News Kannada
Sunday, February 05 2023

ಚಾಮರಾಜನಗರ

ಜಾತ್ರೆಯಲ್ಲಿ ರಥಕ್ಕೆ ಸಿಲುಕಿ ಓರ್ವ ಸಾವು ಇಬ್ಬರ ಸ್ಥಿತಿ ಗಂಭೀರ

Photo Credit :

ಚಾಮರಾಜನಗರ : ತೇರು ಎಳೆಯುವಾಗ ನೂಕು ನುಗ್ಗಲು ಉಂಟಾಗಿ ರಥದ ಚಕ್ರ ಹರಿದು ಓರ್ವ ಮೃತಪಟ್ಟಿದ್ರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮ ಸಮೀಪದ ಪಾರ್ವತಿ ಬೆಟ್ಟದಲ್ಲಿ ಸಂಭವಿಸಿದೆ.

ಪಾರ್ವಾತಾಂಭ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಕಂದೇಗಾಲ ಗ್ರಾಮದ ಆಕಾಶ್ @ಸರ್ಪ(27) ಮೃತರು.

ಜಾತ್ರೆಯಲ್ಲಿ ರಥ ಹರಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
ಸ್ವಾಮಿ(40) ಹಾಗೂ ಕೊಡಸೋಗೆ ಗ್ರಾಮದ ಕರಿನಾಯ್ಕ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ನಡೆದ ಜಾತ್ರೆಯಲ್ಲಿ ರಥವು 100 ಮೀಟರ್​ ಚಲಿಸುತ್ತಿದ್ದಾಗಲೇ ನೂಕುನುಗ್ಗಲು ಉಂಟಾಗಿ ಈ ಮೂವರು ರಥದ ಚಕ್ರಕ್ಕೆ ಸಿಲುಕಿದರು ಎನ್ನಲಾಗ್ತಿದೆ.

ಈ ಮೂವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಓರ್ವ ಮೃತಪಟ್ಟಿದ್ದಾರೆ. ಗಾಯಗೊಂಡವರ ಕಾಲು, ತೊಡೆ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ‌. ಪೊಲೀಸ್ ಬಂದೋಬಸ್ತ್ ವಿಫಲವಾಗಿರುವ ಆರೋಪವೂ ಕೇಳಿ ಬಂದಿದೆ.

See also  ತಾಯಿ-ಮಗಳ ಹತ್ಯೆಗೈಯ್ಯಲೆತ್ನಿಸಿದ್ದ ವ್ಯಕ್ತಿಯ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು