News Kannada
Wednesday, December 07 2022

ಚಾಮರಾಜನಗರ

ಮಾದಪ್ಪನ ಹುಂಡಿಯಲ್ಲಿ 2 ಕೋಟಿ ಸಂಗ್ರಹ

Photo Credit :

ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದ ಮಾಯಕಾರ  ಮಾದಪ್ಪ 34 ದಿನಗಳಲ್ಲಿ ಮತ್ತೆ  ಎರಡು ಕೋಟಿ ಒಡೆಯನಾಗಿ ಸಾಹುಕಾರ ಮಾದಪ್ಪನಾಗಿದ್ದಾನೆ.

ಮಹದೇಶ್ವರ ಬೆಟ್ಟದ ಹುಂಡಿ ಏಣಿಕೆ ಕಾರ್ಯ ಬಿಗಿ ಬಂದೋಬಸ್ತ್ನಲ್ಲಿ ತಡರಾತ್ರಿ ತನಕ ನಡೆಯಿತು. ಇದೇ ವೇಳೆ 34ದಿನಗಳಲ್ಲಿ    2 ಕೋಟಿ 57 ಲಕ್ಷದ 25 ಸಾವಿರ 859 ರೂಪಾಯಿಗಳ ಸಂಗ್ರಹವಾಗಿದೆ.

ಕಾಣಿಕೆ ಹಣದೊಂದಿಗೆ 127 ಗ್ರಾಂ ಚಿನ್ನಾಭರಣ, 3 ಕೆಜಿ 447 ಗ್ರಾಂ ಬೆಳ್ಳಿ ಪದಾರ್ಥಗಳ ಸಂಗ್ರಹವಾಗಿದೆ. ನಿತ್ಯದ ವಿವಿಧ ಸೇವೆಗಳನ್ನು ಹೊರತುಪಡಿಸಿ ಹುಂಡಿಯಲ್ಲೇ ಎರಡೂವರೆ ಕೋಟಿ ರೂ. ಆದಾಯ ಬಂದಿದೆ.

ಕೊರೊನಾ ಬಳಿಕ ಭಕ್ತಸಾಗರವೇ ಬೆಟ್ಟಕ್ಕೆ ಹರಿದು ಬರುತ್ತಿದೆ. ವಾರಾಂತ್ಯ ಹಾಗೂ ಸೋಮವಾರದಂದು ಚಿನ್ನದ ರಥ ಸೇವೆ ಮಾಡಲು ಕಿಕ್ಕಿರಿದು ಭಕ್ತರು ಸೇರುತ್ತಿದ್ದಾರೆ ಎಂದು ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

See also  ಚಿರತೆ ದಾಳಿಗೆ ಹಸು ಬಲಿ: ರೈತರಲ್ಲಿ ಆತಂಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು