News Kannada
Friday, September 30 2022

ಚಾಮರಾಜನಗರ

ಚಾಮರಾಜನಗರ: ಸಿಡಿಲು ಬಡಿದು ಕುರಿ ಸಹಿತ ರೈತ ಸಾವು - 1 min read

Chamarajanagar: Farmer killed in lightning strike along with sheep
Photo Credit : By Author

ಚಾಮರಾಜನಗರ: ಭಾರೀ ಮಳೆಯ ಜತೆಗೆ ಸಿಡಿಲು ಬಡಿದ ಪರಿಣಾಮ ಆರು ಕುರಿಗಳ ಸಹಿತ ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹನೂರು ತಾಲೂಕಿನ ಮಿಣ್ಯಂ ಗ್ರಾಮದ ತೋಟದವೊಂದರಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮಿಣ್ಯಂ ಗ್ರಾಮದ ತೋಟದ ಮಾದಪ್ಪ (64) ಎಂಬುವರೇ ಸಿಡಿಲು ಬಡಿದು ಸಾವನ್ನಪ್ಪಿದ ದುರ್ದೈವಿ. ಇವರಿಗೆ ಸೇರಿದ ಆರು ಕುರಿಗಳು ಸಾವನ್ನಪ್ಪಿವೆ.

ರೈತ ಮಾದಪ್ಪ ಅವರು ತೋಟದ ಮನೆಯಲ್ಲಿ ವಾಸವಿದ್ದು ಎಂದಿನಂತೆ ಕುರಿಗಳನ್ನು ಮೇಯಿಸುತ್ತಿದ್ದರು. ಮಂಗಳವಾರ ಸಂಜೆ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಗುಡುಗು ಸಹಿತ ಮಳೆ ಬಂದಿದ್ದು, ಇದೇ ವೇಳೆ ಬಡಿದ ಸಿಡಿಲಿಗೆ ಮಾದಪ್ಪ ಮತ್ತು ಆರು ಕುರಿಗಳು ಸಾವನ್ನಪ್ಪಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸಂಬಂಧಿಕರು ಸೂಕ್ತ ಪರಿಹಾರ ನಿಡುವಂತೆ ಒತ್ತಾಯಿಸಿದ್ದಾರೆ.

ಲೊಕ್ಕನಹಳ್ಳಿ ಹೋಬಳಿಯ ರಾಜಸ್ವ ನಿರೀಕ್ಷಕ ಮಾದೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

See also  ಮತ್ತೊಬ್ಬ ಸಚಿವ ರಾಜೀನಾಮೆ ಕೊಡಲಿದ್ದಾರೆ; ಧ್ರುವನಾರಾಯಣ ಭವಿಷ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು