News Kannada
Saturday, February 24 2024
ಮೈಸೂರು

ನಟ ಗಣೇಶ್ ಕಟ್ಟಡ ನಿರ್ಮಾಣಕ್ಕೆ ರೈತ ಸಂಘಟನೆಯಿಂದ ವಿರೋಧ, ಮಾತಿನ ಚಕಮಕಿ

Actor Ganesh's construction of a building has been opposed by farmers' organisations.
Photo Credit : News Kannada

ಗುಂಡ್ಲುಪೇಟೆ: ಬಂಡೀಪುರದ ಸೂಕ್ಷ್ಮ ಪರಿಸರ ವಲಯದಲ್ಲಿ ಚಿತ್ರನಟ ಗಣೇಶ ಬೃಹತ್ ಕಟ್ಟಡ ನಿರ್ಮಾಣ ಮಾಡುವುದನ್ನು ಖಂಡಿಸಿ ಪ್ರತಿಭಟನೆ ಮಾಡಲು ತೆರಳಿದ ರೈತ ಸಂಘಟನೆ ಮುಖಂಡರಿಗೆ ಸ್ಥಳೀಯ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ನಡೆಯಿತು, ಈ ವೇಳೆ ಮಾತಿನ ಚಕಮಕಿ ನಡೆದಿದೆ.

ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಜಕ್ಕಹಳ್ಳಿ ಸರ್ವೇ ನಂ-105 ರಲ್ಲಿ ಚಿತ್ರನಟ ಗಣೇಶ್ ಪಿಲ್ಲರ್ ಬಳಸಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕೆ ಅರಣ್ಯ ಇಲಾಖೆ ತಡೆಯೊಡ್ಡಿ ಕಾಮಗಾರಿ ಸ್ಥಗಿತಗೊಳಿಸಿತ್ತು. ನಂತರ ಹೈಕೋರ್ಟ್ ಮೆಟ್ಟಿಲೇರಿದ ಗಣೇಶ ಅರಣ್ಯ ಇಲಾಖೆ ನಿಯಮಾನುಸಾರ ಕಟ್ಟಡ ಕಟ್ಟಲು ಅನುಮತಿ ತಂದಿದ್ದರು. ಈ ಮಧ್ಯೆ ಘಟನೆ ಖಂಡಿಸಿ ರೈತ ಸಂಘಟನೆ ಮುಖಂಡರು ಕಟ್ಟಡ ನಿರ್ಮಾಣ ಸ್ಥಳಕ್ಕೆ ತೆರಳಿ ಪ್ರತಿಭಟನೆಗೆ ಮುಂದಾದರು. ಇದರಿಂದ ಆಕ್ರೋಶಗೊಂಡ ಜಕ್ಕಹಳ್ಳಿ, ಮಂಗಲ, ಎಲಚೆಟ್ಟಿ ಗ್ರಾಮಸ್ಥರು ಘೇರವ್ ಹಾಕಿ ಸ್ಥಳಕ್ಕೆ ಹೋಗದಂತೆ ತಡೆದರು.

ಈ ವೇಳೆ ಜಕ್ಕಹಳ್ಳಿ, ಮಂಗಲ, ಎಲಚೆಟ್ಟಿ ಗ್ರಾಮಸ್ಥರು, ನಮಗೆ ಈ ಕಟ್ಟಡ ನಿರ್ಮಾಣದಿಂದ ಯಾವುದೇ ತೊಂದರೆಯಾಗುತ್ತಿಲ್ಲ. ಇಲ್ಲಿನ ರೈತರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಏನಾದರೂ ನಿಮಗೆ ಮನವಿ ಮಾಡಿದ್ದಾರೆಯೇ? ನಮಗೆ ತೊಂದರೆ ಆದರೆ ನಮ್ಮ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತೇವೆ, ನಿಮ್ಮ ಅವಶ್ಯಕತೆ ನಮಗಿಲ್ಲ. ನೀವು ಜಾಗ ವೀಕ್ಷಣೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು