ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಜಿ.ಟಿ.ದೇವೇಗೌಡ ಅವರ ಸ್ಥಿರಾಸ್ತಿ 16.59 ಕೋಟಿ,ಚರಾಸ್ತಿ 2.82 ಕೋಟಿ ಹಾಗೂ 9.88 ಕೋಟಿ ಸಾಲವಿದೆ.
ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿ ಪ್ರಕಾರ 73 ವರ್ಷದ ಜಿ.ಟಿ.ದೇವೇಗೌಡ ಅವರ ಕೈಯಲ್ಲಿರುವ 3.16 ಲಕ್ಷ ನಗದು ಇದ್ದು,2021-22ನೇ ಸಾಲಿನ ವಾರ್ಷಿಕ ಆದಾಯ 66.61 ಲಕ್ಷವಾಗಿದೆ. ಪತ್ನಿ ಲಲಿತಾ ಅವರ ಸ್ಥಿರಾಸ್ತಿ 1.8 ಕೋಟಿ, ಚರಾಸ್ತಿ 1.58 ಕೋಟಿ ಇದೆ. ಅವರ ಆದಾಯ 10.27 ಲಕ್ಷ. ಕೈಯಲ್ಲಿರುವ ನಗದು 1 ಲಕ್ಷ.
ಜಿಟಿಡಿ ಬಳಿ 23.95 ಲಕ್ಷ ಮೌಲ್ಯದ ಟೊಯೊಟಾ ಇನ್ನೊವಾ ಕ್ರಿಸ್ಟಾ ಕಾರು, 8 ಸಾವಿರ ಮೌಲ್ಯದ ಕೆನೆಟಿಕ್ ಹೊಂಡಾ ಇದೆ. 2.5 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವಿದೆ. ಪತ್ನಿ ಲಲಿತಾ ಅವರ ಬಳಿ 14.75 ಲಕ್ಷ ಮೌಲ್ಯದ ಇನ್ನೊವಾ ಕಾರು, 10 ಲಕ್ಷ ಮೌಲ್ಯದ 400 ಗ್ರಾಂ ಚಿನ್ನ, 4 ಲಕ್ಷ ಮೌಕ್ಯದ 8 ಕೆ.ಜಿ ಬೆಳ್ಳಿ ಇದೆ.
ಗುಂಗ್ರಾಲ್ ಛತ್ರದಲ್ಲಿ 1.30 ಕೋಟಿ ಮೌಲ್ಯದ 4 ಎಕರೆ 6 ಗುಂಟೆ ಪಿತ್ರಾರ್ಜಿತ ಆಸ್ತಿ, ರಟ್ನಹಳ್ಳಿಯಲ್ಲಿ 1.10 ಕೋಟಿ ಮೌಲ್ಯದ 10 ಎಕರೆ, ಇದೇ ಗ್ರಾಮದಲ್ಲಿ 40 ಲಕ್ಷ ಮೌಲ್ಯದ 2.8 ಎಕರೆ ಕೃಷಿ ಭೂಮಿಯಿದೆ. ಹುಯಿಲಾಳುವಿನಲ್ಲಿ 25 ಲಕ್ಷ ಮೌಲ್ಯ 14 ಗುಂಟೆ, ವಿಜಯನಗರದಲ್ಲಿ 1 ಕೋಟಿ ಮೌಲ್ಯದ ನಿವೇಶನವಿದೆ.
ಮೈಸೂರಿನ ವಿಜಯನಗರ, ಬೆಂಗಳೂರಿನ ಸದಾಶಿವನಗರದಲ್ಲಿ 16.59 ಕೋಟಿ ಮೌಲ್ಯದ ವಾಣಿಜ್ಯ, ವಸತಿ ಕಟ್ಟಡಗಳಿವೆ.