News Kannada
Friday, December 02 2022

ಮೈಸೂರು

ಮೈಸೂರು: ದಸರಾ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಬಿಡುಗಡೆ

Gold card released for Dasara viewing
Photo Credit : By Author

ಮೈಸೂರು: ನಾಡ ಹಬ್ಬ ದಸರಾ ವೀಕ್ಷಣೆಗಾಗಿ ದೇಶ-ವಿದೇಶಜ ಪ್ರವಾಸಿಗರು, ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಡಳಿತ ಗೋಲ್ಡ್ ಕಾರ್ಡ್ ಸೌಲಭ್ಯ ಬಿಡುಗಡೆ ಮಾಡಿದೆ.

ಗೋಲ್ಡ್ ಕಾರ್ಡ್ ಲಭ್ಯತೆ ಅನುಗುಣವಾಗಿ ಆನ್‌ಲೈನ್ ಮೂಲಕ http://www.mysoredasara.gov.in ಮತ್ತು www.mysoredasara.gov.in ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ. 1 ಗೋಲ್ಡ್ ಕಾರ್ಡ್‌ಗೆ 4999 ರೂ. ದರ ನಿಗದಿ ಮಾಡಲಾಗಿದೆ. ಒಮ್ಮೆ ಆನ್‌ಲೈನ್ ಪಾವತಿ ದೃಢಿಕೃರಿಸಿದ ನಂತರ ಪ್ರವಾಸಿಗರು ಗೋಲ್ಡ್ ಕಾರ್ಡ್ ಅನ್ನು ಸೆ.29 ರಿಂದ ಕೆಎಸ್‌ಡಿಟಿಸಿ ಮಯೂರ ಹೋಟೆಲ್ ಹತ್ತಿರ ಬೆಳಗ್ಗೆ 11ರಿಂದ ಸಂಜೆ 5.30ರವರೆಗೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಗೋಲ್ಡ್ ಕಾರ್ಡ್ ಪಡೆದುಕೊಳ್ಳುವಾಗ ಪಾವತಿ ನಂತರ ಸ್ವೀಕೃತವಾಗುವ ಇಮೇಲ್ ಪ್ರತಿ ಹಾಗೂ ಯಾವುದಾದರೂ ಒಂದು ಐ.ಡಿ.ಪ್ರೂಫ್ ಅನ್ನು ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಗೋಲ್ಡ್ ಕಾರ್ಡ್ ಪಡೆಯುವುದರಿಂದ ದಸರಾ ಮೆರವಣಿಗೆ, ಜಂಬೂ ಸವಾರಿ ವೀಕ್ಷಣೆಗೆ ಅವಕಾಶ, ಪಂಜಿನ ಕವಾಯತು ಬನ್ನಿಮಂಟಪ ವೀಕ್ಷಣೆ, ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡೇಶ್ವರಿ ದೇವಸ್ಥಾನ, ಫಲಪುಪ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನ, ಸೇಂಟ್ ಫಿಲೋಮಿನ ಚರ್ಚ್, ರೈಲ್ವೆ ಮ್ಯೂಸಿಯಂ, ಕೃಷ್ಣರಾಜ ಸಾಗರ ಅಣೆಕಟ್ಟು ಪ್ರವಾಸಿ ತಾಣಗಳಿಗೆ ಉಚಿತವಾಗಿ ಒಮ್ಮೆ ಮಾತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

See also  ರಾಮನಗರ: ಬೆಳೆ ವಿಮೆ ನೋಂದಣಿಗೆ ರೈತರ ನಿರಾಸಕ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು