News Kannada
Friday, September 30 2022

ಚಾಮರಾಜನಗರ

ಚಾಮರಾಜನಗರ: ಗುಡ್ಡ ಕುಸಿತಕ್ಕೆ ಆರು ಕಾರ್ಮಿಕರು ಬಲಿ! - 1 min read

Photo Credit : News Kannada

ಚಾಮರಾಜನಗರ: ಕರ್ನಾಟಕ ಕೇರಳ ಹೆದ್ದಾರಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಿರುವ ಮಡಹಳ್ಳಿ ಗುಮ್ಮನಗುಡ್ಡ ಕುಸಿದ ಪರಿಣಾಮ ಬಿಳಿಕಲ್ಲು ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಮಂದಿ ಕಾರ್ಮಿಕರು   ಬಂಡೆಗಳಡಿಯಲ್ಲಿ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು,  ಹಲವಾರು ಮಂದಿಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ  ದಾಖಲಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಗ್ರಾಮದ ಗುಮ್ಮನಗುಡ್ಡದಲ್ಲಿ ಶುಕ್ರವಾರ ಪೂರ್ವಾಹ್ನ ಗುಡ್ಡ ಕುಸಿದ ಪರಿಣಾಮ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ  ಎನ್ನಲಾಗಿದ್ದು ಹಲವಾರು ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ಮಹೇಂದ್ರ ರವರಿಗೆ ಸೇರಿದ ಕಲ್ಲುಗಣಿಯಲ್ಲಿ ಕೇರಳದ ಹಕೀಂ ರವರು ಸಬ್ ಲೀಸ್ ಪಡೆದು  ಗಣಿಗಾರಿಕೆ ನಡೆಸುತ್ತಿದ್ದರು.

ಹಲವಾರು ವರ್ಷಗಳಿಂದ ಗುಮ್ಮನಗುಡ್ಡದಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಕಳೆದ ವರ್ಷ ಗಣಿಗಾರಿಕೆ ಮಿತಿ ಮೀರಿದಾಗ ಮಡಹಳ್ಳಿ ಗ್ರಾಮಸ್ಥರು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಆದರೆ ಇಂದು  ಸಂಭವಿಸಿದ ದುರಂತವಾದರೂ ಗಣಿಗಾರಿಕೆ ನಿಲ್ಲಲು ನೆರವಾದೀತೇನೋ?

ಮಡಹಳ್ಳಿ ಗುಮ್ಮನಗುಡ್ಡ ಬಿಳಿಕಲ್ಲು ಗಣಿಗಾರಿಕೆ ದುರಂತ ಸ್ಥಳಕ್ಕೆ ಭೇಟಿಕೊಟ್ಟ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಮಾಹಿತಿ ಕಲೆ ಹಾಕಿ ಮಾತನಾಡಿ, ಬಿಳಿಕಲ್ಲು ಗಣಿಗಾರಿಕೆ ವೇಳೆ ಬಂಡೆಕಲ್ಲುಗಳಿರುವ ಗುಡ್ಡ ಕುಸಿತಗೊಂಡ ಹಿನ್ನಲೆ ಟಿಪ್ಪರ್,  ಟ್ರ್ಯಾಕ್ಟರ್, ಹಿಟಾಚಿಗಳೆಲ್ಲವೂ ನಾಶವಾಗಿದೆ. ಇದರಲ್ಲಿ ಇದ್ದ ಕಾರ್ಮಿಕರು ಬಂಡೆಯಡಿ ಸಿಲುಕಿದ್ದಾರೆ ಎನ್ನಲಾಗುತ್ತಿದ್ದು, ಬಹುತೇಕ ನೆರೆ ಜಿಲ್ಲೆಯ ಕಾರ್ಮಿಕರೇ ಆಗಿದ್ದಾರೆ ಎನ್ನಲಾಗಿದೆ.

ಗ್ರಾಮಸ್ಥರು ಹೇಳುವಂತೆ ಪ್ರಕೃತಿ ವಿರುದ್ದವಾಗಿ ಯಾವುದೇ ಕೆಲಸ ಕಾರ್ಯ ಮಾಡಿದರೆ ಪ್ರಕೃತಿಯೇ ಪಾಠ ಕಲಿಸಲಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದು, ಶ್ರೀಮಂತರ ಅಟ್ಟಹಾಸಕ್ಕೆ ಪ್ರಕೃತಿಯ ಒಡಲು ಬಗೆದು ವಿನಾಶ ಮಾಡಿದಕ್ಕೆ ಕಾರ್ಮಿಕರ ಪ್ರಾಣ ಬಲಿಯಾಯಿತು. ಈ ಬಗ್ಗೆ ಸರ್ಕಾರ ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕಾಗಿದೆ.

ಮಡಹಳ್ಳಿ ಗುಡ್ಡದಲ್ಲಿ ಕುಸಿದು ಬಿದ್ದಿರುವ ಭಾರೀ ಪ್ರಮಾಣದ ಬಂಡೆ ಕಲ್ಲುಗಳನ್ನು ತೆರವುಗೊಳಿಸಲು ಎನ್ ಡಿ ಆರ್ ಆರ್  ತಂಡವನ್ನು ಬೆಂಗಳೂರಿನಿಂದ ಬರ ಮಾಡಿಕೊಂಡ ಬಳಿಕ ಬಂಡೆಗಳ ತೆರವು ಕಾರ್ಯ ಕೈಗೊಳ್ಳಲು ತೀರ್ಮಾನಿಸಿದರು.

ಕುಸಿದು ಬಿದ್ದಿರುವ ಭಾರಿ ಬಂಡೆಗಳನ್ನು ತೆರವುಗೊಳಿಸಿದ ಬಳಿಕವಷ್ಟೆ ಸಾವಿನ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ಶನಿವಾರ ಬೆಳಗ್ಗೆಯಿಂದ ಬಂಡೆಗಳನ್ನು ಎನ್ ಡಿ ಆರ್ ಎಫ್ ತಂಡದವರ ನೆರವಿನಿಂದ ತೆರವುಗೊಳಿಸುವ ಕಾರ್ಯ ಕೈಗೊಳ್ಳಲಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಮೈಸೂರು ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಶ್ವೇಶ್ವರಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಆಗಮಿಸಿ   ಸ್ಥಳವನ್ನು ವೀಕ್ಷಿಸಿದರು.

See also  ಚಾಮರಾಜನಗರ ಮೆಡಿಕಲ್ ಕಾಲೇಜ್ ನಲ್ಲಿ ಲೈಂಗಿಕ ಕಿರುಕುಳ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು