ನಂಜನಗೂಡು: ಮಗನ ಸಾವಿಗೆ ನ್ಯಾಯ ದೊರಕಿಸಲು ಪೋಲಿಸರು ವಿಫಲರಾಗಿದ್ದರೆಂದು ಆರೋಪಿಸಿ ಪೋಷಕರು ನಂಜನಗೂಡು ನಗರದ ಪಟ್ಟಣ ಪೊಲೀಸ್ ಠಾಣೆಯ ಮುಂದೆ ಇಂದಿನಿಂದ ಉಪವಾಸ ಸತ್ಯಾಗ್ರಹ ಪ್ರತಿಭಟನಾ ಧರಣಿ ನಡೆಸುತ್ತಿದ್ದಾದೆ.
ಮಾಜಿ ಪುರಸಭೆ ಅಧ್ಯಕ್ಷ ಮಹೇಶ್, ಸುಧಾ ಮಹೇಶ್ ದಂಪತಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಂಜನಗೂಡಿನ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಎಂದಿನಂತೆ ಕೆಲಸ ಮುಗಿಸಿ ಬರುತ್ತಿದ್ದ, ತಮ್ಮ ಮಗ ಎನ್ಎಂ.ಪ್ರವೀಣ್ ಅವರಿಗೆ ಹಿಂಬದಿಯಿಂದ ಅಪಘಾತ ಮಾಡಿ ಪರಾರಿಯಾಗಿದ್ದ, ದೀಪಕ್ ಜೈನ್ ಎಂಬ ವ್ಯಕ್ತಿ ಯನ್ನು ಬಂದಿಸಲು ಪೋಲಿಸರು ಎರಡೂವರೆ ವರ್ಷದಿಂದ ವಿಫಲರಾಗಿದ್ದರೆ.
ಯಾವ ಕಾರಣಕ್ಕೆ ಪೋಲಿಸರು ಅಪರಾಧಿಯನ್ನು ಬಂದಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಹಲವಾರು ಬಾರಿ ಸಂಬಂಧಿಸಿದ ಎಲ್ಲರಿಗೂ ದೂರು ನೀಡಿದ್ದರು ಬಂಧಿಸಲಾಗಿಲ್ಲ, ಅಲ್ಲದೆ ಅಪಫಾತ ಸಮಯದಲ್ಲಿ ಕಾರಿನಲ್ಲಿ ಮಾದಕವಸ್ತುಗಳು ಪತ್ತೆಯಾಗಿದ್ದು, ಇದು ಪೋಲಿಸರ ಗಮನಕ್ಕೆ ಬಂದಿದೆ. ಅದರೂ ಕೂಡ ಇದುವರೆಗೆ ನಮಗೆ ನ್ಯಾಯ ದೊರಕದ ಕಾರಣ ,ನ್ಯಾಯ ದೊರಕುವವರೆಗೆ ಪೋಲಿಸ್ ಠಾಣೆ ಮುಂದೆ ಅಹೋ ರಾತ್ರಿ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಪೋಷಕರಾದ ಮಹೇಶ್, ಸುಧಾ ಮಹೇಶ್, ಬಿ,ಜೆ,ಪಿ ಮುಖಂಡ ಸತ್ಯನಾರಾಯಣ ಕದಂ, ಆನಂದ್, ಮಹಾದೇವು, ನಗರಸಭಾ ಸದಸ್ಯೆ ಮಂಗಳಮ್ಮ, ಶ್ರೀಕಂಠೇಶ್ವರ ದೇವಾಲಯ ನೌಕರರ ಸಂಘದ ಅಧ್ಯಕ್ಷ ಶ್ರೀ ಕಂಠ, ನಂದಿನಿ ರವಿಚಂದ್ರ, ಸೇರಿದಂತೆ ನಂಜನಗೂಡಿನ ಹಲವು ಪ್ರಗತಿಪರರು, ಸಂಘಟನೆಯವರು ಭಾಗವಹಿಸಿದ್ದರು.