
ಮೈಸೂರು: ಕುಮಾರಸ್ವಾಮಿ ತಮ್ಮ ವಿರುದ್ದ ಒಳ ಒಪ್ಪಂದದ ಆರೋಪ ವಿಚಾರಕ್ಕೆ ಇಂದು ತಿರುಗೇಟು ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೋಪಾಲಯ್ಯನಿಗೆ ಟಿಕೆಟ್ ಕೊಟ್ಟವರು ಯಾರು? ಅವರು ಹೇಳಿದ್ದಕ್ಕೆಲ್ಲ ಉತ್ತರ ಕೊಡೋಕೆ ಆಗಲ್ಲ. ಜೆ.ಡಿ.ಎಸ್ ಬಿಜೆಪಿಯವರು 29 ಕ್ಷೇತ್ರಗಳಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಅವರು ಮಾಡಿಕೊಂಡಿರಲಿಲ್ಲ. ನಿನ್ನೆ ನಾನು ಅದನ್ನೆ ಹೇಳಿದ್ದು ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ಹೋಟೆಲ್ ನಲ್ಲಿ ಮೊದಲೆ ರೂಂ ಮಾಡಿಕೊಂಡಿದ್ದ. ನಾನು ಮನೆ ಬಿಟ್ಟಿಲ್ಲ ಎಂಬುದೆಲ್ಲ ಸುಳ್ಳು ಎಂದು ಸಾ.ರಾ.ಮಹೇಶ್ ಅವರಿಗೆ ತಿರುಗೇಟು ನೀಡಿದರು. ನಾನು ಅವರ ಬಗ್ಗೆ ಎಲ್ಲ ಮಾತನಾಡಲ್ಲ. ಕುಮಾರಸ್ವಾಮಿ ಹೋಟೆಲ್ ನಲ್ಲಿ ಉಳಿದಿದ್ದು ನಿಜವೋ ಇಲ್ಲವೋ? ಅದು ನಿಜವಾದ ಮೇಲೆ ಅದರ ಮೇಲೆ ಚರ್ಚೆ ಮಾಡಲು ಏನೂ ಇಲ್ಲ ಎಂದರು.
ಕಾಂಗ್ರೆಸ್ ನವರು ನನ್ನನ್ನು ಸೋಲಿಸಿದ್ರು ಅಂತ ಹೇಳಿದ್ದೆ. ನಾನು ಹೇಳಿದ್ದು ಚಾಮುಂಡೇಶ್ವರಿ ಕ್ಷೇತ್ರದ ಸ್ಥಳೀಯ ಮುಖಂಡರ ಬಗ್ಗೆ. ನಾನು ಯಾರ ಹೆಸರನ್ನೂ ಹೇಳಿಲ್ಲ. ಸ್ಥಳೀಯರ ಬಗ್ಗೆ ಅಷ್ಟೆ ಹೇಳಿದ್ದು ಎಂದರು.
ನಾನು ಜನತಾ ಪರಿವಾರದಲ್ಲಿದ್ದಾಗ 60 ಸೀಟು ಗೆಲ್ಲುತ್ತಿದ್ದೆವು. ಈಗ ಅವರು 29 ಸೀಟಿಗೆ ಬಂದಿದ್ದಾರೆ. ಜೆ.ಡಿ.ಎಸ್ ಬಗ್ಗೆ ನಾನು ಹೇಳುವುದು ಇಷ್ಟೆ ಎಂದರು.