News Kannada
Friday, March 01 2024
ಚಾಮರಾಜನಗರ

ಗುಂಡ್ಲುಪೇಟೆ ಕ್ವಾರಿ ಕುಸಿತ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವುದು ಖಚಿತ

Photo Credit :

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿ ಬಿಳಿಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವುದು ಖಚಿತವಾಗಿದೆ.ಇಬ್ಬರ ದೇಹ ನಜ್ಜು ಗುಜ್ಜಾಗಿರುವ ಹಿಟಾಚಿಗಳಲ್ಲಿ ಸಿಲುಕಿಕೊಂಡಿರುವುದನ್ನು ಗುರುತಿಸಿದ್ದಾರೆ. ಒಂದು ಹಿಟಾಚಿಯಿಂದ ಶವವನ್ನು ಹೊರ ತೆಗೆಯುವ ಕಾರ್ಯ‌ ನಡೆಯುತ್ತಿದೆ.

ಮಣ್ಣು ಬಂಡೆಗಳ ಅಡಿಯಲ್ಲಿ ಎರಡು ಶವ ಸಿಲುಕಿರುವುದನ್ನು ಎನ್ ಡಿಆರ್ ಎಫ್, ಎಸ್ ಡಿಆರ್ ಎಅಫ್ ಸಿಬ್ಬಂದಿ ಖಚಿತಪಡಿಸಿದ್ದಾರೆ.

ಉತ್ತರ ಪ್ರದೇಶದ ಗೋರಖ್ ಪುರದ ಹಜೀಂ ಉಲ್ಲ (24), ಮಿರಾಜ್ (28) ಹಾಗೂ ಸರ್ಫ್ ರಾಜ್ (18) ಅವರು ಮಣ್ಣಿನ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಜೀಂ ಉಲ್ಲಾ ಹಾಗೂ ಮಿರಾಜ್ ಅವರು ಹಿಟಾಚಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಸರ್ಫರಾಜ್ ಅವರು ಸಹಾಯಕರಾಗಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ಬೆಳಿಗ್ಗೆ 6.30ಗೆ ಕಾರ್ಯಾಚರಣೆ ಆರಂಭವಾಗಿದೆ. ಎನ್ ಡಿಆರ್ ಎಫ್ ನ 20, ಎಸ್ ಡಿಆರ್ ಎಫ್ ನ 20 ಹಾಗೂ ಅಗ್ನಿಶಾಮಕ ದಳದ 15 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು