News Kannada
Tuesday, November 29 2022

ಚಾಮರಾಜನಗರ

ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಗಾಂಜಾ ವಶ - 1 min read

Photo Credit :

ಚಾಮರಾಜನಗರ: ಜಮೀನಿನಲ್ಲಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪಡಸಲನತ್ತ ಗ್ರಾಮದಲ್ಲಿ ನಡೆದಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಲೆಮಹದೇಶ್ವರ ಬೆಟ್ಟದ ಸಮೀಪದ ಪಡಸಲನತ್ತ ಗ್ರಾಮದ ಈರಣ್ಣ (45) ಮತ್ತು ಹುಚ್ಚಯ್ಯ ತಮ್ಮಡಿ (40) ಎಂಬವರೇ ಬಂಧಿತ ಆರೋಪಿಗಳು. ಈ ಆರೋಪಿಗಳು  ತಮ್ಮ ಗ್ರಾಮದ  ಜಮೀನಿನಿನಲ್ಲಿ ಗಾಂಜಾವನ್ನು  ಬೆಳೆದಿದ್ದರು.

ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸರಾ ಥಾಮಸ್ ಹಾಗೂ ಎಎಸ್ಪಿ ಸುಂದರರಾಜು, ಡಿವೈಎಸ್ಪಿ ನಾಗರಾಜು ಅವರ ಸೂಚನೆಯ ಮೇರೆಗೆ ಮಲೆಮಹದೇಶ್ವರಬೆಟ್ಟ ಪೊಲೀಸ್ ಠಾಣೆಯ ಬಸವರಾಜು ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದ್ದಾರೆ.

ಈ ವೇಳೆ ಈರಣ್ಣ ಅವರ ಜಮೀನಿನಲ್ಲಿ 2.5 ಕೆಜಿ ಹಾಗೂ ಹುಚ್ಚಯ್ಯ ತಬ್ಬಡಿ ಅವರ ಜಮೀನಿನಲ್ಲಿ 3 ಕೆ.ಜಿ ತೂಕದ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಗಾಂಜಾ ಗಿಡಗಳು ಸುಮಾರು 32 ಸಾವಿರ ರೂ ಮೌಲವ್ಯವನ್ನು ಹೊಂದಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಳಿಯಲ್ಲಿ ಪೊಲೀಸ್ ಮುಖ್ಯ ಪೇದೆಗಳಾದ ಅಸ್ಲಂಪಾಷ, ವಿಶ್ವನಾಥ್, ಪರಶಿವಸ್ವಾಮಿ, ಬಸವರಾಜೇಂದ್ರ ಹಾಗೂ ಇನ್ನಿತರರು ಭಾಗವಹಿಸಿದ್ದರು.

See also  ಚಾಮರಾಜನಗರದಲ್ಲಿ ಅಪ್ರಾಪ್ತೆ ಗರ್ಭಿಣಿಯಾದ ಪ್ರಕರಣ ಬೆಳಕಿಗೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು