News Kannada
Tuesday, October 04 2022

ಚಾಮರಾಜನಗರ

ಭರದಿಂದ ಸಾಗಿದ ಮಹದೇಶ್ವರ ಬೆಟ್ಟದ ಬೆಳ್ಳಿ ರಥದ ನಿರ್ಮಾಣ ಕಾರ್ಯ - 1 min read

Photo Credit :

ಚಾಮರಾಜನಗರ: ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ರಥ ನಿರ್ಮಾಣ ಕಾರ್ಯ ಶೇ 20 ರಷ್ಟು ಮುಗಿದಿದ್ದು ಶೀಘ್ರವೇ ಪೂರ್ಣಗೊಳಿಸುವ ಕಾರ್ಯದಲ್ಲಿ ಕೆಲಸಗಾರರು ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿ ರಥ ನಿರ್ಮಾಣ ಕಾರ್ಯ ನಡೆಯುತ್ತಿದ್ದು ನುರಿತ ತಂತ್ರಜ್ಞರಿಂದ ಬೆಳ್ಳಿ ರಥಕ್ಕೆ ಬೆಳ್ಳಿ ಕವಚ ಅಳವಡಿಸುವ ಕಾರ್ಯ ನಡೆಯುತ್ತಿದೆ, ರಥಕ್ಕೆ ಬೇಕಾಗುವ ರೂಪದಲ್ಲಿ ಬೆಳ್ಳಿ ಕವಚವನ್ನು ಸ್ಥಳದಲ್ಲೇ ಬಿಗಿ ಬಂದೂ ಬಸ್ತ್ ನೊಂದಿಗೆ ತಯಾರು ಮಾಡಲಾಗುತ್ತಿದ್ದು, ಕಟ್ಟೆಚ್ಚರದಲ್ಲಿ ಕೆಲಸ ಕಾರ್ಯ ನಡೆಯುತ್ತಿರುವುದು ಕಂಡು ಬರುತ್ತಿದೆ.

ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವನಸ್ವಾಮಿ ನೇತೃತ್ವದಲ್ಲಿ ಬೆಳ್ಳಿ ರಥದ ಕೆಲಸ ಕಾರ್ಯದ ಬಗ್ಗೆ ವೀಕ್ಷಣೆ ಮತ್ತು ಪರಿಶೀಲನೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ದಿನಗಳಲ್ಲಿ ಬೆಳ್ಳಿ ರಥ ನಿರ್ಮಾಣ ಬಹುಬೇಗ ಮುಗಿಯಲಿದೆ.

See also  ಚಾಮರಾಜನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು