News Kannada
Monday, December 05 2022

ಚಾಮರಾಜನಗರ

ಪ್ರವಾಸಿ ತಾಣಗಳತ್ತ ಲಗ್ಗೆ ಇಡುತ್ತಿರುವ ಪ್ರವಾಸಿಗರು

Photo Credit :

ಚಾಮರಾಜನಗರ ;  ಕೊರೊನಾ ನಂತರ ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಎಲ್ಲಾ ಕಂಪನಿಗಳು ಅನುಸರಿಸುತ್ತಿವೆ.ಅದೇ ಕಾರಣದಿಂದ ಯಾವುದೇ ಮನೆಯಲ್ಲೆ ಕುಳಿತು ಕೆಲಸ ಮಾಡುವವರ ಬದಲಾವಣೆ ಅನಿವಾರ್ಯವಾಗಿದೆ. ತಮ್ಮ ಫ್ಯಾಮಿಲಿ ಮತ್ತೆ ಗೆಳೆಯರ ಜೊತೆ ಪ್ರವಾಸಿತಾಣಗಳಿಗೆ‌‌ ಲಗ್ಗೆ ಇಡುತ್ತಿದ್ದಾರೆ.ಹಚ್ಚ ಹಸಿರಾದ ಅರಣ್ಯ ಪ್ರದೇಶದಲ್ಲಿ ಮುಂಜಾನೆ ವೇಳೆ ಸಫಾರಿ ಹೊರಟ್ರೆ ಮನಸ್ಸು ಮುದಗೊಳ್ಳುತ್ತೆ. 800 ಬಗೆಯ ಗಿಡಮರಗಳ ವೀಕ್ಷಣೆ, 27 ಬಗೆಯ ಸಸ್ತನಿಗಳು, 260ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು, 22 ಬಗೆಯ ಸರಿಸೃಪಗಳು ಪ್ರವಾಸಿಗರನ್ನ ಆಕರ್ಷಿಸುತ್ತಿವೆ. ಜೊತೆಗೆ ಸಫಾರಿ ಮತ್ತು ಪ್ರಯಾಣದ ವೇಳೆ ಆನೆ, ಹುಲಿ, ಕರಡಿ, ಜಿಂಕೆ, ಕಾಡೆಮ್ಮೆಗಳು ಕಾಣ ಸಿಗುತ್ತವೆ. ಇದೇ ಕಾರಣಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸ್ತಿದ್ದಾರೆ.

ಕೆ.ಗುಡಿ ನಿಸರ್ಗ ಪ್ರವಾಸಿ ತಾಣಕ್ಕೆ ಮತ್ತಷ್ಟು ಮೆರಗು, ವೀಕ್ಎಂಡ್​ನಲ್ಲಿ ಹೆಚ್ಚಾಗುತ್ತಿದೆ ಪ್ರವಾಸಿಗರ ದಂಡು
ಚಾಮರಾಜನಗರ  ಜಿಲ್ಲೆಯ ಬಿಳಿಗಿರಿ ರಂಗನಾಥ ಬೆಟ್ಟದ ಕೆ.ಗುಡಿ. ಬಿಳಿಗಿರಿ ರಂಗನಾಥ ಬೆಟ್ಟ ಧಾರ್ಮಿಕ ಕೇಂದ್ರವಾದ್ರೆ, ಕೆ.ಗುಡಿ ನಿಸರ್ಗ ಪ್ರವಾಸಿ ತಾಣ. ನಿತ್ಯ ಹಾಗೂ ಅರೆ ನಿತ್ಯ ಹರಿದ್ವರ್ಣ ಸಸ್ಯ ಸಂಕುಲಗಳ ಆಗರ. ಹೀಗಾಗಿಯೇ ಇಲ್ಲಿಗೆ ಪ್ರವಾಸಿಗರು ಆಗಮಿಸಿ ಕಾಲ ಕಳೀತ್ತಿದ್ದಾರೆ. ಇಲ್ಲಿನ ಅರಣ್ಯ ಪ್ರದೇಶಕ್ಕೆ ಎಂಟ್ರಿ ಕೊಡ್ತಿದ್ದಂತೆ ಹಚ್ಚ ಹಸಿರಾದ ಕುರುಚಲು ಕಾಡುಗಳು ಕಾಮಾನಿನಂತೆ ಬಾಗಿ ಸ್ವಾಗತ ಕೋರುತ್ತವೆ. ಬಳಿಕ ಕೆ.ಗುಡಿ ಹತ್ತಿರವಾಗುತ್ತಿದ್ದಂತೆ ಬೆಟ್ಟಗಳು ಕಣ್ಮನ ಸೆಳೆಯುತ್ತವೆ. ಹೀಗೆ ಚಾಮರಾಜನಗರದಿಂದ 35 ಕಿಲೋಮೀಟರ್ ಹೋಗುತ್ತಿದ್ದಂತೆ ಸಿಗುವ ಕೆ.ಗುಡಿ ಮಕ್ಕಳ ಅಚ್ಚು ಮೆಚ್ಚಿನ ಹಾಟ್ ಸ್ಪಾಟ್. ಆನೆ ಶಿಬಿರವೂ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಇವುಗಳ ಮಧ್ಯೆ ಕೆ.ಗುಡಿಯಲ್ಲಿ ಅರಣ್ಯ ಇಲಾಖೆ ಸಫಾರಿ ವ್ಯವಸ್ಥೆ ಮಾಡಿದ್ದು, ವೀಕ್ಎಂಡ್ ವೇಳೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಅದು ಕೂಡ ವೀಕ್ಎಂಡ್ ತೆರವಾಗ್ತಿದ್ದಂತೆ ಪ್ರವಾಸಿಗರ ಸಂಖ್ಯೆ ಡಬಲ್ ಆಗ್ತಿದೆ.

 

 

See also  ಚಾಮರಾಜನಗರ ಡಿಸಿ ಎಂ.ಆರ್.ರ" ವರ್ಗಾವಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು