News Kannada
Friday, October 07 2022

ಚಾಮರಾಜನಗರ

ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ - 1 min read

Photo Credit :

ಚಾಮರಾಜನಗರ: ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕಾದ ಗುಂಡ್ಲುಪೇಟೆ ಪಟ್ಟಣದ ವಿದ್ಯಾರ್ಥಿ ನಿಲಯ ಕಟ್ಟಡ ಅಪೂರ್ಣವಾಗಿ ನಿಂತ ಕಾರಣ ಪುಂಡಪೋಕರಿಗಳ ಅಡ್ಡೆಯಾಗಿದೆ.

ಚಾಮರಾಜನಗರದ ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ಬಡವರೇ ಹೆಚ್ಚಿದ್ದು, ಮೂಲ ಸೌಕರ್ಯದ ಕೊರತೆ ಜತೆಗೆ ವಿದ್ಯಾಭ್ಯಾಸ ಮಾಡಲು ಹತ್ತಿರದಲ್ಲಿ ಶಾಲಾ ಕಾಲೇಜುಗಳಿಲ್ಲದೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಹೀಗಿರುವಾಗ ಸುಸಜ್ಜಿತವಾದ ಕಟ್ಟಡದ ವಿದ್ಯಾರ್ಥಿನಿಲಯ ಆದಷ್ಟು ಬೇಗ ಆಗಲಿ ಎಂದು ಜನ ಬಯಸಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿ ನಿಲಯದ ಕಾಮಗಾರಿ ನಡೆಯದೆ ಅರ್ಧಕ್ಕೆ ನಿಂತ ಕಾಮಗಾರಿಯಿಂದ ಸರ್ಕಾರದ ಉದ್ದೇಶ ನೀರು ಪಾಲಾಗಿದ್ದು, ಅರ್ಧಕ್ಕೆ ಕಾಮಗಾರಿ ನಿಂತ ಕಟ್ಟಡವೀಗ ಪಾಳು ಬಿದ್ದಂತೆ ಗೋಚರಿಸುತ್ತಿದ್ದು, ಅನೈತಿಕ ಚಟುವಟಿಕೆಗೆ ಕೇಂದ್ರವಾಗುತ್ತಿರುವುದು ಎದ್ದು ಕಾಣುತ್ತಿದೆ.

ಇನ್ನು ಈ ಕಟ್ಟಡದ ನಿರ್ಮಾಣದ ಕುರಿತಂತೆ ಮಾಹಿತಿ ಕಲೆ ಹಾಕುತ್ತಾ ಹೋದರೆ ಸಮಾಜ ಕಲ್ಯಾಣ ಇಲಾಖೆಯು ಮಕ್ಕಳ ಹಿತದೃಷ್ಟಿಯಿಂದ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಮುಂದಾಗಿತ್ತು. ಕಟ್ಟಡದ ಕಾಮಗಾರಿಯನ್ನು 3.15 ಕೋಟಿ ರೂ ಅಂದಾಜು ವೆಚ್ಚದಲ್ಲಿ ಆರಂಭಿಸಲಾಗಿತ್ತು.

ಕಾಮಗಾರಿಗೆ ಆರಂಭಿಸುವಾಗ ತೋರಿದ ಕಾಳಜಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ತನಕ ಇಲ್ಲದೆ ಇರುವುದು ಕಾಮಗಾರಿ ಸಂಪೂರ್ಣವಾಗದಿರಲು ಕಾರಣ ಎನ್ನಲಾಗುತ್ತಿದೆ. ಇನ್ನು ಕಟ್ಟಡ ಕಾಮಗಾರಿ ಗುಣಮಟ್ಟವಿಲ್ಲ ಎನ್ನುವ ಕಾರಣಕ್ಕೆ ಟೆಂಡರ್ ಪಡೆದಿರುವ ಸಂಸ್ಥೆಯು ಗುತ್ತಿಗೆದಾರರನ್ನು ಕೈ ಬಿಟ್ಟಿತು. ಇದರಿಂದ ವಿದ್ಯಾರ್ಥಿ ನಿಲಯದ ಕಾಮಗಾರಿ ಪೂರ್ಣವಾಗಲೇ ಇಲ್ಲ ಎನ್ನಲಾಗಿದೆ.  ಕಾಮಗಾರಿಯನ್ನು ಮುಗಿಸಿ ನಿಗದಿತ ಸಮಯಕ್ಕೆ ಇಲಾಖೆಗೆ ಒಪ್ಪಿಸದ ಕಾರಣ ಜತೆಗೆ ಕಾಮಗಾರಿ ನಿಂತು ಹೋಗಿರುವ ಕುರಿತಂತೆ ಗುಂಡ್ಲುಪೇಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಎನ್. ನಂಜುಂಡೇಗೌಡ ಅವರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದು ಮಾಹಿತಿ ನೀಡಿದ್ದರೂ ಇದುವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಹೊರಬಂದಿಲ್ಲ. ಜತೆಗೆ ಕಾಮಗಾರಿಯೂ ಆರಂಭವಾಗಿಲ್ಲ ಎನ್ನಲಾಗಿದೆ.

ಇನ್ನಾದರೂ ಸ್ಥಳೀಯ ಶಾಸಕರಾದ ನಿರಂಜನಕುಮಾರ್ ಸೇರಿದಂತೆ ಜಿಲ್ಲಾಡಳಿತ ಇತ್ತ ಗಮನಹರಿಸಿ ಅಪೂರ್ಣಗೊಂಡಿರುವ ಕಟ್ಟಡಕ್ಕೊಂದು ಮುಕ್ತಿ ನೀಡುತ್ತಾರಾ ಕಾದು ನೋಡಬೇಕಿದೆ.

See also  ಬೇಬಿ ಬೆಟ್ಟದಲ್ಲಿ ಅದ್ಧೂರಿ ರಥೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು