News Kannada
Monday, January 30 2023

ಚಾಮರಾಜನಗರ

ಫ್ಲೆಕ್ಸ್ ತೆರವು: ಆಲತ್ತೂರಲ್ಲಿ ಉದ್ರಿಕ್ತ ವಾತಾವರಣ

Photo Credit :

ಚಾಮರಾಜನಗರ:  ಫ್ಲೆಕ್ಸ್ ತೆರವು ವಿಚಾರಕ್ಕೆ ಎರಡು ಜನಾಂಗದ ನಡುವೆ ಗಲಾಟೆ ನಡೆದು ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಆಲತ್ತೂರು ಗ್ರಾಮದಲ್ಲಿ ಮೂರು ದಿನದ ಹಿಂದೆ ವೀರಶೈವ ಜನಾಂಗದಿಂದ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಕಾರ್ಯಕ್ರಮಕ್ಕಾಗಿ  ಗ್ರಾಮದಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಆದರೆ ವೀರಶೈವ ಲಿಂಗಾಯತ ಬೀದಿಯಲ್ಲಿ ಫ್ಲೆಕ್ಸ್ ತೆರವು ಮಾಡುವಾಗ  ಎರಡು ಜನಾಂಗದವರ ನಡುವೆ ಗಲಾಟೆ ಆರಂಭಗೊಂಡಿತು.  ವಿಷಯ ತಿಳಿದ ಕೂಡಲೇ  ಅಕ್ಕಪಕ್ಕದ ನೂರಾರು ಜನರು ಆಲತ್ತೂರು  ಗ್ರಾಮಕ್ಕೆ ಆಗಮಿಸಿ ಪ್ರತಿಭಟನೆ  ನಡೆಸಿದರು.

ಈ ವೇಳೆ ಎರಡು ಗುಂಪುಗಳು ನಡುವೆ ಜಗಳ ವಿಕೋಪಕ್ಕೆ ತೆರಳಿ ಕೈ ಕೈ ಮಿಲಾಯಿಸುವ ಹಂತಕ್ಕೆ  ತಲುಪಿತ್ತು. ಈ ಸಂದರ್ಭದಲ್ಲಿ ಡಿವೈಎಸ್ ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಪರಿಸ್ಥಿತಿ ಶಾಂತಗೊಳಿಸಿ,  ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್  ವ್ಯವಸ್ಥೆ ಮಾಡಿದ್ದರು.

ಶಾಂತಿ ಸಭೆ: ಆಲತ್ತೂರು ಗ್ರಾಮದಲ್ಲಿ ನಡೆದ ಫ್ಲೆಕ್ಸ್ ತೆರವು ಹಿನ್ನಲೆ ಉಂಟಾಗಿದ್ದ ಘಟನೆಗೆ ಸಂಬಂಧಿಸಿದಂತೆ ತಾಲೂಕು ತಹಸೀಲ್ದಾರ್ ರವರ ಸಭಾಂಗಣದಲ್ಲಿ ತಹಸೀಲ್ದಾರ್ ರವಿಶಂಕರ್ ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ಎರಡು ಸಮೂದಾಯದ ಮುಖಂಡರ ಶಾಂತಿ ಸಭೆ ನಡೆಸಿ ಪ್ರಕರಣಕ್ಕೆ ತೆರೆ ಎಳೆಯಲಾಯಿತು. ಆದರೂ ಪ್ರಕರಣ ಬೂದಿ ಮುಚ್ಚಿದ ಕೆಂಡದಂತಿದೆ.

See also  ಮೇಲುಕೋಟೆಯಿಂದ ಬೋಗಾದಿಗೆ ಬಸ್ ವ್ಯವಸ್ಥೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು