ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರ ನಾಮಪತ್ರ ತಿರಸ್ಕರಿಸುವಂತೆ ರವಿಕುಮಾರ್.ಎಂ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯನವರು 4 ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದು ನಮೂನೆ 26ರಲ್ಲಿ ಶಪಥ ಪತ್ರ ಸಲ್ಲಿಸಿದ್ದಾರೆ.4 ಶಪಥ ಪತ್ರಗಳಲ್ಲೂ ನಮೂನೆ 26 4ಎ ನಮೂನೆ 26ರಲ್ಲಿ ಭಾಗ ಎ ನಲ್ಲಿ 4ನೇ ಅಂಶವಾದ ಪ್ಯಾನ್ ವಿವರ ಮತ್ತು ಆದಾಯ ತೆರಿಗೆ ವಿವರಪಟ್ಟಿ ಕುರಿತು ಯಾವುದೇ ಮಾಹಿತಿ ನೀಡದೆ ಖಾಲಿ ಬಿಟ್ಟಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟಿದ್ದಾರೆ.
ಕಾನೂನು ಬದ್ದವಾಗಿ ಒಂದು ನಾಮಪತ್ರ ತಿರಸ್ಕಾರ ಮಾಡಲು ಇರಬೇಕಾದ ಎಲ್ಲಾ ಅಂಶ ಇವೆ. ಹೀಗಾಗಿ ನಾಮಪತ್ರ ನಮೂನೆ 26 ದೋಷದಿಂದ ಕೂಡಿದ್ದು, ಅಪೂರ್ಣವಾಗಿದೆ. ಚುನಾವಣಾ ಅಧಿಕಾರಿ ಕಾನೂನಿಗೆ ವಿರುದ್ಧವಾಗಿ ಅಂಗಿಕರಿಸಿದ್ದಾರೆ. ಹೀಗಾಗಿ ಕಾನೂನು ಬದ್ದವಾಗಿ ಸಿದ್ದರಾಮಯ್ಯನವರ 4 ನಾಮಪತ್ರಗಳನ್ನು ತಿರಸ್ಕರಿಸಿ ಎಂದು ಅರ್ಜಿ ಸಲ್ಲಿಸಿದ್ದಾರೆ.