತ ವೈವಿಧ್ಯ ಗಮನ ಸೆಳೆಯಲಿದೆ.

ಅ.3ರಂದು ಸಂಜೆ 5:30ರಿಂದ 6 ಗಂಟೆಯವರೆಗೆ ವಿಶೇಷ ವಿಕಲಚೇತನ ಕಲಾವಿದರಿಂದ ಕಾರ್ಯಕ್ರಮ, ಸಂಜೆ 6 ರಿಂದ 7 ಗಂಟೆಯವರೆಗೆ ಗಡುಬಗೆರೆ ಮುನಿರಾಜು ಅವರಿಂದ ಜನಪದ ಸಂಗೀತ, ಸಂಜೆ 7 ರಿಂದ 8 ಗಂಟೆಯವರೆಗೂ ಸ್ಥಳೀಯ ಕಲಾವಿದರಿಂದ ಪಾರಂಪರಿಕ ನೃತ್ಯ ಸಮ್ಮಿಲನ, ಸಂಜೆ 8 ರಿಂದ 9.30 ಗಂಟೆಯವರೆಗೂ ಭಜನ್ ಸಾಮ್ರಾಟ್ ಪದ್ಮಶ್ರೀ ಅನುಪ್ ಜಲೋಟ ಮುಂಬೈ ಅವರಿಂದ ಗಜಲ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು