ನಂಜನಗೂಡು: ಚಾಮರಾಜನಗರ- ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದ ಬಳಿ ಅಪಘಾತಗಳು ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಇಂದು ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಯಾಸ್ಮಿನ್ ತಾಜ್ ಸ್ವತಹ ತಮ್ಮ ಟ್ರಾಫಿಕ್ ಪೋಲಿಸ್ ಸಿಬ್ಬಂದಿಗಳೊಂದಿಗೆ ಅಪಘಾತ ವಲಯದ ನಾಮಫಲಕ, ರಸ್ತೆ ಡಿವೈಡರ್ ಕಂಬಗಳನ್ನು ಅಳವಡಿಸಿದ್ದಾರೆ.
ಗೋಳೂರು ಗ್ರಾಮದ ಬಳಿ ಅಪಘಾತ ಹೆಚ್ಚಾಗಿ ನಡೆದು ಸಾವು ನೋವುಗಳಾಗುತ್ತವೆ. ಗುಂಡಿ ಬಿದ್ದ ರಸ್ತೆ ಹಾಗೂ ರಸ್ತೆಗೆ ತಡೆಗೋಡೆ ನಿರ್ಮಾಣ ಮಾಡಿ ಎಂದು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದಿಸಲಿಲ್ಲ. ಇದರಿಂದ ಬೇಸತ್ತ ಪಿಎಸ್ಐ ಯಾಸ್ಮಿನ್ ತಾಜ್ ರವರು ಸಿಮೆಂಟ್, ಜಲ್ಲಿ ಕಲ್ಲು ತಂದು ಗುಂಡಿ ಮುಚ್ಚಿದಲ್ಲದೆ, ರಸ್ತೆಗಳಲ್ಲಿ 16 ಸ್ಟ್ರಿಕ್ಟ್ ಬೌನ್ಸ್, 9 ಅಪಾಯ ಎಂಬ ನಾಮಫಲಕ ಅಳವಡಿಸಿದ್ದಾರೆ.
ಅಪಘಾತ ವಲಯ ನಿಧಾನವಾಗಿ ಚಲಿಸಿ, ಗೋಳೂರು ಬಳಿ ಸಾಕಷ್ಟು ವಾಹನಗಳು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿವೆ. ತುಂಬಾ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ದಯವಿಟ್ಟು ವಾಹನ ಸವಾರರು ನಿಧಾನವಾಗಿ ಚಲಿಸಬೇಕು, ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಪಿಎಸ್ಐ ಯಾಸ್ಮಿನ್ ತಾಜ್ ರವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.